ಹಳ್ಳಿಗಳಿಗೆ ರಾಜಕಾರಣಿಗಳ ಪ್ರವೇಶ ನಿಷೇಧ: ರಾಕೇಶ್ ಟಿಕಾಯತ್
x

ಹಳ್ಳಿಗಳಿಗೆ ರಾಜಕಾರಣಿಗಳ ಪ್ರವೇಶ ನಿಷೇಧ: ರಾಕೇಶ್ ಟಿಕಾಯತ್


ಮೀರತ್/ಬಾಗ್‌ಪತ್ (ಯುಪಿ), ಫೆ.21- ರೈತರಿಗೆ ದೆಹಲಿಗೆ ಪ್ರವೇಶಿಸಲು ಸರ್ಕಾರ ಅವಕಾಶ ನೀಡದಿದ್ದರೆ, ಚುನಾವಣೆ ಸಮಯದಲ್ಲಿ ಅವರನ್ನು ಗ್ರಾಮಗಳಿಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು .ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಬುಧವಾರ ಹೇಳಿದರು.

2020-21ರ ದೆಹಲಿ ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ, ಮೀರತ್‌ನ ರೈತರು ಬುಧವಾರ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು.

ರೈತರು ಜಿಲ್ಲಾಧಿಕಾರಿ ಕಚೇರಿಗೆ ಬರದಂತೆ ಅಧಿಕಾರಿಗಳು ಹಲವೆಡೆ ತಡೆಗೋಡೆಗಳನ್ನು ಹಾಕಿದ್ದರು. ಆದರೆ, ಪ್ರತಿಭಟನಾಕಾರರು ಅವುಗಳನ್ನು ತೆಗೆದುಹಾಕಿದರು.

ʻರಸ್ತೆಗೆ ಮೊಳೆ ಹಾಕುವುದು ಸಮರ್ಥನೀಯವಲ್ಲ. ಅವರು ನಮ್ಮ ದಾರಿಗೆ ಮೊಳೆ ಹಾಕಿದರೆ, ನಮ್ಮ ಹಳ್ಳಿಗಳಲ್ಲೂ ಅದನ್ನೇ ಮಾಡುತ್ತೇವೆ. ನಮ್ಮನ್ನು ದೆಹಲಿಗೆ ತಲುಪಲು ಬಿಡದಿದ್ದರೆ, ಅವರನ್ನು ನಮ್ಮ ಹಳ್ಳಿಗಳಿಗೆ ಪ್ರವೇಶಿಸಲು ಬಿಡಬೇಡಿʼ ಎಂದು ಅವರು ಹೇಳಿದರು.

ಬಿಜೆಪಿ ನೇತೃತ್ವದ ಸರ್ಕಾರ ಕೇವಲ ಕೈಗಾರಿಕೋದ್ಯಮಿಗಳಿಗೆ ಮಾತ್ರ. ರೈತರ ಸರ್ಕಾರವಾಗಿದ್ದರೆ ಎಂಎಸ್‌ಪಿ ಖಾತರಿ ನೀಡುವ ಕಾನೂನು ಜಾರಿಗೆ ಬರುತ್ತಿತ್ತು. ರೈತರ ಆಂದೋಲನದ ಭವಿಷ್ಯದ ಹಾದಿಯನ್ನು ಚರ್ಚಿಸಲು ಗುರುವಾರ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸಭೆ ನಡೆಸಲಾಗುವುದುʼ ಎಂದು ಹೇಳಿದರು.

ಬಿಕೆಯು ಜಿಲ್ಲಾ ಮುಖಂಡ ಅನುರಾಗ್ ಚೌಧರಿ ಮಾತನಾಡಿದರು. ಬಾಗಪತ್‌ನಲ್ಲೂ ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಿ, ಜಿಲ್ಲಾ ಕೇಂದ್ರಕ್ಕೆ ಆಗಮಿಸಿದರು. ಜಿಲ್ಲಾ ಬಿಕೆಯು ಅಧ್ಯಕ್ಷ ಪ್ರತಾಪ್ ಗುರ್ಜರ್ ಮಾತನಾಡಿ, ಅನಿರ್ದಿಷ್ಟಾವಧಿ ಧರಣಿ ನಡೆಸಿ ಪಂಜಾಬಿನ ರೈತರಿಗೆ ಬೆಂಬಲ ಘೋಷಿಸುತ್ತೇವೆʼ ಎಂದರು.

Read More
Next Story