ʻಸಾರ್ವಜನಿಕ ಕಚೇರಿ ದುರ್ಬಳಕೆ ಆರೋಪ:  ಐಎಎಸ್‌ ಅಧಿಕಾರಿ ವರ್ಗಾವಣೆ
x

ʻಸಾರ್ವಜನಿಕ ಕಚೇರಿ ದುರ್ಬಳಕೆ' ಆರೋಪ: ಐಎಎಸ್‌ ಅಧಿಕಾರಿ ವರ್ಗಾವಣೆ


ಬಿಜೆಡಿ ನಾಯಕ ವಿ.ಕೆ. ಪಾಂಡಿಯನ್ ಅವರ ಪತ್ನಿ, ಒಡಿಶಾದ ಹಿರಿಯ ಅಧಿಕಾರಿ ಸುಜಾತಾ ಆರ್. ಕಾರ್ತಿಕೇಯನ್ ಅವರನ್ನು ವರ್ಗಾಯಿಸಲು ಚುನಾವಣಾ ಆಯೋಗ ಆದೇಶಿಸಿದೆ.

ಪಾಂಡಿಯನ್ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ನಿಕಟವರ್ತಿ. ಸುಜಾತಾ ಕಾರ್ತಿಕೇಯನ್ ಅವರು ಒಡಿಶಾದ ಮಿಷನ್ ಶಕ್ತಿ ಇಲಾಖೆಯಲ್ಲಿ ಆಯುಕ್ತೆ- ಕಾರ್ಯದರ್ಶಿ ಆಗಿದ್ದರು. ಸುಜಾತಾ ಅವರು ಆಡಳಿತಾರೂಢ ಬಿಜೆಡಿಯ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ, ಚುನಾವಣೆ ಆಯೋಗಕ್ಕೆ ಮನವಿ ಮಾಡಿತ್ತು.

ʻಸೇವೆಯಲ್ಲಿರುವ ಐಎಎಸ್ ಅಧಿಕಾರಿ ವೃತ್ತಿಪರತೆಗೆ ವಿದಾಯ ಹೇಳಿದ್ದು ದುರದೃಷ್ಟಕರ ಸಂಗತಿ. ಅವರು ಪತಿಯಿಂದಾಗಿ ಬಿಜೆಡಿ ಏಜೆಂಟ ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆ ಆಯೋಗದ ಖ್ಯಾತಿಯನ್ನು ಕಾಪಾಡುವ ದೃಷ್ಟಿಯಿಂದ, ಸುಜಾತಾ ಆರ್. ಕಾರ್ತಿಕೇಯನ್ ಅವರನ್ನುಹುದ್ದೆಯಿಂದ ಬಿಡುಗಡೆ ಮಾಡಬೇಕಿದೆ. ಒಡಿಶಾದಲ್ಲಿ ಸಂಸತ್ತು ಮತ್ತು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಅವರನ್ನು ಯಾವುದೇ ಸಾರ್ವಜನಿಕ ಕರ್ತವ್ಯಕ್ಕೆ ನಿಯೋಜಿಸಬಾರದುʼ ಎಂದು ಬಿಜೆಪಿ ಆಗ್ರಹಿಸಿತ್ತು.

ಸಾರ್ವಜನಿಕ ಕಚೇರಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸ ಲಾಗಿದೆ.

Read More
Next Story