
ಅಧಿಕಾರಕ್ಕೆ ಬಂದರೆ ಮೀಸಲು ಹೆಚ್ಚಳ: ರೇವಂತ್ ರೆಡ್ಡಿ
ಲೋಕಸಭೆ ಚುನಾವಣೆ ದೇಶದಲ್ಲಿ ಮೀಸಲು ಮುಂದುವರಿಸಬೇಕೇ ಅಥವಾ ರದ್ದುಗೊಳಿಸಬೇಕೇ ಎಂಬ ಕುರಿತು ಜನಾಭಿಪ್ರಾಯ ಸಂಗ್ರಹ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲು ಶೇ. 50 ಕ್ಕಿಂತ ಹೆಚ್ಚಿಸಲಿದೆ ಎಂದು ಗುರುವಾರ ಹೇಳಿದರು.
ʻಬಿಜೆಪಿ ಪರ ಪ್ರತಿಯೊಂದು ಮತವೂ ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಲು ಆ ಪಕ್ಷವನ್ನು ಬಲಪಡಿಸುತ್ತದೆ. ನಾವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲು ಮುಂದುವರಿಸುವುದು ಮಾತ್ರವಲ್ಲದೆ, ಈ ಸಮುದಾಯಗಳಿಗೆ ಮೀಸಲು ಶೇ.50 ಕ್ಕಿಂತ ಹೆಚ್ಚು ನೀಡುವುದು ಕಾಂಗ್ರೆಸ್‌ನ ಸ್ಪಷ್ಟ ನೀತಿʼ ಎಂದರು.
ʻಇದನ್ನು ಜಾರಿಗೊಳಿಸಲು ಕಾಂಗ್ರೆಸ್ ಬೆಂಬಲಿಸಿ ಅಥವಾ ಮೀಸಲು ರದ್ದುಗೊಳಿಸಬೇಕಿದ್ದರೆ ಬಿಜೆಪಿ ಅಥವಾ ಎನ್‌ಡಿಎಗೆ ಮತ ನೀಡಿ. ತೆಲಂಗಾಣದಲ್ಲಿ ಕನಿಷ್ಠ 14 ಲೋಕಸಭೆ ಸ್ಥಾನಗಳಲ್ಲಿ ಕಾಂಗ್ರೆಸ್ ಅನ್ನು ಆಯ್ಕೆ ಮಾಡಿ. ಇದರಿಂದ ಮೀಸಲು ರಕ್ಷಿಸುವ ಮತ್ತು ಹೆಚ್ಚಿಸುವ ಜವಾಬ್ದಾರಿಯನ್ನು ಪಕ್ಷ ತೆಗೆದುಕೊಳ್ಳುತ್ತದೆ.ʼ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ʻ1947 ರಿಂದ 2014 ರವರೆಗೆ ವಿವಿಧ ಸರ್ಕಾರಗಳು 55 ಲಕ್ಷ ಕೋಟಿ ರೂ.ಸಾಲ ಮಾಡಿದ್ದರೆ, ಕಳೆದ 10 ವರ್ಷಗಳಲ್ಲಿ ಎನ್‌ಡಿಎ ಆಡಳಿತದಲ್ಲಿ 113 ಲಕ್ಷ ಕೋಟಿ ರೂ. ಸಾಲ ಮಾಡಿದೆʼ ಎಂದು ಹೇಳಿದರು.