ವೇದಾಂತದೊಟ್ಟಿಗೆ ಗಣಿಗಾರಿಕೆ ಒಪ್ಪಂದ: ಚುನಾವಣೆ ಆಯೋಗಕ್ಕೆ ದೂರು
x
ಗೋವಾದಲ್ಲಿ ಆರು ವರ್ಷಗಳ ಹಿಂದೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ

ವೇದಾಂತದೊಟ್ಟಿಗೆ ಗಣಿಗಾರಿಕೆ ಒಪ್ಪಂದ: ಚುನಾವಣೆ ಆಯೋಗಕ್ಕೆ ದೂರು


ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದ ನಂತರ ಗೋವಾ ಸರ್ಕಾರವು ವೇದಾಂತ ಲಿಮಿಟೆಡ್‌ಗೆ ನೀಡಿದ್ದ ಗಣಿಗಾರಿಕೆ ಗುತ್ತಿಗೆಯನ್ನು ಪ್ರಶ್ನಿಸಿ, ಚುನಾವಣೆ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.

ಏಪ್ರಿಲ್ 5 ರಂದು ಗೋವಾ ಫೌಂಡೇಶನ್ ಸಲ್ಲಿಸಿದ ದೂರಿನ ಮೇರೆಗೆ ಗೋವಾದ ಹೆಚ್ಚುವರಿ ಮುಖ್ಯ ಚುನಾವಣೆ ಅಧಿಕಾರಿ (ಸಿಇಒ) ವಿಷಯವನ್ನು ಚುನಾವಣೆ ಆಯೋಗ(ಇಸಿಐ)ಕ್ಕೆ ಸಲ್ಲಿಸಿದ್ದಾರೆ. ಗೋವಾ ಫೌಂಡೇಶನ್ ತನ್ನ ದೂರಿನಲ್ಲಿ ʻಚುನಾವಣೆ ಮೇಲೆ ಪ್ರಭಾವ ಬೀರಲು ಮಾಡಿಕೊಂಡ ಒಪ್ಪಂದ ಇದಾಗಿದೆʼ ಎಂದು ಆರೋಪಿಸಿದೆ.

ಹೆಚ್ಚುವರಿ ಸಿಇಒ ಸುನಿಲ್ ಪಿ. ಮಸೂರ್ಕರ್ ಅವರು ಚುನಾವಣೆ ಆಯೋಗದ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಈ ಸಂಬಂಧ ಗೋವಾ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ನಿರ್ದೇಶನಾಲದ ಪ್ರತಿಕ್ರಿಯೆ ʻತೃಪ್ತಿಕರವಾಗಿಲ್ಲʼ ಎಂದು ಹೇಳಿದ್ದಾರೆ. ಮಸೂರ್ಕರ್ ತಮ್ಮ ಪತ್ರದಲ್ಲಿ, ʻಗಣಿ ಮತ್ತು ಭೂವಿಜ್ಞಾನ ನಿರ್ದೇಶನಾಲಯ ಸಲ್ಲಿಸಿದ ಉತ್ತರವು ತೃಪ್ತಿಕರವಾಗಿಲ್ಲ.ಇದು ಸ್ವತಂತ್ರ ಒಪ್ಪಂದವಾಗಿದ್ದು, ಮಾದರಿ ನೀತಿ ಸಂಹಿತೆಯ ಅವಧಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ಚುನಾವಣೆ ಆಯೋಗದ ಪೂರ್ವಾನುಮತಿ ಪಡೆಯಬೇಕೆಂಬ ಇಲಾಖೆಯು ಮಾರ್ಗಸೂಚಿ 21(ಎಫ್) ಅನ್ನು ಉಲ್ಲಂಘಿಸುತ್ತದೆ. ಹೆಚ್ಚಿನ ಮಾರ್ಗದರ್ಶನ ಮತ್ತು ನಿರ್ದೇಶನದ ಅಗತ್ಯವಿದೆʼ ಎಂದು ಹೇಳಿದ್ದಾರೆ.

ಎನ್‌ಜಿಒ ದೂರು: ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಗೋವಾ ಸರ್ಕಾರ ಮತ್ತು ವೇದಾಂತ ಲಿಮಿಟೆಡ್, ಮಾರ್ಚ್ 22 ರಂದು ಬಿಚೋಲಿಮ್ ಮೈನಿಂಗ್ ಬ್ಲಾಕ್ 1ರ ಗುತ್ತಿಗೆ ಪತ್ರಕ್ಕೆ ಸಹಿ ಹಾಕಿವೆ. ಒಪ್ಪಂದದ ಮೂಲಕ ಮತ ಗಳಿಕೆಗೆ ಸರ್ಕಾರ ಪ್ರಯತ್ನಿಸುತ್ತಿದೆ. ಗೋವಾದಲ್ಲಿ ಗಣಿಗಾರಿಕೆ ಪುನರಾರಂಭಗೊಂಡಿದೆʼ ಎಂದು ಗೋವಾ ಫೌಂಡೇಷನ್‌ ದೂರಿದೆ.

ಸಿಇಒ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಗಣಿ ಮತ್ತು ಭೂವಿಜ್ಞಾನ ನಿರ್ದೇಶನಾಲಯ, ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 30, 2022 ರಂದು ಪ್ರಾರಂಭವಾಯಿತು ಮತ್ತು ನಿಯಮಗಳ ಪ್ರಕಾರ ಏಪ್ರಿಲ್ 12, 2024 ರೊಳಗೆ ಮುಕ್ತಾಯಗೊಳ್ಳಬೇಕು. ಇದು ಹೊಸ ಒಪ್ಪಂದವಲ್ಲ. ಬದಲಾಗಿ ಒಪ್ಪಂದದ ಮುಂದುವರಿಕೆ ಎಂದು ಸಮರ್ಥಿಸಿಕೊಂಡಿತ್ತು.

ಗೋವಾದಲ್ಲಿ ಗಣಿಗಾರಿಕೆ ಆರು ವರ್ಷಗಳ ಹಿಂದೆ ಸ್ಥಗಿತಗೊಳಿಂಡಿದೆ.

Read More
Next Story