ಡಬ್ಲ್ಯುಪಿಎಲ್‌ 2024: ದೆಹಲಿಯನ್ನು ಮಣಿಸಿದ ಮುಂಬೈ
x

ಡಬ್ಲ್ಯುಪಿಎಲ್‌ 2024: ದೆಹಲಿಯನ್ನು ಮಣಿಸಿದ ಮುಂಬೈ


ಬೆಂಗಳೂರು, ಫೆ. 23- ಮಹಿಳಾ ಪ್ರೀಮಿಯರ್ ಲೀಗ್ ನ ಆರಂಭಿಕ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಮತ್ತು ಯಾಸ್ತಿಕಾ ಭಾಟಿಯಾ ಅವರ ಅರ್ಧ ಶತಕಗಳ ಬಲದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರೋಮಾಂಚಕ ಕೊನೆಯ ಚೆಂಡಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು.

ನಾಯಕಿ ಹರ್ಮನ್‌ಪ್ರೀತ್ 55 (34 ಚೆಂಡು, 7x4, 1x6), ಯಾಸ್ತಿಕಾ 45 ಎಸೆತಗಳಲ್ಲಿ 57 ರನ್ (8x4, 2x6) ಗಳಿಸಿದರು. ಮುಂಬೈ 172 ರನ್ ಗಳಿಸಿತು. ಆಲಿಸ್ ಕ್ಯಾಪ್ಸೆ(19) ಅವರ 75 (53 ಚೆಂಡು, 8x4, 3x6) ಅವರ ಭರ್ರುಜರಿ ಆಟದಿಂದ ದೆಹಲಿ ಕ್ಯಾಪಿಟಲ್ಸ್ ಐದು ವಿಕೆಟ್‌ಗೆ 171 ಗಳಿಸಿತು.

ಆಫ್‌ ಸ್ಪಿನ್ನರ್ ಕ್ಯಾಪ್ಸಿ ಬೌಲ್ ಮಾಡಿದ ಕೊನೆಯ ಓವರ್‌ನಲ್ಲಿ ಮುಂಬೈಗೆ 12 ರನ್‌ ಅಗತ್ಯವಿತ್ತು. ಕ್ಯಾಪ್ಸಿ 20ನೇ ಓವರ್‌ನ ಮೊದಲ ಮತ್ತು ಐದನೇ ಎಸೆತಗಳಲ್ಲಿ ಹರ್ಮನ್‌ಪ್ರೀತ್ ಮತ್ತು ಪೂಜಾ ವಸ್ತ್ರಾಕರ್ ಅವರನ್ನು ಔಟ್ ಮಾಡಿದರು. ಮುಂಬೈ ಕೊನೆಯ ಎಸೆತದಲ್ಲಿ ಐದು ರನ್ ಗಳಿಸಬೇಕಿತ್ತು. ಆದರೆ, ಸಜನಾ ಸಜೀವನ್ ಅವರು ಲಾಂಗ್ ಆನ್ ಬೇಲಿ ಮೇಲೆ ಹೊಡೆದು ಮುಂಬೈ ಶಿಬಿರದಲ್ಲಿ ಸಂಭ್ರಮ ತಂದರು.

ಮುಂಬೈ ತನ್ನ ಗುರಿಯನ್ನು ವಿನಾಶಕಾರಿ ರೀತಿಯಲ್ಲಿ ಪ್ರಾರಂಭಿಸಿತು. ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಹೇಯ್ಲಿ ಮ್ಯಾಥ್ಯೂಸ್ ಅನ್ನು ಕಳೆದುಕೊಂಡಿ ತು. ಅನುಭವಿ ವೇಗಿ ಶಿಖಾ ಪಾಂಡೆ (4, 4, 6) ಅವರನ್ನು ದಂಡಿಸಿದ ಯಾಸ್ತಿಕಾ, ನ್ಯಾಟ್ ಸಿವರ್ ಬ್ರಂಟ್ (19) ಅವರೊಂದಿಗೆ ಎರಡನೇ ವಿಕೆಟ್‌ಗೆ ಅರ್ಧಶತಕ (35 ಎಸೆತಗಳಲ್ಲಿ) ಸೇರಿಸಿದರು. ಹರ್ಮನ್‌ಪ್ರೀತ್ ಅವರೊಂದಿಗೆ ಮೂರನೇ ವಿಕೆಟ್‌ಗೆ 7.1 ಓವರ್‌ಗಳಲ್ಲಿ 56 ರನ್‌ ಸಂಗ್ರಹಿಸಿದರು.

ಎಡಗೈ ಸ್ಪಿನ್ನರ್ ರಾಧಾ ಯಾದವ್ ಅವರ ಚೆಂಡನ್ನು ಲಾಂಗ್ ಆನ್‌ನಲ್ಲಿ ಸಿಕ್ಸರ್‌ ಎತ್ತಿ ಯಾಸ್ತಿಕಾ 35 ಎಸೆತಗಳಲ್ಲಿ ಐವತ್ತರ ಗಡಿ ದಾಟಿದರು. ಆದರೆ, ವೇಗಿ ಅರುಂಧತಿ ರೆಡ್ಡಿ ಅವರನ್ನು ಹೊಡೆಯಲು ಹೋಗಿ ಔಟಾದರು. ಹರ್ಮನ್‌ಪ್ರೀತ್ 28 ಎಸೆತಗಳಲ್ಲಿ ನಾಲ್ಕನೇ ವಿಕೆಟ್‌ಗೆ 44 ರನ್‌ ಸೇರಿಸಿದರು.

ಈಮೊದಲು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಅನುಭವಿ ವೇಗಿ ಶಬ್ನಿಮ್ ಇಸ್ಮಾಯಿಲ್ ಪೆವಿಲಿಯನ್‌ಗೆ ಕಳಿಸಿದರು. ಕ್ಯಾಪ್ಸೆ ನಾಯಕಿ ಮೆಗ್ ಲ್ಯಾನಿಂಗ್ (31, 25 ಚೆಂಡು, 3x4, 1x6) ಸೇರಿಕೊಂಡು ಎಂಟು ಓವರ್‌ಗಳಲ್ಲಿ 64 ರನ್ ಗಳಿಸಿದರು.

ಲ್ಯಾನ್ನಿಂಗ್ ಅವರು ಲೆಗ್ ಸ್ಪಿನ್ನರ್ ಎಸ್. ಕೀರ್ತನಾ ಅವರ ಚೆಂಡನ್ನು ಲಾಂಗ್-ಆನ್‌ನಲ್ಲಿ ಸಿಕ್ಸರ್ ಎತ್ತಿದರು. ಆದರೆ, ಬ್ರಂಟ್ ಈ ಜೋಡಿಯನ್ನು ಮುರಿದರು. ಆದರೆ, ಕ್ಯಾಪ್ಸೆ ಉಪನಾಯಕಿ ಜೆಮಿಮಾ ರಾಡ್ರಿಗಸ್ (42, 24, 5x4, 2x6) ಜೊತೆ 7.3 ಓವರ್‌ಗಳಲ್ಲಿ ಮೂರನೇ ವಿಕೆಟ್ ಗೆ 73 ರನ್ ಸೇರಿಸಿದರು. ಆದರೆ, ಕೊನೆಗೆ ವಿಜಯದ ನಗೆ ಬೀರಿದ್ದು ಕೆರ್.‌

ಆದರೆ, ಅಂತಿಮ ಸ್ಕೋರ್‌ ಎಂಐ ಯನ್ನು ಸೋಲಿಸಲು ಸಾಕಾಗಲಿಲ್ಲ.

Read More
Next Story