ಬಸ್ ಚಾಲಕನ  ದುರ್ನಡತೆ: ತಿರುವನಂತಪುರ ಮೇಯರ್‌ ದೂರು
x

ಬಸ್ ಚಾಲಕನ ದುರ್ನಡತೆ: ತಿರುವನಂತಪುರ ಮೇಯರ್‌ ದೂರು


ತಿರುವನಂತಪುರಂ, ಏ. 29 - ಕೇರಳದ ಬಸ್ ಚಾಲಕರೊಬ್ಬರು ತನ್ನ ಹಾಗೂ ತನ್ನ ಕುಟುಂಬದವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ದೂರು ನೀಡಿದ್ದಾರೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಂದ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ವರದಿ ಕೇಳಿದ್ದಾರೆ.

ಆದರೆ, ರಸ್ತೆ ಮಧ್ಯದಲ್ಲಿ ಬಸ್ ತಡೆದ ಮೇಯರ್ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಚಾಲಕ ದೂರಿ ದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದಂತೆ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಮೇಯರ್ ಮತ್ತು ಅವರ ಕುಟುಂಬದವರು ಶನಿವಾರ ರಾತ್ರಿ ಪಾಲಯಂ ಜಂಕ್ಷನ್‌ನಲ್ಲಿ ಬಸ್‌ ತಡೆದು, ಚಾಲಕನೊಂದಿಗೆ ವಾಗ್ವಾದ ನಡೆಸಿದರು. ಚಾಲಕ ಲೈಂಗಿಕ ಸನ್ನೆಗಳನ್ನು ಮಾಡಿದರು ಎಂದು ಮೇಯರ್ ಆರೋಪಿಸಿದ್ದಾರೆ. ಚಾಲಕ ನಿರ್ಲಕ್ಷತನದಿಂದ ಬಸ್ ಚಾಲನೆ ಮಾಡಿದ್ದು, ಕಾರಿಗೆ ಡಿಕ್ಕಿ ಹೊಡೆಯುವಷ್ಟು ಹತ್ತಿರ ಬಂದಿತ್ತು. ತಾವು ಮತ್ತು ತಮ್ಮ ಅತ್ತಿಗೆ ಕಿಟಕಿ ಮೂಲಕ ಚಾಲಕನನ್ನು ನೋಡಿದೆವು. ಆತ ಲೈಂಗಿಕ ಸನ್ನೆ‌ ಮಾಡಿದರು ಮತ್ತು ಕಾರ್‌ ಹಿಂದಿಕ್ಕಿದರು ಎಂದು ಮೇಯರ್ ದೂರಿದ್ದಾರೆ.

ʻಬಸ್ ತಡೆದು ಮೇಯರ್ ಹಾಗೂ ಅವರ ಕುಟುಂಬದವರು ಸಮಸ್ಯೆ ಸೃಷ್ಟಿಸಿದರು. ವಿಷಯವನ್ನು ಕಾನೂನಿನಂತೆ ಮುಂದುವರಿಸುತ್ತೇನೆ. ಆದರೆ, ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲʼ ಎಂದು ಚಾಲಕ ಮಾಧ್ಯಮಗಳಿಗೆ ತಿಳಿಸಿದರು. ʻಆರ್ಯ ರಾಜೇಂದ್ರನ್ ಮೇಯರ್ ಮತ್ತು ಅವರ ಪತಿ ಸಚಿನ್ ದೇವ್ ಶಾಸಕ ಎನ್ನುವುದು ತಮಗೆ ಗೊತ್ತೇ ಇಲ್ಲʼ ಎಂದು ಚಾಲಕ ಹೇಳಿದ್ದಾರೆ.

ಕಂಟೋನ್ಮೆಂಟ್ ಪೊಲೀಸರು ಮೇಯರ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ʻತಮ್ಮ ಖಾಸಗಿ ಕಾರಿಗೆ ದಾರಿ ಮಾಡಿಕೊಡದ ಕಾರಣ ಸರ್ಕಾರಿ ಬಸ್‌ಗೆ ತಡೆ ಒಡ್ಡಲಾಗಿದೆʼ ಎಂಬ ಆರೋಪವನ್ನು ಮೇಯರ್ ನಿರಾಕರಿಸಿದರು. ಈಗಾಗಲೇ ಚಾಲಕರ ಮೇಲೆ ಎರಡು ಪ್ರಕರಣಗಳಿವೆ. ಮಹಿಳೆಯೊಬ್ಬರಿಗೆ ಅಶ್ಲೀಲ ಸನ್ನೆಗಳನ್ನು ತೋರಿಸಿದ್ದುಸೇರಿದಂತೆ ಈಗಾಗಲೇ ಆ ಚಾಲಕರ ಮೇಲೆ ಎರಡು ಪ್ರಕರಣಗಳಿವೆ ಎಂದು ದೂರಿದರು. ಜಾಮೀನು ನೀಡಬಹುದಾದ ಅಪರಾಧವಾದ್ದರಿಂದ, ಚಾಲಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಯರ್ ಮತ್ತು ಸಹ ಪ್ರಯಾಣಿಕರು ಚಾಲಕನೊಂದಿಗೆ ವಾಗ್ವಾದದಲ್ಲಿ ತೊಡಗಿರುವುದನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು.


Read More
Next Story