ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು-ಬಂಗಾಳ ರಾಜ್ಯಪಾಲ
x

ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು-ಬಂಗಾಳ ರಾಜ್ಯಪಾಲ


ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ತಮ್ಮ ಮೇಲೆ ತೃಣಮೂಲ ಕಾಂಗ್ರೆಸ್ ಹೊರಿಸಿರುವ ಲೈಂಗಿಕ ದೌರ್ಜನ್ಯದ ಆರೋಪವನ್ನು ನಿರಾಕರಿಸಿದ್ದಾರೆ.

ರಾಜಭವನದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಬೋಸ್ ವಿರುದ್ಧ ಕಿರುಕುಳದ ಆರೋಪವನ್ನು ಮಾಡಿದ್ದಾರೆ ಎಂದು ಟಿಎಂಸಿ ನಾಯಕರು ಬುಧವಾರ ಹೇಳಿದ್ದರು.

ʻಸತ್ಯಕ್ಕೆ ಜಯ ಸಿಗುತ್ತದೆ. ಕಲ್ಪಿತ ನಿರೂಪಣೆಗಳಿಂದ ಭಯಪಡುವುದಿಲ್ಲ. ನನ್ನನ್ನು ನಿಂದಿಸುವ ಮೂಲಕ ಚುನಾವಣೆ ಲಾಭವನ್ನು ಪಡೆದುಕೊಳ್ಳಲು ಬಯಸಿದರೆ, ದೇವರು ಅವರನ್ನು ಆಶೀರ್ವದಿಸಲಿ. ಆದರೆ, ಬಂಗಾಳದಲ್ಲಿ ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧದ ನನ್ನ ಹೋರಾಟವನ್ನು ತಡೆಯಲು ಅವರಿಂದ ಸಾಧ್ಯವಿಲ್ಲʼ ಎಂದು ಬೋಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ದೌರ್ಜನ್ಯ' ಖಂಡನೆ: ಬೋಸ್‌ ಅವರಿಂದ ಕಿರುಕುಳಕ್ಕೊಳಗಾದ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ದೂರು ದಾಖಲಿಸಲಾಗಿದೆ ಎಂದು ಟಿಎಂಸಿ ಹೇಳಿದೆ.

ʻದೂರು ಸ್ವೀಕರಿಸಿ, ತನಿಖೆ ನಡೆಸುತ್ತಿದ್ದೇವೆ. ಕಾನೂನು ಇಲಾಖೆಯ ಸಾಂವಿಧಾನಿಕ ತಜ್ಞರೊಂದಿಗೆ ಈ ಬಗ್ಗೆ ಸಮಾಲೋಚಿಸುತ್ತಿದ್ದೇವೆ. ರಾಜಭವನದಲ್ಲಿ ತನಗೆ ಕಿರುಕುಳ ನೀಡಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆʼ ಎಂದು ಕೇಂದ್ರ ವಿಭಾಗದ ಉಪ ಆಯುಕ್ತೆ ಇಂದಿರಾ ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದರು.

ಘಟನೆ ಬಗ್ಗೆ ಟಿಎಂಸಿ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.ʻಬಂಗಾಳದ ಗವರ್ನರ್ ಸಿ.ವಿ. ಆನಂದ ಬೋಸ್ ಅವ ರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ. ದೂರು ದಾಖಲಿಸಿದ ಮಹಿಳೆಯನ್ನು ಹರೇ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆಘಾತಕಾರಿ ಮತ್ತು ಅಪಮಾನಕರʼ ಎಂದು ಟಿಎಂಸಿ ರಾಜ್ಯಸಭೆ ಸದಸ್ಯೆ ಸಾಗರಿಕಾ ಘೋಸ್ ಹೇಳಿದ್ದಾರೆ. ಟಿಎಂಸಿ ಸಂಸದ ಸಾಕೇತ್ ಗೋಖಲೆ ಕೂಡ ಎಕ್ಸ್‌ ನಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿ ಪಂಜಾ ಮಾತನಾಡಿ, ʻರಾಜ್ಯಪಾಲರು ತಮ್ಮ ಹುದ್ದೆಯನ್ನು ಅವಹೇಳ ನ ಮಾಡಿದ್ದಾರೆ. ಇದೇ ರಾಜ್ಯಪಾಲರು ಮಹಿಳಾ ಹಕ್ಕುಗಳು ಮತ್ತು ನಾರಿ ಶಕ್ತಿ ಬಗ್ಗೆ ಮಾತನಾಡಲು ಸಂದೇಶಖಾಲಿಗೆ ತೆರಳಿದ್ದರು. ಮಹಿಳೆಗೆ ಖಾಯಂ ಉದ್ಯೋಗ ನೀಡುವ ನೆಪದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿರುವುದು ನಾಚಿಕೆಗೇಡಿನ ಸಂಗತಿ. ನಾಳೆ ಬಂಗಾಳದಲ್ಲಿ ಸಭೆಗಳಲ್ಲಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಬೇಕೆಂದು ನಾವು ಬಯಸುತ್ತೇವೆʼ ಎಂದು ಹೇಳಿ ದರು.

ಮಹಿಳೆಯಿಂದ ಸುಳ್ಳು ದೂರು- ರಾಜಭವನ: ಆದರೆ, ಗವರ್ನರ್ ಭವನದ ಮೂಲಗಳು ಬೇರೆಯದೇ ಕಥೆ ಹೇಳುತ್ತಿವೆ. ʻಮಹಿಳೆ ರಾಜಭವನದ ಉದ್ಯೋಗಿಯೂ ಆಗಿರುವ ಗೆಳೆಯನ ಸಹಾಯದಿಂದ ಜನ ಚುನಾವಣೆ ಆಯೋಗಕ್ಕೆ ದೂರು ಕಳುಹಿಸುವುದಕ್ಕೆ ತಡೆ ಒಡ್ಡಿದ್ದರಿಂದ ವಾಗ್ದಂಡನೆಗೆ ಒಳಗಾಗಿದ್ದಳು. ಇದರಿಂದ ರಾಜ್ಯಪಾಲರ ವಿರುದ್ಧ ಆರೋಪ ಮಾಡಿದ್ದಾರೆʼ ಎಂದು ಮೂಲಗಳು ಹೇಳಿವೆ.

ಹಳಸಿದ ಸಂಬಂಧ: ಸಿ.ವಿ.ಆನಂದ ಬೋಸ್ ಅವರು ನವೆಂಬರ್ 2022 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಟಿಎಂಸಿ ಸರ್ಕಾರದೊಂದಿಗೆ ಸೌಹಾರ್ದ ಸಂಬಂಧ ಹೊಂದಿಲ್ಲ. ಪಶ್ಚಿಮ ಬಂಗಾಳದ ಸಚಿವರಾದ ಚಂದ್ರಿಮಾ ಭಟ್ಟಾಚಾರ್ಯ ಅವರಿಗೆ ಕೋಲ್ಕತ್ತಾ, ಡಾರ್ಜಿಲಿಂಗ್ ಮತ್ತು ಬರಕ್‌ಪುರದ ರಾಜಭವನ ಆವರಣಕ್ಕೆ ಪ್ರವೇಶ ನಿರ್ಬಂಧಿಸಿದ್ದಾರೆ. ಜೊತೆಗೆ, ʻಸಚಿವರು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪಾಲ್ಗೊಳ್ಳುವುದಿಲ್ಲ. ಸಚಿವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಸಲಹೆಗಾಗಿ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸಲಾಗಿದೆʼ ಎಂದು ರಾಜಭವನದ ಹೇಳಿಕೆ ತಿಳಿಸಿತ್ತು.

ʻಚುನಾವಣೆ ಸಮಯದಲ್ಲಿ ಕೇಂದ್ರ ಸರ್ಕಾರವನ್ನು ಖುಷಿಪಡಿಸಲು ರಾಜಭವನದ ಆವರಣಕ್ಕೆ ಪೊಲೀಸರ ಪ್ರವೇಶವನ್ನು ರಾಜ್ಯಪಾಲರು ನಿಷೇಧಿಸಿದ್ದಾರೆʼ ಎಂದು ಟಿಎಂಸಿ ತಿಳಿಸಿದೆ.

ಬಿಜೆಪಿ ಪ್ರತಿಕ್ರಿಯೆ: ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಟಿಎಂಸಿಯ ಪಿತೂರಿಯೇ ಅಥವಾ ಇದರಲ್ಲಿ ಕಿಂಚಿತ್ತಾದರೂ ಸತ್ಯಾಂಶವಿದೆಯೇ ಎಂಬುದನ್ನು ನೋಡಬೇಕು ಎಂದು ಹೇಳಿದೆ. ʻಎಸ್‌ಎಸ್‌ಸಿ ಹಗರಣದ ಬಳಿಕ ಟಿಎಂಸಿ ಮೂಲೆಗುಂಪಾಗಿದೆ. ಉಸಿರಾಡಲು ಕಷ್ಟಪಡುತ್ತಿದೆ. ಇದು ಟಿಎಂಸಿಯ ಪಿತೂರಿಯೇ ಅಥವಾ ಅದರಲ್ಲಿ ಏನಾದರೂ ಸತ್ಯವಿದೆಯೇ ಎಂದು ನೋಡಬೇಕಿದೆʼ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹೇಳಿದರು.

Read More
Next Story