ತಮಿಳುನಾಡಿಗೆ ನಿಮ್ಮ ಕೊಡುಗೆ ಏನು?:  ಪ್ರಧಾನಿಯನ್ನು ಪ್ರಶ್ನಿಸಿದ ಕಾಂಗ್ರೆಸ್ ‌
x

ತಮಿಳುನಾಡಿಗೆ ನಿಮ್ಮ ಕೊಡುಗೆ ಏನು?: ಪ್ರಧಾನಿಯನ್ನು ಪ್ರಶ್ನಿಸಿದ ಕಾಂಗ್ರೆಸ್ ‌

ʻ#ChuppiTodoPradhanMantrijiʼ ಹ್ಯಾಶ್‌ಟ್ಯಾಗ್ ಬಳಸಿದ ಜೈರಾಮ್‌ ರಮೇಶ್‌


ಹೊಸದಿಲ್ಲಿ, ಆ.13- ಪ್ರಧಾನಿ ಸೇಲಂ ಸ್ಟೀಲ್ ಕಾರ್ಖಾನೆಯನ್ನು ಖಾಸಗೀಕರಣಕ್ಕೆ ಏಕೆ ಉತ್ಸುಕರಾಗಿದ್ದಾರೆ, ರಾಜ್ಯದಲ್ಲಿ ಒಂದೇ ಒಂದು ಶಿಕ್ಷಣ ಸಂಸ್ಥೆಯನ್ನು ಏಕೆ ಸ್ಥಾಪಿಸಿಲ್ಲ ಎಂದು ಕಾಂಗ್ರೆಸ್‌, ಬಿಜೆಪಿಯನ್ನು ಪ್ರಶ್ನಿಸಿದೆ.

ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭೆ ಚುನಾವಣೆ ಪ್ರಚಾರಕ್ಕೂ ಮುನ್ನ ಕಾಂಗ್ರೆಸ್ ಶನಿವಾರ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ಮಧುರೈನಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಕೇವಲ ಪ್ರಚಾ ರದ ಸ್ಟಂಟ್ ಆಗಿದೆಯೇ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮೋದಿ ಅವರನ್ನು ಎಕ್ಸ್‌ ನಲ್ಲಿ ಪ್ರಶ್ನಿಸಿದ್ದಾರೆ.

ʻತಮಿಳುನಾಡಿಗೆ ತೆರಳುತ್ತಿರುವ ಪ್ರಧಾನಿಗೆ ಇಂದಿನ ಪ್ರಶ್ನೆಗಳು: ಏಮ್ಸ್‌ ಮಧುರೈ ಕೇವಲ ಪ್ರಚಾರದ ಸ್ಟಂಟ್? ಬಿಜೆಪಿ ಏಕೆ ತಮಿಳುನಾಡಿನಲ್ಲಿ ಒಂದೇ ಒಂದು ಪ್ರಮುಖ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿಲ್ಲ? ಸೇಲಂ ಸ್ಟೀಲ್ ಕಾರ್ಖಾನೆ ಖಾಸಗೀಕರಣಗೊಳಿಸಲು ಪ್ರಧಾನಿ ಏಕೆ ಉತ್ಸುಕರಾಗಿದ್ದರುʼ, ಎಂದು ಪ್ರಶ್ನಿಸಿದ್ದಾರೆ.

ʻಬಿಜೆಪಿ ʻಜುಮ್ಲಾʼ ಪಕ್ಷ. 2015-16 ರ ಬಜೆಟ್‌ನಲ್ಲಿ ಮಧುರೈನಲ್ಲಿ ಏಮ್ಸ್ ಸ್ಥಾಪನೆಯನ್ನು ಘೋಷಿಸಿತು. ಆದರೆ, ನಾಲ್ಕು ವರ್ಷವಾದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಆನಂತರ 2019 ರ ಚುನಾವಣೆಗೆ ಸ್ವಲ್ಪ ಮೊದಲು ಶಂಕುಸ್ಥಾಪನೆ ಮಾಡಿದರು. ಮತ್ತೆ ಐದು ವರ್ಷ ಕಳೆ ಯಿತು. ಈಗ ಚುನಾವಣೆ ಮುಂದಿರುವಾಗ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆʼ ಎಂದು ಹೇಳಿದರು.

ʻಪ್ರಧಾನಿ ಪ್ರಚಾರದಲ್ಲಿ ತೊಡಗಿರುವಾಗ, ಏಮ್ಸ್ ಮಧುರೈ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ 'ಯಾವುದೇ ಮೂಲಸೌಲಭ್ಯಗಳಿಲ್ಲದೆ' ಆರಂಭವಾಯಿತು. ಐದು ವಿದ್ಯಾರ್ಥಿಗಳು ಒಂದೇ ಕೊಠಡಿ ಹಂಚಿಕೊಂಡಿದ್ದಾರೆ; ಒಪಿಡಿ ಅಥವಾ ಆಪರೇಷನ್ ಥಿಯೇಟರ್‌ಗಳಿಲ್ಲ; ಗ್ರಂಥಾಲಯದಲ್ಲಿ ಮೊದಲ ವರ್ಷದ ಪುಸ್ತಕಗಳು ಮಾತ್ರ ಇವೆ. ತಮಿಳುನಾಡಿಗೆ ಪ್ರಧಾನಿ ನೀಡಿದ ಪ್ರಧಾನ ವೈದ್ಯಕೀಯ ಸಂಸ್ಥೆ ಇದೇ? ನಿಜವಾದ ಏಮ್ಸ್ ನಿರ್ಮಾಣಕ್ಕೆ ಎಷ್ಟು ಚುನಾವಣೆ ಬರಬೇಕು?ʼ ಎಂದು ಕೇಳಿದರು.

ಬಿಜೆಪಿ ಅಧಿಕಾರದ 10 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಒಂದೇ ಒಂದು ಪ್ರಮುಖ ಶಿಕ್ಷಣ ಸಂಸ್ಥೆ ಸ್ಥಾಪಿಸಿಲ್ಲ. ಐಐಟಿ-ಮದ್ರಾಸ್, ಎನ್‌ಐಟಿ-ತಿರುಚಿರಾಪಳ್ಳಿ, ಐಐಎಂ-ತಿರುಚಿರಾಪಳ್ಳಿ ಮತ್ತು ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ಎಲ್ಲಾ ಪ್ರಮುಖ ಶಿಕ್ಷಣ ಸಂಸ್ಥೆಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಸ್ಥಾಪಿಸಲ್ಪಟ್ಟವುʼ ಎಂದು ಹೇಳಿದ್ದಾರೆ.

ಸೇಲಂ ಉಕ್ಕು ಸ್ಥಾವರ ಮಾರಾಟ ಯತ್ನ: 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಲ್ಲಿದೆ? 2019 ರಲ್ಲಿ ಸೇಲಂ ಸ್ಟೀಲ್ ಪ್ಲಾಂಟ್ ಖಾಸಗೀಕರಣ ನಿರ್ಧಾರ ಕೈಗೊಂಡಾಗ 2,000 ಜನರ ಬೃಹತ್ ಸಮಾವೇಶ ನಡೆಸಲಾಯಿತು. ಸ್ಥಾವರಕ್ಕೆ ತಮ್ಮ ಭೂಮಿ ನೀಡಿದ ಕಾರ್ಮಿಕರು, ಕುಟುಂಬದ ಸದಸ್ಯರು ಮತ್ತು ರೈತರನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಖಾನೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ(ಸೇ‌‌ಲ್) ಪಾಲ್ಗೊಳ್ಳುವಿಕೆ ಕಡಿಮೆ ಮಾಡಲಾಗಿದೆಯೆಂದು ಕಾರ್ಮಿಕರು ಆರೋಪಿಸಿದ್ದಾರೆʼ ಎಂದು ರಮೇಶ್‌ ಹೇಳಿದರು.

ʻಬಿಜೆಪಿ ತಾನು ಬಂಡವಾಳಶಾಹಿಗಳ ಪರ ಎಂದು ಸಾಬೀತುಪಡಿಸಿದೆ. ಪ್ರತಿಭಟನೆಯಿಂದ ಘಟಕವನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಆದರೆ, ಬಿಜೆಪಿ ಮಾರಾಟಕ್ಕೆ ಏಕೆ ಉತ್ಸುಕವಾಗಿತ್ತು ಎಂಬ ಪ್ರಶ್ನೆ ಉಳಿದಿದೆʼ ಎಂದು ʻ#ChuppiTodoPradhanMantrijiʼ ಹ್ಯಾಶ್‌ಟ್ಯಾಗ್ ಬಳಸಿ ಪ್ರಶ್ನಿಸಿದ್ದಾರೆ.

Read More
Next Story