ಚುನಾವಣಾ ಆಯೋಗ ʻಬಿಜೆಪಿಯ ವಿಸ್ತೃತ ವಿಭಾಗʼ: ಆಪ್
ಹೊಸದಿಲ್ಲಿ, ಏ. 17 - ಚುನಾವಣಾ ಆಯೋಗವು ಬಿಜೆಪಿಯ ವಿಸ್ತೃತ ವಿಭಾಗದಂತೆ ಕೆಲಸ ಮಾಡುತ್ತಿದೆ ಎಂದು ಎಎಪಿ ಬುಧವಾರ ಆರೋಪಿಸಿದೆ.
ಚುನಾವಣಾ ಆಯೋಗವು ಮಾದರಿ ಸಂಹಿತೆಯ ಉಲ್ಲಂಘನೆಗಾಗಿ ಪಕ್ಷದ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ಗೆ ಆದೇಶಿಸಿರುವುದನ್ನು ಖಂಡಿಸಿದೆ.
ಮಾರ್ಚ್ 16 ರಂದು ನೀತಿ ಸಂಹಿತೆ ಜಾರಿಗೆ ಬಂದಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ವೈಎಸ್ಆರ್ ಕಾಂಗ್ರೆಸ್, ಎನ್. ಚಂದ್ರಬಾಬು ನಾಯ್ಡು ಮತ್ತು ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಕೆಲವು ಪೋಸ್ಟ್‌ಗಳನ್ನು ತೆಗೆದುಹಾಕಲು 'ಎಕ್ಸ್' ಗೆ ಆದೇಶಿಸಿದೆ.
ಆಮ್ ಆದ್ಮಿ ಪಕ್ಷದ ಮುಖ್ಯ ರಾಷ್ಟ್ರೀಯ ವಕ್ತಾರ ಪ್ರಿಯಾಂಕಾ ಕಕ್ಕರ್, ʻಬಿಜೆಪಿಯ ಪೋಸ್ಟ್‌ಗಳು ಮತ್ತು ಭಿತ್ತಿಪತ್ರ ಕುರಿತು ಆಪ್ ಚುನಾವಣೆ ಆಯೋಗಕ್ಕೆ ಎರಡು ದೂರು ಸಲ್ಲಿಸಿದೆ. ಆದರೆ, ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗವು ಬಿಜೆಪಿಯ ವಿಸ್ತೃತ ವಿಭಾಗದಂತೆ ಕೆಲಸ ಮಾಡುತ್ತಿರುವುದು ದೌರ್ಭಾಗ್ಯʼ ಎಂದು ಹೇಳಿದರು.