ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಶ್ರೀನಗರ-ಲೇಹ್ ಹೆದ್ದಾರಿ ಸಂಚಾರಕ್ಕೆ ನಿರ್ಭಂಧ
"ಗಂದರ್ಬಾಲ್ ಜಿಲ್ಲೆಯ ಕಚೆರ್ವಾನ್‌ನಲ್ಲಿ ರಸ್ತೆ ಹಾನಿಗೊಳಗಾದ ಕಾರಣ ಶ್ರೀನಗರ-ಲೇಹ್ ರಸ್ತೆಯಲ್ಲಿ ಸಂಚಾರವನ್ನು ಮುಂದಿನ ಸೂಚನೆಯ ತನಕ ಸ್ಥಗಿತಗೊಳಿಸಲಾಗಿದೆ" ಎಂದು ಸಂಚಾರ ನಿಯಂತ್ರಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ರಸ್ತೆ ಹಾನಿಗೊಳಗಾಗಿದ್ದು, ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
"ಗಂದರ್ಬಾಲ್ ಜಿಲ್ಲೆಯ ಕಚೆರ್ವಾನ್‌ನಲ್ಲಿ ರಸ್ತೆ ಹಾನಿಗೊಳಗಾದ ಕಾರಣ ಶ್ರೀನಗರ-ಲೇಹ್ ರಸ್ತೆಯಲ್ಲಿ ಸಂಚಾರವನ್ನು ಮುಂದಿನ ಸೂಚನೆಯ ತನಕ ಸ್ಥಗಿತಗೊಳಿಸಲಾಗಿದೆ" ಎಂದು ಸಂಚಾರ ನಿಯಂತ್ರಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ವಸತಿ ಗೃಹಗಳು ಸೇರಿದಂತೆ ಕೆಲವು ಕಟ್ಟಡಗಳು ಹಾನಿಗೊಳಗಾಗಿವೆ. ಅಗತ್ಯವಿರುವವರಿಗೆ ಸಹಾಯ ಮತ್ತು ನೆರವು ನೀಡಲು ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹೆದ್ದಾರಿಯಲ್ಲಿ ಸಂಚಾರ ನಿರ್ಭಂದಿಸಿರುವುದರಿಂದ ಲಡಾಖ್ ಕೇಂದ್ರಾಡಳಿತ ಪ್ರದೇಶದಿಂದ ಕಾಶ್ಮೀರ ಕಣಿವೆಯನ್ನು ಕಡಿತಗೊಳಿಸಿದೆ ಮತ್ತು ಅಮರನಾಥ ಯಾತ್ರೆಗಾಗಿ ಬಲ್ಟಾಲ್ ಬೇಸ್ ಕ್ಯಾಂಪ್ ಅನ್ನು ಸಹ ಪ್ರವೇಶಿಸಲಾಗುತ್ತಿಲ್ಲ.
Next Story