ಎನ್‌ಡಿಎ 150 ಸ್ಥಾನವನ್ನೂ ಪಡೆಯುವುದಿಲ್ಲ: ರಾಹುಲ್ ಗಾಂಧಿ
x

ಎನ್‌ಡಿಎ 150 ಸ್ಥಾನವನ್ನೂ ಪಡೆಯುವುದಿಲ್ಲ: ರಾಹುಲ್ ಗಾಂಧಿ


ಅಲಿರಾಜ್‌ಪುರ (ಎಂಪಿ), ಮೇ 6: ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 150 ಸ್ಥಾನಗಳನ್ನು ಸಹ ಪಡೆಯು ವುದಿಲ್ಲಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

ಮಧ್ಯಪ್ರದೇಶದ ರತ್ಲಾಮ್-ಜಬುವಾ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಅಲಿರಾಜ್‌ಪುರ ಜಿಲ್ಲೆಯ ಜೋಬಾತ್ ಪಟ್ಟಣದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ, ಕೇಸರಿ ಪಕ್ಷ ಮತ್ತು ಆರ್‌ಎಸ್‌ಎಸ್ ಸಂವಿಧಾನ ವನ್ನು ಬದಲಿಸಲು ಬಯಸುತ್ತಿವೆ. ಕಾಂಗ್ರೆಸ್ ಉಳಿಸುವ ಗುರಿಯನ್ನು ಹೊಂದಿದೆ. ಮೀಸಲು ಮಿತಿ ಶೇ.50ನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಿದರು.

ʻಬಿಜೆಪಿ ನಾಯಕರು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 'ಅಬ್ಕಿ ಬಾರ್, 400 ಪಾರ್' ಎಂದು ಘೋಷಣೆ ಮಾಡಿದ್ದಾರೆ. 400 ಬಿಟ್ಟುಬಿಡಿ; 150 ಸ್ಥಾನಗಳನ್ನೂ ಪಡೆಯುವುದಿಲ್ಲ. ಜಾತಿ ಗಣತಿಯು ಜನರ ಸ್ಥಿತಿ ಬಗ್ಗೆ ಎಲ್ಲವನ್ನೂ ಬಹಿರಂಗ ಪಡಿಸುತ್ತದೆ ಮತ್ತು ದೇಶದ ರಾಜಕೀಯದ ದಿಕ್ಕನ್ನು ಬದಲಿಸುತ್ತದೆ,ʼ ಎಂದು ಹೇಳಿದರು.

ʻಈ ಚುನಾವಣೆ ಸಂವಿಧಾನವನ್ನು ಉಳಿಸಲು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳು ಕಿತ್ತುಹಾಕಲು ಬಂದಿದೆ. ಕಾಂಗ್ರೆಸ್ ಮತ್ತು ಇಂಡಿಯ ಒಕ್ಕೂಟ ಸಂವಿಧಾನವನ್ನು ರಕ್ಷಿಸಲಿದೆ. ಸಂವಿಧಾನದಿಂದ ಆದಿವಾಸಿಗಳು, ದಲಿತರು ಮತ್ತು ಒಬಿಸಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಬುಡಕಟ್ಟು ಜನಾಂಗದವರು ನೀರು, ಭೂಮಿ ಮತ್ತು ಕಾಡಿನ ಮೇಲೆ ಹಕ್ಕನ್ನು ಹೊಂದಿದ್ದಾರೆʼ ಎಂದು ಹೇಳಿದರು.

ʻಆದಿವಾಸಿಗಳು, ದಲಿತರು ಮತ್ತು ಒಬಿಸಿಗಳಿಗೆ ನೀಡಲಾಗಿದ್ದ ಮೀಸಲು ಕಿತ್ತುಕೊಳ್ಳುವುದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ. ನಾವು ಮೀಸಲು ಮಿತಿಯನ್ನು ಶೇ.50 ಕ್ಕಿಂತ ಹೆಚ್ಚಿಸಲಿದ್ದೇವೆ. ಆದಿವಾಸಿಗಳು, ದಲಿತರು ಮತ್ತು ಒಬಿಸಿಗಳಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ಮೀಸಲು ನೀಡಲಾಗುತ್ತದೆʼ ಎಂದು ಹೇಳಿದರು.

ʻನಾವು ನಿಮ್ಮನ್ನು ಆದಿವಾಸಿಗಳು, ಭೂಮಿ ಮತ್ತು ಕಾಡಿನ ಮೊದಲ ಮಾಲೀಕರು ಎಂದು ಕರೆಯುತ್ತೇವೆ. ನಿಮ್ಮ ಹಕ್ಕುಗಳನ್ನು ರಕ್ಷಿಸಲು ಅರಣ್ಯ ಹಕ್ಕುಗಳ ಕಾಯಿದೆ(ಪೆಸಾ) ಜಾರಿಗೆ ತರಲಾಗಿದೆ. ನಾವು ವಿಸ್ತರಿಸಿದ ಪ್ರಯೋಜನವನ್ನು ಅವರು ವಾಪಸು ಪಡೆಯಲು ಬಯಸುತ್ತಾರೆʼ ಎಂದು ಹೇಳಿದರು.

ʻಮೋದಿಜಿ ಕೇವಲ 22 ಬಿಲಿಯನೇರ್ ಉದ್ಯಮಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಮತ್ತು ಅವರ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ವಾರ್ಷಿಕ ಎರಡು ಕೋಟಿ ಉದ್ಯೋಗ ನೀಡುವುದಾಗಿ ಸುಳ್ಳು ಹೇಳಿದ್ದಾರೆ. ನಾವು ಮಹಾಲಕ್ಷ್ಮಿ ಯೋಜನೆಯಡಿ ಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ಕೊಡಲಾಗುತ್ತದೆ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಖಚಿತಪಡಿಸಿಕೊಳ್ಳಲು ಕಾನೂನು ಜಾರಿ, ಸರ್ಕಾರ ರಚನೆಯಾದ ತಕ್ಷಣ ರೈತರ ಸಾಲ ಮನ್ನಾ ಮಾಡಲಾಗುತ್ತದೆʼ ಎಂದರು.

ʻಪ್ರಸ್ತುತ ದೇಶದಲ್ಲಿ ಕಳೆದ 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಇದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ಕೂಲಿಯನ್ನು ದಿನಕ್ಕೆ 250 ರೂ.ನಿಂದ 400 ರೂ.ಗೆ ಹೆಚ್ಚಿಸಲಾಗುತ್ತದೆ,ʼ ಎಂದು ಘೋಷಿಸಿದರು.

Read More
Next Story