ಆಂಧ್ರಪ್ರದೇಶ: ಅಪಹೃತ ಟಿಡಿಪಿ ಮತಗಟ್ಟೆ ಏಜೆಂಟರ ರಕ್ಷಣೆ
x

ಆಂಧ್ರಪ್ರದೇಶ: ಅಪಹೃತ ಟಿಡಿಪಿ ಮತಗಟ್ಟೆ ಏಜೆಂಟರ ರಕ್ಷಣೆ


ಅಮರಾವತಿ (ಆಂಧ್ರಪ್ರದೇಶ), ಮೇ 13- ಚಿತ್ತೂರು ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಮೂವರು ಟಿಡಿಪಿ ಮತಗಟ್ಟೆ ಏಜೆಂಟರನ್ನು ಪತ್ತೆ ಹಚ್ಚಿ ಭದ್ರತೆ ಒದಗಿಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮುಖೇಶ್ ಕುಮಾರ್ ಮೀನಾ ಸೋಮವಾರ ತಿಳಿಸಿದ್ದಾರೆ.

ಪುಂಗನೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಚಿತ್ತೂರು ಜಿಲ್ಲೆಯ ಸೇಡಂ ಮಂಡಲದ ಬೋಕರಮಂಡ ಗ್ರಾಮದಿಂದ ಟಿಡಿಪಿ ಏಜೆಂಟರನ್ನು ಕಿಡ್ನಾಪ್ ಮಾಡಲಾಗಿತ್ತು ಎಂದು ಸಿಇಒ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

‘ಮತಗಟ್ಟೆ 188, 189 ಮತ್ತು 199ರ ಟಿಡಿಪಿ ಏಜೆಂಟರನ್ನು ವೈಎಸ್‌ಆರ್‌ಸಿಪಿ ಮುಖಂಡರು ಮತಗಟ್ಟೆಗೆ ಹೋಗುವಾಗ ಅಪಹರಿಸಿದ್ದಾರೆ ಎಂದು ಟಿಡಿಪಿ ಜಿಲ್ಲಾ ಉಸ್ತುವಾರಿ ಜಗನ್ ಮೋಹನ್ ರಾಜು ದೂರಿದ್ದರು. ಚಿತ್ತೂರು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಗಳು ಅಪಹೃತ ಏಜೆಂಟರನ್ನು ಪಿಲೇರುವಿನಿಂದ ರಕ್ಷಿಸಿ, ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಟ್ಟಿ ತು. ಅಪಹರಣಕಾರರನ್ನು ಪತ್ತೆಗೆ ತನಿಖೆ ನಡೆಯುತ್ತಿದೆ ʼ ಎಂದು ಸಿಇಒ ತಿಳಿಸಿದರು.

ಆಂಧ್ರಪ್ರದೇಶದ 25 ಲೋಕಸಭೆ ಮತ್ತು 175 ವಿಧಾನಸಭೆ ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದೆ.

Read More
Next Story