ಸುನೀತಾ ಕೇಜ್ರಿವಾಲ್ ಅವರಿಂದ ರೋಡ್‌ಶೋ
x

ಸುನೀತಾ ಕೇಜ್ರಿವಾಲ್ ಅವರಿಂದ ರೋಡ್‌ಶೋ


ನವದೆಹಲಿ, ಏ. 27- ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಶನಿವಾರ ಸಂಜೆ ಎಎಪಿಯ ಪೂರ್ವ ದೆಹಲಿ ಅಭ್ಯರ್ಥಿ ಪರವಾಗಿ ತಮ್ಮ ಚೊಚ್ಚಲ ಚುನಾವಣೆ ರೋಡ್‌ಶೋ ನಡೆಸಿದರು.

ತೆರೆದ ವಾಹನದಲ್ಲಿ ನಿಂತು ಪೂರ್ವ ದೆಹಲಿ ಕ್ಷೇತ್ರದ ಕೊಂಡ್ಲಿ ಪ್ರದೇಶದಲ್ಲಿ ಮತದಾರರಿಗೆ ನಮಸ್ಕರಿಸಿದರು. ಅರವಿಂದ್ ಕೇಜ್ರಿವಾಲ್ ʻಮುಖ್ಯಮಂತ್ರಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವುದರಿಂದ, ಅವರ ಪತ್ನಿ ಎಎಪಿಯ ಚುನಾವಣೆ ಪ್ರಚಾರವನ್ನು ಮುನ್ನಡೆಸಲಿದ್ದಾರೆ. ಭಾನುವಾರ ಪಶ್ಚಿಮ ದೆಹಲಿ ಲೋಕಸಭೆ ಕ್ಷೇತ್ರದಲ್ಲಿ ರೋಡ್‌ಶೋ ನಡೆಸಲಿದ್ದಾರೆʼ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ʻಅವರು ದಕ್ಷಿಣ ದೆಹಲಿ, ನವದೆಹಲಿ ಕ್ಷೇತ್ರಗಳಲ್ಲಿ ಹಾಗೂ ಗುಜರಾತ್, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಎಎಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆʼ ಎಂದು ಮುಖಂಡರು ತಿಳಿಸಿದ್ದಾರೆ.

Read More
Next Story