ಅಮಿತ್ ಶಾ ಅವರ ತಿದ್ದಿದ ವಿಡಿಯೋ: ಪ್ರಕರಣ ದಾಖಲು
ನವದೆಹಲಿ, ಏ.28- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಿದ್ದಿದ ವಿಡಿಯೋ ಪ್ರಸಾರ ಕುರಿತು ಗೃಹ ಸಚಿವಾಲಯ ದೂರು ನೀಡಿದ್ದು, ದೆಹಲಿ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಡಿಯೋ ಪ್ರಸಾರಗೊಂಡಿದೆ. ವಿಶೇಷ ಕೋಶ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದೆ. ದೇಶಾದ್ಯಂತ ಬಂಧನ ನಡೆಯಲಿದೆ ಎಂದು ವಿಶೇಷ ಕೋಶದ ಮೂಲಗಳು ತಿಳಿಸಿವೆ.
ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರ (ಐಫೋರ್‌ಸಿ)ದ ಡಿಸಿ ಸಿಂಕು ಶರಣ್ ಸಿಂಗ್ ಅವರ ದೂರಿನ ಪ್ರಕಾರ, ʻಸಮುದಾಯಗಳ ನಡುವೆ ದ್ವೇಶವನ್ನು ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ತಿದ್ದಿದ ವಿಡಿಯೊಗಳನ್ನು ಪ್ರಸಾರ ಮಾಡ ಲಾಗುತ್ತಿದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆʼ. ವಿಡಿಯೋಗಳ ಲಿಂಕ್‌ಗಳನ್ನು ಕೂಡ ಲಗತ್ತಿಸಲಾಗಿದೆ.
ಎಫ್‌ಐಆರ್ ಪ್ರತಿಯನ್ನು ದೆಹಲಿ ಸೈಬರ್ ಪೊಲೀಸ್‌ನ ಐಎಫ್‌ಎಸ್‌ಒ ಘಟಕಕ್ಕೂ ಕಳುಹಿಸಲಾಗಿದೆ.
Next Story