ಸೂರತ್, ಇಂದೋರ್ ಅಭ್ಯರ್ಥಿಗಳಿಗೆ ಬೆದರಿಕೆ: ಕಾಂಗ್ರೆಸ್
x

ಸೂರತ್, ಇಂದೋರ್ ಅಭ್ಯರ್ಥಿಗಳಿಗೆ ಬೆದರಿಕೆ: ಕಾಂಗ್ರೆಸ್


ಏಪ್ರಿಲ್‌ 30- ಸೂರತ್ ಮತ್ತು ಇಂದೋರ್ ಎರಡರಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಬೆದರಿಸಿ, ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ʻಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿಯ ಸಾಂಪ್ರದಾಯಿಕ ಭದ್ರಕೋಟೆಗಳಲ್ಲೂ ಏಕೆ ಆತಂಕ ಮತ್ತು ಭಯʼ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ ನಲ್ಲಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನ ಇಂದೋರ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಅಕ್ಷಯ್ ಬಾಮ್, ಕ್ಷೇತ್ರದಲ್ಲಿ ಮತ ಚಲಾವಣೆಗೆ ಹದಿನೈದು ದಿನ ಮೊದಲು ಸೋಮವಾರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಇದಕ್ಕೂ ಮೊದಲು, ಕಾಂಗ್ರೆಸ್‌ನ ಸೂರತ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿ ಸಲಾಯಿತು. ಇದರಿಂದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದರು.

ʻ1984 ರಿಂದ ಕಾಂಗ್ರೆಸ್ ಸೂರತ್ ಮತ್ತು ಇಂದೋರ್ ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದಿಲ್ಲ. ಆದರೂ 2024 ರಲ್ಲಿ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆದರಿಸಿ, ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ. ಬಿಜೆಪಿ ಭದ್ರಕೋಟೆಗಳಲ್ಲೂ ಪ್ರಧಾನಿ ಏಕೆ ಭಯಪಡುತ್ತಾರೆ?,ʼ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ʻಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅಭ್ಯರ್ಥಿಗಳನ್ನು ಬೆದರಿಸುತ್ತಿರುವಾಗ ಚುನಾವಣಾ ಆಯೋಗ ಬೇರೆ ಕಡೆ ನೋಡುತ್ತಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುವುದೇ?ʼ ಎಂದು ಕಾಂಗ್ರೆಸ್ ಸೋಮವಾರ ಪ್ರಶ್ನಿಸಿದೆ.

Read More
Next Story