ನವಲ್ನಿ ನೀಡಿದ ಸಂದೇಶಕ್ಕೆ ಸಾವಿಲ್ಲ
x

ನವಲ್ನಿ ನೀಡಿದ ಸಂದೇಶಕ್ಕೆ ಸಾವಿಲ್ಲ

ನೀವು ಸಂದೇಶವಾಹಕನನ್ನು ಕೊಲ್ಲಬಹುದು; ಸಂದೇಶವನ್ನಲ್ಲ


ಮಾಸ್ಕೋ, ಫೆ 16: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರೋಧಿ ಅಲೆಕ್ಸಿ ನವಲ್ನಿ(47) ಶುಕ್ರವಾರ ಜೈಲಿನಲ್ಲಿ ನಿಧನರಾದರು ಎಂದು ಸೆರೆಮನೆ ಅಧಿಕಾರಿಗಳು ತಿಳಿಸಿದ್ದಾರೆ.

ನವಲ್ನಿ ಅಧಿಕೃತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಕ್ರೆಮ್ಲಿನ್ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದ ಅವರು ಶುಕ್ರವಾರ ಅಸ್ವಸ್ಥರಾಗಿ, ಪ್ರಜ್ಞೆ ಕಳೆದುಕೊಂಡರು ಎಂದು ಫೆಡರಲ್ ಸೆರೆಮನೆ ತಿಳಿಸಿದೆ.

ನವಲ್ನಿ ಅವರ ವಕ್ತಾರ ಕಿರಾ ಯರ್ಮಿಶ್ ಅವರು ಸಾಮಾಜಿಕ ವೇದಿಕೆ ಎಕ್ಸ್‌ ನಲ್ಲಿ ʻತಂಡವು ಅವರ ಸಾವಿನ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಅವರ ವಕೀಲರು ಅವರನ್ನು ಬಂಧಿಸಿದ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದರುʼ ಎಂದು ಬರೆದಿದ್ದಾರೆ. ಉಗ್ರವಾದದ ಆರೋಪದ ಮೇಲೆ 19 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದ ನವಲ್ನಿ ಅವರನ್ನು ಡಿಸೆಂಬರ್‌ನಲ್ಲಿ ಮಧ್ಯ ರಷ್ಯಾದ ವ್ಲಾಡಿಮಿರ್ ಪ್ರದೇಶದ ಅತ್ಯುನ್ನತ ಮಟ್ಟದ ಭದ್ರತೆಯ ಸೆರೆಮನೆಗೆ ವರ್ಗಾಯಿಸಲಾಯಿತು. ಮಾಸ್ಕೋದಿಂದ ಈಶಾನ್ಯಕ್ಕೆ 1,900 ಕಿಮೀ ದೂರದ ಖಾರ್ಪ್ ಪಟ್ಟಣಕ್ಕೆ ವರ್ಗಾವಣೆಯನ್ನು ಅವರು ವಿರೋಧಿಸಿದರು. ಇದು ನವಲ್ನಿ ಅವರನ್ನು ಮೌನವಾಗಿಸುವ ಪ್ರಯತ್ನ ಎಂದು ದೂರಿದ್ದರು. ಖಾರ್ಪ್ ದೀರ್ಘ ಅವಧಿಯ, ತೀವ್ರವಾದ ಚಳಿಗಾಲಕ್ಕೆ ಕುಖ್ಯಾತವಾಗಿದೆ. ಇಲ್ಲಿರುವ ಕಲ್ಲಿದ್ದಲು ಗಣಿಗಳು ಸೋವಿಯತ್ ಗುಲಾಗ್ ಜೈಲು-ಶಿಬಿರ ವ್ಯವಸ್ಥೆಯ ಭಾಗವಾಗಿದ್ದವು.

ನರ ಏಜೆಂಟ್ ವಿಷಪ್ರಾಶನದಿಂದ ಜರ್ಮನಿಯಲ್ಲಿ ಚೇತರಿಸಿಕೊಂಡ ನಂತರ ಮಾಸ್ಕೋಗೆ ಮರಳಿದರು. ಜನವರಿ 2021 ರಿಂದ ಸೆರೆಮನೆಯಲ್ಲಿದ್ದರು. ಬಂಧನಕ್ಕೆ ಮುನ್ನ ಭ್ರಷ್ಟಾಚಾರದ ವಿರುದ್ಧ ಹಾಗೂ ಪುಟಿನ್‌ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದರು; ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೂರು ಬಾರಿ ಜೈಲು ಶಿಕ್ಷೆ ಅನುಭವಿಸಿದರು.

ಸಂದೇಶಕ್ಕೆ ಸಾವಿಲ್ಲ:

ಬ್ಲೂಮಿಂಗ್ಟನ್ (ಯುಎಸ್): ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಉಕ್ರೇನ್ ಯುದ್ಧ ವಿರೋಧಿ ಅಭ್ಯರ್ಥಿ ಬೋರಿಸ್ ನಡೆಜ್‌ಡಿನ್ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಲು ಜನವರಿ 2024 ರಲ್ಲಿ ರಷ್ಯನ್ನರು ಸರತಿ ಸಾಲಿನಲ್ಲಿ ಶೂನ್ಯ ತಾಪಮಾನವನ್ನು ಸಹಿಸಿಕೊಂಡು ನಿಂತುಕೊಂಡಿದ್ದರು. ಇದು ಪ್ರಜಾಪ್ರಭುತ್ವದ ಪರ ಹೋರಾಟಗಾರ ನವಲ್ನಿ ತೋರಿಸಿಕೊಟ್ಟ ಮಾರ್ಗ.

ಒಂದು ದಶಕಕ್ಕೂ ಹೆಚ್ಚು ಕಾಲ ಅನಿಯಂತ್ರಿತ ಸರ್ವಾಧಿಕಾರದ ವಿರುದ್ಧ ಬೀದಿಗಳಲ್ಲಿ ಮತ್ತು ಮತಗಟ್ಟೆಗಳಲ್ಲಿ ಹೋರಾಡಿದ ಅವರು, ಕ್ರೆಮ್ಲಿನ್‌ನ ಇಚ್ಛೆಗೆ ವಿರುದ್ಧವಾಗಿ ನಿಲ್ಲಲು ಸಿದ್ಧವಿರುವ ನಿರ್ಭೀತ ಅಭ್ಯರ್ಥಿಗಳಿಗೆ ಬೆಂಬಲ ನೀಡಿದರು. ಆದರೆ, ವಿರೋಧವು ಸಾಮಾನ್ಯವಾಗಿ ಚುನಾವಣೆಯಲ್ಲಿ ಯಶಸ್ಸಾಗಿ ಬದಲಾಗುವುದಿಲ್ಲ. ಮಾರ್ಚ್ 20, 2024 ರಂದು ಚುನಾವಣೆ ನಡೆಯಲಿದೆ. ರಷ್ಯಾದಲ್ಲಿ ರಾಜಕೀಯ ಅತ್ಯಂತ ಬಿಗಿಯಾಗಿ ನಿಯಂತ್ರಿಸಲ್ಪಟ್ಟಿದೆ ಎಂಬುದನ್ನು ಪರಿಗಣಿಸಿದರೆ, ಚುನಾವಣೆ ಫಲಿತಾಂಶ ಪೂರ್ವನಿರ್ಧರಿತವಾಗಿದೆ. ಆದರೆ, ರಷ್ಯನ್ನರಿಗೆ ನವಲ್ನಿಯ ಉಮೇದುವಾರಿಕೆಯನ್ನು ಬೆಂಬಲಿಸುವುದೆಂದರೆ ಪುಟಿನ್ ಮತ್ತು ಯುದ್ಧಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಏಕೈಕ ಮಾರ್ಗ.

ಪುಟಿನ್ ಅವರ ಪಕ್ಷ ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದೆ ಎಂದ ನವಲ್ನಿ, ಚುನಾವಣಾ ಅಕ್ರಮದ ಮೇಲೆ ಬೆಳಕು ಚೆಲ್ಲುವುದು ಮತ್ತು ಬೆಳೆಯುತ್ತಿರುವ ರಾಜಕೀಯ ಹಿಂಸಾಚಾರದ ಬಗ್ಗೆ ಜಗತ್ತನ್ನು ಎಚ್ಚರಿಸಿದ್ದರು. ನವಲ್ನಿ ಹೊತ್ತಿಸಿದ ಕಿಡಿ ಹಾಗೆಯೇ ಉಳಿದಿದೆ. 2011 ರಲ್ಲಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಅವರು, 2012 ರ ಸಂಸತ್ತಿನ ಚುನಾವಣೆಗಳಿಗೆ ಮುನ್ನ ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷವನ್ನು ʻಕ್ರೂಕ್ಸ್ ಮತ್ತು ಥೀವ್ಸ್ ಪಾರ್ಟಿʼ ಎಂದು ಕರೆದರು. ಪ್ರಮುಖ ರಾಷ್ಟ್ರೀಯ ಪ್ರತಿಭಟನೆ ಚಳವಳಿ ಪ್ರಾರಂಭಿಸಿದರು. ಪುಟಿನ್ ಪಕ್ಷದ ವಿರುದ್ಧ ಮತದಾರರನ್ನು ಸಜ್ಜುಗೊಳಿಸಿದರು. 2013 ರಲ್ಲಿ ಚುನಾವಣೆಯಲ್ಲಿ ಗೆದ್ದರು. ಯುವ ಸ್ವಯಂಸೇವಕರನ್ನು ನೇಮಿಸಿಕೊಂಡರು. ಅವರು ಸುಮಾರು ಶೇ.30 ಮತ ಗಳಿಸಿದರು; ನಿರೀಕ್ಷಿಸಿದ್ದಕ್ಕಿಂತ ದುಪ್ಪಟ್ಟು. ಮೊದಲ ಸುತ್ತಿನ ಗೆಲುವಿಗೆ ಅಗತ್ಯವಾದ ಶೇ.50 ಕ್ಕಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. 2013 ರ ಅಭಿಯಾನದ ಸಮಯದಲ್ಲಿ ವ್ಲಾಡಿಮಿರ್ ಕಾರಾ-ಮುರ್ಜಾ ಹೇಳಿದರು-ʻ ರಾಜಕೀಯ ಸಂಪನ್ಮೂಲಗಳಿಲ್ಲದೆ, ಕಾರ್ಪೊರೇಟ್ ಪ್ರಾಯೋಜಕರು ಅಥವಾ ಸಾರ್ವಜನಿಕ ಸಂಪರ್ಕ ಗುರುಗಳು ಇಲ್ಲದೆ ಒಗ್ಗೂಡಿ ಫಲಿತಾಂಶ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆʼ.

ನವಲ್ನಿ ರಷ್ಯಾದಲ್ಲಿ ಬದಲಾವಣೆ ಬಯಸಿದ್ದರು. ರಾಜಕೀಯದಿಂದ ಪ್ರತ್ಯೇಕಗೊಂಡ ರಷ್ಯನ್ನರನ್ನು ಒಟ್ಟುಗೂಡಿಸಿ, ಅವರಿಗೆ ಅಧಿಕಾರ ನೀಡಿದರು. ಒಬ್ಬ ಕಾರ್ಯಕರ್ತ ಹೇಳಿದ,ʻಮೊದಲ ಪ್ರತಿಭಟನೆಗೆ ಮುನ್ನ ನಾವೆಲ್ಲರೂ ಹೆದರಿದ್ದೆವು. ಅದು ಸಾಮೂಹಿಕ ಚಳವಳಿ ಯಾಗಿರಲಿಲ್ಲ. ನಮ್ಮಂತಹ ಜನರು ಇದ್ದರು.ʼ ಅವರ ಪ್ರಯತ್ನಗಳು ರಷ್ಯಾದ ಸರ್ಕಾರವನ್ನು ಬೆಚ್ಚಿಬೀಳಿಸಿತು ಮತ್ತು 2020 ರಲ್ಲಿ ರಷ್ಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎಫ್‌ ಎಸ್‌ ಬಿ) ಅವರ ಹತ್ಯೆಗೆ ಪ್ರೇರಣೆ ನೀಡಿರಬಹುದು. ಆದರೆ, ನವಲ್ನಿ ಮತ್ತು ಅವರ ತಂಡ ವಿಷದಿಂದ ಬದುಕುಳಿಯಿತು. ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಅವರನ್ನು ಚಿಕಿತ್ಸೆಗಾಗಿ ಜರ್ಮನಿಗೆ ಕಳಿಸಲಾಯಿತು. ಫೆಬ್ರವರಿ 2021ರಲ್ಲಿ ನವಲ್ನಿ ರಷ್ಯಾಕ್ಕೆ ಹಿಂದಿರುಗಿದ ಬಳಿಕ ಪ್ರತಿ ಭಟನೆಗಳು ಪ್ರಾರಂಭವಾದವು. ಈ ಪ್ರತಿಭಟನೆಗಳು ಹೊಸ ಪೀಳಿಗೆಯ ಕಾರ್ಯಕರ್ತರಿಗೆ ಸ್ಫೂರ್ತಿ ನೀಡಿದವು.

ಫೆಬ್ರವರಿ, ಮಾರ್ಚ್‌ 2022 ರಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ಮರಣಕ್ಕೆ ಮುನ್ನ ಕಾರ್ಯಕರ್ತರ ಪೀಳಿಗೆಯೊಂದಿಗೆ ನೇರವಾಗಿ ಮಾತನಾಡಿದರು: ʻನಾನು ನಿಮಗೆ ಹೇಳುವುದನ್ನು ಕೇಳಿಸಿಕೊಳ್ಳಿ. ಸೋಲೊಪ್ಪಲು ನಿಮಗೆ ಅವಕಾಶವಿಲ್ಲ.ಒಂದು ವೇಳೆ ಅವರು ನನ್ನನ್ನು ಕೊಲ್ಲಲು ನಿರ್ಧರಿಸಿದರೆ, ಇದರರ್ಥ- ನಾವು ನಂಬಲಾಗದಷ್ಟು ಬಲಶಾಲಿಗಳು ಎಂದುʼ.

Read More
Next Story