US Polls 2024 : ಅಮೆರಿಕದ ಚುನಾವಣಾ ಪ್ರಚಾರದ ಹೇಳಿಕೆಗಳಿಗೂ ದಕ್ಷಿಣ ಭಾರತಕ್ಕೂ ಏನು ಸಂಬಂಧ?
x

US Polls 2024 : ಅಮೆರಿಕದ ಚುನಾವಣಾ ಪ್ರಚಾರದ ಹೇಳಿಕೆಗಳಿಗೂ ದಕ್ಷಿಣ ಭಾರತಕ್ಕೂ ಏನು ಸಂಬಂಧ?

ಜೆಡಿ ವ್ಯಾನ್ಸ್ ಅವರ ಬಿಡುಬೀಸು ಹೇಳಿಕೆಯು ಹೆರಿಗೆ, ಶಿಶುಪಾಲನೆ ಮತ್ತು ಜನಸಂಖ್ಯಾ ನಿಯಂತ್ರಣ ನೀತಿ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆಗಳನ್ನು ಹುಟ್ಟು ಹಾಕಿವೆ. ದಕ್ಷಿಣ ಭಾರತಕ್ಕೆ ಇದು ನೇರ ಸಂಬಂಧ ಹೊಂದಿದೆ.


ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಲ್ಲಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ತಮಿಳುನಾಡಿನೊಂದಿಗೆ ಸಂಪರ್ಕ ಹೊಂದಿದ್ದಾರೆ. ಮತ್ತೊಂದೆಡೆ, ಡೊನಾಲ್ಡ್ ಟ್ರಂಪ್ ಅವರ ಸಹವರ್ತಿ ಮತ್ತು ರಿಪಬ್ಲಿಕ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಪತ್ನಿ ಪತ್ನಿ ಉಷಾ ವ್ಯಾನ್ಸ್ ಆಂಧ್ರಪ್ರದೇಶ ಮೂಲದವರು.

ರಿಪಬ್ಲಿಕನ್ ಅಥವಾ ಡೆಮಾಕ್ರಟಿಕ್ ಪಕ್ಷಗಳಲ್ಲಿ ಯಾರೇ ಅಧಿಕಾರ ವಹಿಸಿಕೊಂಡರೂ, ಭಾರ‌ತಕ್ಕೊಂದು ಸಂಪರ್ಕ ಇದ್ದೇ ಇರುತ್ತದೆ. ಹೀಗಾಗಿ ಭಾರತೀಯರು ಹೆಮ್ಮೆ ಪಡುವುದಂತೂ ಖಚಿತ. ಆದರೆ ಆ ನಾಯಕರಿಗೆ ತಮ್ಮ ಮೂಲಕ್ಕಿಂತಲೂ ಹೆಚ್ಚಾಗಿ ರಾಜಕೀಯ ಲೆಕ್ಕಾಚಾರಗಳೇ ಮುಖ್ಯವಾಗುತ್ತದೆ ಎಂಬುದು ಗಮನಾರ್ಹ. ತಮ್ಮ ರಾಷ್ಟ್ರದ ರಾಷ್ಟ್ರದ ಅಗತ್ಯಗಳು ಮತ್ತು ರಾಜಕೀಯ ಕಾರ್ಯಸೂಚಿಗೆ ಆದ್ಯತೆ ನೀಡುತ್ತಾರೆ ಎಂಬುದರಲ್ಲಿ ಮಿಥ್ಯವೇನೂ ಇಲ್ಲ .

ನಾಯಕರ ಭಾರತ ಸಂಪರ್ಕಗಳು

ಕಮಲಾ ಹ್ಯಾರಿಸ್ ಮತ್ತು ಉಷಾ ವ್ಯಾನ್ಸ್ ಇಬ್ಬರೂ ಭಾರತೀಯ ವಲಸಿಗರ ಎರಡನೇ ತಲೆಮಾರಿನವರು ವಿಶ್ವದ ಪ್ರತಿಭಾವಂತ ವ್ಯಕ್ತಿಗಳನ್ನು ಆಕರ್ಷಿಸುವ ಅಮೆರಿಕದ ಮುಕ್ತ ನೀತಿಯಿಂದ ಅವರ ಕುಟುಂಬಗಳು ಪ್ರಯೋಜನ ಪಡೆದುಕೊಂಡಿರುವುದಕ್ಕೆ ಅವರೆಲ್ಲರೂ ಅಲ್ಲಿದ್ದಾರೆ.

ಅಮೆರಿಕದಲ್ಲಿ ಬೆಳೆದ ಮತ್ತು ಶಿಕ್ಷಣ ಪಡೆದ ಅವರು ಸ್ಥಳೀಯ ಮೌಲ್ಯಗಳು ಮತ್ತು ಸಂಸ್ಕೃತಿಗಳನ್ನು ಅರಗಿಸಿಕೊಂಡಿದ್ದಾರೆ. ವಿವಿಧ ಸಂದರ್ಭಗಳಿಗೆ ಮತ್ತು ದೇಶಕ್ಕೆ ಸರಿಹೊಂದುವಂತೆ ತಮ್ಮ ಗುರುತು ಪ್ರಸ್ತುತಪಡಿಸಿದ್ದಾರೆ.

ಉದಾಹರಣೆಗೆ, ಕಮಲಾ ಹ್ಯಾರಿಸ್ ಆಫ್ರಿಕನ್-ಅಮೆರಿಕನ್ ಎಂದು ಗುರುತಿಸಿಕೊಳ್ಳುತ್ತಾರೆ. ಇದು ಅವರ ಜಮೈಕಾದ ಪರಂಪರೆಯ ಪ್ರತೀಕ. ಜತೆಗೆ ಭಾರತೀಯ ಬೇರುಗಳನ್ನು ಸ್ಮರಿಸುತ್ತಾರೆ. ಎಲ್ಲಿಯ ತನಕ ಎಂದರೆ ಬಿಡುವಿಲ್ಲದ ಪ್ರಚಾರದ ನಡುವೆಯೂ ದೀಪಾವಳಿ ಹಬ್ಬಕ್ಕೆ ಸಮಯ ಮೀಸಲಿಟ್ಟಿದ್ದರು.

ಮಕ್ಕಳಿಲ್ಲದ ಬೆಕ್ಕು ಸಾಕುವ ಮಹಿಳೆ

ಇಬ್ಬರೂ ಮಹಿಳೆಯರನ್ನು ಭಾರತದಲ್ಲಿ ಸೂಕ್ಷ್ಮವಾಗಿ ಗಮನಿಸುವ ನಡುವೆ ಅಮೆರಿಕದ ಚುನಾವಣೆಯ ಪ್ರಚಾರ ತಂತ್ರವೊಂದು ಸುದ್ದಿಗೆ ಗ್ರಾಸವಾಗಿದೆ. ಯಾಕೆಂದರೆ ಆದರೆ ಕಮಲಾ ಹ್ಯಾರಿಸ್ ಅವರ ಬಗ್ಗೆ ರಿಪಬ್ಲಿಕ್‌ ಪಕ್ಷದ ಜೆಡಿ ವ್ಯಾನ್ಸ್ ನೀಡಿದ ಹೇಳಿಕೆಯೊಂದು ಹೆಚ್ಚು ಗಮನ ಸೆಳೆದಿದೆ. ಅವರನ್ನು ʼಮಕ್ಕಳಿಲ್ಲದ ಬೆಕ್ಕು ಸಾಕುವ ಮಹಿಳೆʼ ಎಂದು ಕರೆದಿದ್ದರು. ಹಲವು ಬೆಕ್ಕಗಳನ್ನು ಸಾಕಿಕೊಂಡು ಅದರ ಜತೆಗೆ ಗೊಣಗುತ್ತಾ ಜೀವನ ನಡೆಸುವ ಮಧ್ಯವಯಸ್ಸಿನ ಮಹಿಳೆ ಎಂಬುದೇ ಇದರರ್ಥ. ಅಮೆರಿಕದಲ್ಲಿ ಇದು ಮಾಮೂಲಿ. ಮಕ್ಕಳಿಲ್ಲದ ಮಹಿಳೆಯರು ಬೆಕ್ಕುಗಳನ್ನು ಸಾಕಿಕೊಂಡಿರುತ್ತಾರೆ. ವಾಸ್ತವದಲ್ಲಿ ಕಮಲಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ (ಮಲ ಮಕ್ಕಳು). ಆದರೆ, ಅವರು ಗರ್ಭಪಾತ ಪರವಾಗಿರುವುದೇ ಅವರನ್ನು ಆ ರೀತಿ ಕರೆಯಲು ಕಾರಣ.

ಈ ಒರಟು ಹೇಳಿಕೆಯು ಭಾರತದ ದಕ್ಷಿಣ ಭಾಗಗಳಲ್ಲಿ ಪ್ರತಿಧ್ವನಿಸುವ ಜನಸಂಖ್ಯಾ ಕುಸಿತ ಮತ್ತು ಶಿಶುಪಾಲನೆಯಂತಹ ನೀತಿ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

2021 ರ ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ, ವ್ಯಾನ್ಸ್ "ಡೆಮಾಕ್ರಟ್‌ ಪಕ್ಷವನ್ನು, ಕಾರ್ಪೊರೇಟ್ ಶ್ರೀಮಂತರು ಮತ್ತು ಮಕ್ಕಳಿಲ್ಲದ ಬೆಕ್ಕು ಸಾಕುವ ಮಹಿಳೆಯರ ಗುಂಪು ನಡೆಸುತ್ತಿದೆ " ಎಂದು ಹೇಳಿದ್ದರು. ಡೆಮಾಕ್ರಟಿಕ್ ಪಕ್ಷವನ್ನು "ಕುಟುಂಬ ವ್ಯವಸ್ಥೆಯ ವಿರೋಧಿ ಮತ್ತು ಮಕ್ಕಳ ವಿರೋಧಿ" ಎಂದು ಬಣ್ಣಿಸಿದ್ದರು .

ಸಿಎನ್ಎನ್ ಪ್ರಕಾರ, 2020 ರ ಚುನಾವಣೆಯಲ್ಲಿ, ಶೇಕಡಾ 63ರಷ್ಟು ಒಂಟಿ ಮಹಿಳೆಯರು ಜೋ ಬೈಡೆನ್‌ಗೆ ಮತ ಚಲಾಯಿಸಿದ್ದರು. ಹೀಗಾಗಿ ಆಯ್ಕೆ ಅಥವಾ ಪರಿಸ್ಥಿತಿಯಿಂದ ಮಕ್ಕಳಿಲ್ಲದ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಅವಮಾನ ಎಂದು ವ್ಯಾಖ್ಯಾನಿಸಲಾಗಿದೆ.

ಭಾರತದ ಜನಸಂಖ್ಯಾ ಸಮಸ್ಯೆ

"ಮಕ್ಕಳಿಲ್ಲದ ಬೆಕ್ಕು ಸಾಕುವ ಮಹಿಳೆ" ಹೇಳಿಕೆ ಅಮೆರಿಕನ್‌ ಸಂಸ್ಕೃತಿಯಲ್ಲಿ ಆಳ ಅರ್ಥ ಹೊಂದಿದೆ. ಇದು ನ್ಯೂಯಾರ್ಕ್‌ನಲ್ಲಿ 50 ಬೆಕ್ಕುಗಳೊಂದಿಗೆ ವಾಸಿಸುವ ತಾಯಿ ಮತ್ತು ಮಗಳ ಬಗ್ಗೆ 1970 ರ ಸಾಕ್ಷ್ಯಚಿತ್ರದಿಂದ ಹುಟ್ಟಿಕೊಂಡಿರುವುದು. ಇದು ಲೈಂಗಿಕ ನಿರೂಪಣೆಯೂ ಆಗಿದೆ.

ಯುಎಸ್ ಮತ್ತು ಭಾರತವು ಜಿಡಿಪಿ ಮತ್ತು ತಲಾ ಆದಾಯದಲ್ಲಿ ಭಿನ್ನವಾಗಿದ್ದರೂ, ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿನ ಆಯ್ದ ಸಾಮಾಜಿಕ ವ್ಯವಸ್ಥೆಗಳನ್ನು ಅಮೆರಿಕಕ್ಕೆ ಹೋಲಿಸಬಹುದು.

ದಕ್ಷಿಣ ಭಾರತದ ರಾಜ್ಯಗಳು 1.6 ಫಲವತ್ತತೆ ದರ ಹೊಂದಿದ್ದು ಇದು ಅಮೆರಿಕದಂತೆಯೇ ಇದೆ. ಆದರೆ ಭಾರತದ ರಾಷ್ಟ್ರೀಯ ಸರಾಸರಿ 2.0 ಗೆ ವ್ಯತಿರಿಕ್ತವಾಗಿದೆ. ಈ ಕುಸಿತವು ದಕ್ಷಿಣದ ರಾಜಕೀಯ ನಾಯಕರನ್ನು ಮಹಿಳೆಯರನ್ನು ಹೆಚ್ಚು ಮಕ್ಕಳನ್ನು ಹೊಂದಲು ಒತ್ತಾಯಿಸಲು ಪ್ರೇರೇಪಿಸಿದೆ.

ಜನಸಂಖ್ಯಾ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಚ್ಚು ಮಕ್ಕಳನ್ನು ಹೆರುವುದು ಅತ್ಯಗತ್ಯ ಎಂಬುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ವಾದಿಸಿದ್ದರು. ಇದೇ ಧಾಟಿಯಲ್ಲಿ, ತಮಿಳುನಾಡಿನ ಅವರ ಸಹವರ್ತಿ ಎಂ.ಕೆ.ಸ್ಟಾಲಿನ್ ಅವರು ಹೇಳಿದ್ದರು. ಯಾಕೆಂದರೆ ಕಡಿಮೆ ಜನಸಂಖ್ಯೆಯ ಸಂಖ್ಯೆಯು ಲೋಕಸಭೆಯಲ್ಲಿ ಕಡಿಮೆ ದಕ್ಷಿಣ ರಾಜ್ಯಗಳಲ್ಲಿ ಕಡಿಮೆ ಪ್ರಾತಿನಿಧ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ.

ಯುಎಸ್, ಭಾರತದಲ್ಲಿ ಶಿಶುಪಾಲನಾ ಸಮಸ್ಯೆಗಳು

ಕುತೂಹಲಕಾರಿ ಸಂಗತಿಯೆಂದರೆ ವ್ಯಾನ್ಸ್ ಜನನ ಪ್ರಮಾಣ ಕುಸಿಯುತ್ತಿರುವುದನ್ನು "ನಾಗರಿಕ ಬಿಕ್ಕಟ್ಟು" ಎಂದು ಖಂಡಿಸಿದ್ದಾರೆ. ಮಕ್ಕಳಿಲ್ಲದ ವ್ಯಕ್ತಿಗಳು ಹೆಚ್ಚಿನ ತೆರಿಗೆ ಕಟ್ಟುವವರು ಮತ್ತು ಕಡಿಮೆ ಮತದಾನದ ಹಕ್ಕು ಹೊಂದಿರುವವರು ಎಂಬ ವಾದ ಮಂಡಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳು ಇದೇ ಸ್ಥಿತಿಯಲ್ಲಿದೆ. ಈಗಾಗಲೇ ಕಡಿಮೆ ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಸಂಸದೀಯ ಪ್ರಾತಿನಿಧ್ಯದಲ್ಲಿ ಸಂಭಾವ್ಯ ಕಡಿತ ಎದುರಿಸುತ್ತಿದೆ.

ನಾಯ್ಡು ಮತ್ತು ಸ್ಟಾಲಿನ್ ಅವರಂತಹ ನಾಯಕರಿಂದ ಹೆಚ್ಚು ಮಕ್ಕಳನ್ನು ಹೆರುವಂತಹ ನೀಡಿರುವ ಕರೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟ್ರೋಲ್‌ಗೆ ಕಾರಣವಾಗಿವೆ. ಮಕ್ಕಳನ್ನು ಬೆಳೆಸುವ ವೆಚ್ಚವನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಪ್ರಮುಖವಾಗಿ ಗಗನಕ್ಕೇರುತ್ತಿರುವ ಶಾಲಾ ಶುಲ್ಕದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ಆದರೆ, ಭಾರತೀಯ ಪೋಷಕರು ಅಮೆರಿಕದ ಪೋಷಕರ ರೀತಿ ಶಾಲೆಗೆ ಹೋಗುವ ಮಕ್ಕಳಿಗೆ ತೆರಿಗೆ ಕಡಿತ ಪಡೆಯುವುದಿಲ್ಲ. ಅನುಕೂಲಗಳು ಇಲ್ಲ. ಭಾರತದ ನಗರ ಪ್ರದೇಶಗಳಲ್ಲಿ, ಕೆಲಸ ಮಾಡುವ ಪೋಷಕರು ವಿಶೇಷವಾಗಿ ಚಿಕ್ಕ ಮಕ್ಕಳನ್ನು ಹೊಂದಿರುವವರು ಕೆಲಸ ಮತ್ತು ಜೀವನ ಸಮತೋಲನದಲ್ಲಿ ಇಟ್ಟುಕೊಳ್ಳುವುದಕ್ಕೆ ಹೆಣಗಾಡುತ್ತಾರೆ. ಡೇಕೇರ್ ಸೌಲಭ್ಯಗಳು ದುಬಾರಿ ಮತ್ತು ಹುಡುಕಲು ಕಷ್ಟ. ಅಲ್ಲದೆ, ಮಕ್ಕಳ ಸುರಕ್ಷತೆಯು ಗಂಭೀರ ಕಾಳಜಿಯ ವಿಷಯ.

ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಬದಲಾವಣೆ

ಭಾರತದ ಪ್ರಸ್ತುತ ಕೌಟುಂಬಿಕ ನೀತಿಗಳು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವತ್ತ ಗಮನ ಹರಿಸಿವೆ. ದುರದೃಷ್ಟವಶಾತ್, ಉತ್ತರ ಭಾರತದ ಬೇಜವಾಬ್ದಾರಿ ರಾಜಕಾರಣಿಗಳು ಇಂತಹ ಹೇಳಿಕೆಗಳ ಬಗ್ಗೆ ವಾಸ್ತವಿಕ ಮಾಹಿತಿಯ ಕೊರತೆಯಿಂದಾಗಿ ಕಡಿಮೆ ಜನನ ಪ್ರಮಾಣದ ಹೇಳಿಕೆಗಳನ್ನು ಕೋಮು ವಿಷಯವಾಗಿ ಪರಿವರ್ತಿಸಲು ಪ್ರಯತ್ನಿಸಿದ್ದಾರೆ.

ದಕ್ಷಿಣದ ರಾಜ್ಯಗಳು ತಮ್ಮ ಕುಸಿಯುತ್ತಿರುವ ಜನನ ಪ್ರಮಾಣ ಸಮಸ್ಯೆಯ ನಡುವೆ ವಯಸ್ಸಾದ ಜನಸಂಖ್ಯೆಯ ಹೆಚ್ಚಳದ ಸವಾಲನ್ನು ಸಹ ಎದುರಿಸುತ್ತಿವೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಉತ್ತರ ಭಾರತಕ್ಕಿಂತ ಈ ರಾಜ್ಯಗಳಲ್ಲಿ ಹೆಚ್ಚಿವೆ.

ದಕ್ಷಿಣದಲ್ಲಿನ ಈ ಜನಸಂಖ್ಯಾ ಬದಲಾವಣೆಯು ದುಡಿಯುವ ವಯಸ್ಸಿನ ಜನಸಂಖ್ಯೆಯ ಕುಸಿತಕ್ಕೆ ಅನುಗುಣವಾಗಿದೆ. ಉದಾಹರಣೆಗೆ, ತಮಿಳುನಾಡು ಮತ್ತು ಕೇರಳದಲ್ಲಿ ಸರಾಸರಿ ವಯಸ್ಸು ಸರಿಸುಮಾರು 30 ಆಗಿದ್ದರೆ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಇದು ಸುಮಾರು 20 ಆಗಿದೆ.

ಭಾರತದಲ್ಲಿ ಜನಸಂಖ್ಯಾ ಬದಲಾವಣೆ

ಅಮೆರಿಕದಲಿ ವ್ಯಾನ್ಸ್ ತಮ್ಮಅಪ್ರಾಪ್ತ ವಯಸ್ಸಿನ ಮಕ್ಕಳ ಪರವಾಗಿ ಮತ ಚಲಾಯಿಸಲು ಪೋಷಕರಿಗೆ ಅವಕಾಶ ನೀಡುವ ಶಾಸನಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಶಿಶುಪಾಲನೆಗೆ ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಭಾರತದಲ್ಲಿ, ಕುಟುಂಬ ಬಿಕ್ಕಟ್ಟು ಅಮೆರಿಕದಷ್ಟು ತೀವ್ರವಾಗಿಲ್ಲ. ದಕ್ಷಿಣ ರಾಜ್ಯಗಳ, ಅನೇಕ ವಯಸ್ಸಾದ ವ್ಯಕ್ತಿಗಳು ಹೆಚ್ಚಾಗಿ ತಮ್ಮನ್ನು ಒಂಟಿಯಾಗಿ ಕಾಣುತ್ತಾರೆ. ಅವರ ಮಕ್ಕಳು ಉತ್ತಮ ಅವಕಾಶಗಳಿಗಾಗಿ ವಿದೇಶಕ್ಕೆ ವಲಸೆ ಹೋಗಿದ್ದಾರೆ.

ಭಾರತದಲ್ಲಿನ ಅಸಮ ಜನಸಂಖ್ಯಾ ಬದಲಾವಣೆಗಳನ್ನು ಗಮನಿಸಿದರೆ - ದಕ್ಷಿಣದ ರಾಜ್ಯಗಳು ಅದರ ಪರಿಣಾಮವನ್ನು ಹೆಚ್ಚು ತೀವ್ರವಾಗಿ ಅನುಭವಿಸುತ್ತಿವೆ. ಜನರು ಉತ್ತರದಿಂದ ದಕ್ಷಿಣಕ್ಕೆ ವಲಸೆ ಹೋಗುವ ಗಮನಾರ್ಹ ಬದಲಾವಣೆ ಈಗಾಗಲೇ ವಾಸ್ತವವಾಗಿದೆ.

Read More
Next Story