ನದಿಗೆ ಹಾರಿದ ಯುವಕನ ಶವ ಪಾಕಿಸ್ತಾನದಲ್ಲಿ ಪತ್ತೆ; ಶವ ಹಸ್ತಾಂತರಿಸಲು ಸಹಾಯಕ್ಕೆ  ಪ್ರಧಾನಿಗೆ ಮನವಿ
x
ಮೃತದೇಹ

ನದಿಗೆ ಹಾರಿದ ಯುವಕನ ಶವ ಪಾಕಿಸ್ತಾನದಲ್ಲಿ ಪತ್ತೆ; ಶವ ಹಸ್ತಾಂತರಿಸಲು ಸಹಾಯಕ್ಕೆ ಪ್ರಧಾನಿಗೆ ಮನವಿ

ಕಳೆದ ತಿಂಗಳು ಚೆನಾಬ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಕುಟುಂಬಕ್ಕೆ ಹಸ್ತಾಂತರಿಸಲು ಸಹಾಯ ಮಾಡುವಂತೆ ಮೃತ ಯುವಕನ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.


Click the Play button to hear this message in audio format

ಕಳೆದ ತಿಂಗಳು ಚೆನಾಬ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಕುಟುಂಬಕ್ಕೆ ಹಸ್ತಾಂತರಿಸಲು ಸಹಾಯ ಮಾಡುವಂತೆ ಮೃತ ಯುವಕನ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.

ಅಖ್ನೂರ್ ವಲಯದ ಗಡಿ ಗ್ರಾಮದ ನಿವಾಸಿ ಹರಶ್ ನಗೋತ್ರಾ ಜೂನ್ 11 ರಂದು ನಾಪತ್ತೆಯಾಗಿದ್ದು, ಅವರ ಮೋಟಾರ್ ಸೈಕಲ್ ನದಿಯ ದಡದಲ್ಲಿ ಪತ್ತೆಯಾಗಿತ್ತು. ಮರುದಿನ ನಾಗೋತ್ರಾ ಕುಟುಂಬದಿಂದ ಹರಶ್ ನಗೋತ್ರಾ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಯುವಕ ಆನ್‌ಲೈನ್‌ ಗೇಮಿಂಗ್‌ ಮೂಲಕ ಸುಮಾರು 80,000 ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದ. ಇದರಿಂದ ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಾವು ದೃಢಪಟ್ಟಿದೆ

ಖಾಸಗಿ ದೂರಸಂಪರ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗನ ಸಿಮ್ ಕಾರ್ಡ್ ಅನ್ನು ಪೋಷಕರು ಮರುಆಕ್ಟಿವೇಟ್ ಮಾಡಿದ್ದರು. ಈ ವೇಳೆ ಪಾಕಿಸ್ತಾನದ ಅಧಿಕಾರಿಯಿಂದ ವಾಟ್ಸಾಪ್ ಸಂದೇಶದ ಮೂಲಕ ಹರಶ್ ನಗೋತ್ರಾ ಸಾವಿನ ಬಗ್ಗೆ ಕುಟುಂಬಕ್ಕೆ ದೃಢೀಕರಣ ಸಿಕ್ಕಿತು.

ಜೂನ್ 13 ರಂದು ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನ ಕಾಲುವೆಯಿಂದ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವಿಭಾಗದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಹೇಳಿಕೊಂಡಿರುವ ಪಾಕಿಸ್ತಾನಿ ಅಧಿಕಾರಿಯ ವಾಟ್ಸಾಪ್ ಸಂದೇಶವು ತಿಳಿಸಿತ್ತು ಎಂದು ನಾಗೋತ್ರಾ ತಂದೆ ಸುಭಾಷ್ ಶರ್ಮಾ ಹೇಳಿದ್ದಾರೆ.

ಮೃತದೇಹವನ್ನು ಸಮಾಧಿ ಮಾಡಲಾಗಿದೆ ಎಂದು ಅಧಿಕಾರಿಯು ಮೃತನ ತಂದೆಗೆ ತಿಳಿಸಿದ್ದರು. ಅವರು ಹರಶ್ ನಗೋತ್ರಾ ಅವರ ಗುರುತಿನ ಚೀಟಿಯನ್ನು ವಾಟ್ಸಾಪ್ ಮೂಲಕ ದುಃಖದಲ್ಲಿರುವ ಕುಟುಂಬಕ್ಕೆ ಕಳುಹಿಸಿದರು, ಸಿಯಾಲ್‌ಕೋಟ್‌ನಲ್ಲಿ ಪತ್ತೆಯಾಗಿರುವ ಮೃತದೇಹವು ಅವರ ನಾಪತ್ತೆಯಾದ ಮಗನದ್ದು ಎಂದು ಖಚಿತಪಡಿಸಿದರು.

ಪ್ರಧಾನಿ ಸಹಾಯ ಕೇಳಿದ ಕುಟುಂಬ

"ನನ್ನ ಮಗನ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಹಿಂತಿರುಗಿಸಲು ನಮಗೆ ಸಹಾಯ ಮಾಡುವಂತೆ ನಾವು ನಮ್ಮ ಪ್ರಧಾನ ಮಂತ್ರಿಯನ್ನು ವಿನಂತಿಸುತ್ತೇವೆ. ನಮ್ಮ ಧರ್ಮದ ಪ್ರಕಾರ ಅವರ ಅಂತ್ಯಕ್ರಿಯೆಯನ್ನು ಮಾಡಲು ನಾವು ಬಯಸುತ್ತೇವೆ" ಎಂದು ಶರ್ಮಾ ಹೇಳಿದರು.

ನಗೋತ್ರಾ ಅವರ ಸಂಬಂಧಿ ಅಮೃತ್ ಭೂಷಣ್ ಅವರು ಈ ವಿಷಯದ ಬಗ್ಗೆ ಈಗಾಗಲೇ ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ. ನಾವು ಆಘಾತ ಮತ್ತು ದುಃಖದ ಸ್ಥಿತಿಯಲ್ಲಿರುತ್ತೇವೆ. ಮೃತ ದೇಹವನ್ನು ಮರಳಿ ಬಯಸುತ್ತೇವೆ. ನಾವು ಶವವನ್ನು ಹಸ್ತಾಂತರಿಸುವಂತೆ ಪಾಕಿಸ್ತಾನದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಭೂಷಣ್ ಪತ್ರ ಬರೆದಿದ್ದಾರೆ.

Read More
Next Story