ಆಕ್ಷೇಪಾರ್ಹ ವಿಡಿಯೋ: ಜೆ.ಪಿ.ನಡ್ಡಾ, ಅಮಿತ್ ಮಾಳವೀಯಗೆ ಬೆಂಗಳೂರು ಪೊಲೀಸ್‌ ಸಮನ್ಸ್‌
x

ಆಕ್ಷೇಪಾರ್ಹ ವಿಡಿಯೋ: ಜೆ.ಪಿ.ನಡ್ಡಾ, ಅಮಿತ್ ಮಾಳವೀಯಗೆ ಬೆಂಗಳೂರು ಪೊಲೀಸ್‌ ಸಮನ್ಸ್‌

ಒಂದು ವಾರದೊಳಗೆ ಹಾಜರಾಗುವಂತೆ ಹೈಗ್ರೌಂಡ್ಸ್ ಪೊಲೀಸ್ ತನಿಖಾಧಿಕಾರಿ ಸೂಚನೆ


ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಮತ್ತು ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರಿಗೆ ಬೆಂಗಳೂರು ಪೊಲೀಸರು ಬುಧವಾರ ಬಿಜೆಪಿಯ ಕರ್ನಾಟಕ ಘಟಕ ಮಾಡಿದ ಆಕ್ಷೇಪಾರ್ಹ ಪೋಸ್ಟ್‌ಗೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದ್ದಾರೆ.

ಆಕ್ಷೇಪಾರ್ಹ ವಿಡಿಯೋಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಪೊಲೀಸರ ಮುಂದೆ ಹಾಜರಾಗುವಂತೆ ಹೈಗ್ರೌಂಡ್ಸ್ ಪೊಲೀಸ್ ತನಿಖಾಧಿಕಾರಿ ಇಬ್ಬರಿಗೂ ಸೂಚಿಸಿದ್ದಾರೆ.

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.ವಿಡಿಯೋ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದಿದ್ದ ಕಾಂಗ್ರೆಸ್, ಬಿಜೆಪಿ ʻಗಲಭೆಯನ್ನು ಪ್ರಚೋದಿಸಲು ಮತ್ತು ದ್ವೇಷವನ್ನು ಉತ್ತೇಜಿಸಲುʼ ಬಯಸಿದೆ ಎಂದು ಆರೋಪಿಸಿತ್ತು. ಆಯೋಗ ಆಕ್ಷೇಪಾರ್ಹ ವೀಡಿಯೊವನ್ನು ಎಕ್ಸ್‌ನಿಂದ ತೆಗೆದುಹಾಕುವಂತೆ ಮಂಗಳವಾರ (ಮೇ 7) ಆದೇಶಿಸಿದೆ.

ಚುನಾವಣೆ ಆಯೋಗ ಕೂಡ ಬಿಜೆಪಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಆದರೆ, ಬಿಜೆಪಿ ಅದರ ನಿರ್ದೇಶನವನ್ನು ಅನುಸರಿಸಲಿಲ್ಲ.ʻಈ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ.ಆದರೆ, ಪೋಸ್ಟ್ ಅನ್ನು ಇನ್ನೂ ತೆಗೆದುಹಾಕಿಲ್ಲʼ ಎಂದು ಇಸಿ ತಿಳಿಸಿದೆ.

ಬಿಜೆಪಿ ಮುಖ್ಯಸ್ಥ ನಡ್ಡಾ, ಮಾಳವೀಯ ಮತ್ತು ವಿಜಯೇಂದ್ರ ವಿರುದ್ಧ ಎಫ್‌ಐಆರ್ ದಾಖಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ರಾಹುಲ್ ಗಾಂಧಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳಿಗಿಂತ ಹೆಚ್ಚು ಹಣವನ್ನು ಮುಸ್ಲಿಮರಿಗೆ ಒದಗಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ಇದೆ.

Read More
Next Story