ಫೆಡರಲ್ ಸಮೀಕ್ಷೆ | ಕೇರಳ ತೆಕ್ಕೆಗೆ ಕಾಂಗ್ರೆಸ್, ಬಿಜೆಪಿಗೆ ಒಲಿಯಲಿರುವ ಬಂಗಾಳ
x

ಫೆಡರಲ್ ಸಮೀಕ್ಷೆ | ಕೇರಳ ತೆಕ್ಕೆಗೆ ಕಾಂಗ್ರೆಸ್, ಬಿಜೆಪಿಗೆ ಒಲಿಯಲಿರುವ ಬಂಗಾಳ

ಕಳೆದ 2019 ರ ಲೋಕಸಭಾ ಫಲಿತಾಂಶಕ್ಕೆ ಹೋಲಿಸಿ ನೋಡಿದರೆ ಒಂದು ಕಾಲದಲ್ಲಿ ಎಡಪಕ್ಷಗಳ ಭದ್ರ ಕೋಟೆಯಾಗಿದ್ದ ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇದೀಗ ಎಡಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯನ್ನು ದ ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ತೆರೆದಿಟ್ಟಿದೆ.


ಎಡಪಕ್ಷಗಳ ನೆಲೆಯೆಂದೇ ಭಾವಿಸಲಾಗಿರುವ ಪಶ್ಚಿಮ ಬಂಗಾಳ ಮತ್ತು ಕೇರಳ ಅಚ್ಚರಿ ಫಲಿತಾಂಶವನ್ನು ನೀಡುವ ಸಾಧ್ಯತೆ ದಟ್ಟವಾಗಿರುವುದಾಗಿ ಚುನಾವಣಾ ಪೂರ್ವ ಸಮೀಕ್ಷೆ ಹೊರಗೆಡವಿದೆ.

ದ ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಬಿಜೆಪಿ ಟಕ್ಕರ್‌ ನೀಡಲಿದೆ ಎಂದು ಸೂಚಿಸಿದೆ. ಬಿಜೆಪಿ ಗಣನೀಯ ಸಾಧನೆ ಮಾಡಲಿದ್ದು, ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಬಿಜೆಪಿಯನ್ನು ಹಿಂಬಾಲಿಸುವಂಥ ಪರಿಸ್ಥಿತಿ ಎದುವಾಗಿರುವುದಾಗಿ ಸಮೀಕ್ಷೆ ಸೂಚಿಸುತ್ತದೆ.




ಕೇರಳ: ಗೆಲ್ಲಲಿ ಅಥವಾ ಸೋಲಲಿ, ಇದು ಇಂಡಿಯಾ ಬ್ಲಾಕ್

ದೇಶದ ಇತರೆಡೆಗಳಲ್ಲಿ, ಕಾಂಗ್ರೆಸ್ ನ ಭವಿಷ್ಯ ಮಸುಕಾಗಿದ್ದರು, ಕೇರಳದಲ್ಲಿ ಮಾತ್ರ ಮತದಾರರು ಕಾಂಗ್ರೆಸ್ ಗೆ ಒಲಿಯುವ ಸಾಧ್ಯತೆ ಇದೆ. ಸಾರ್ವತ್ರಿಕ ಚುನಾವಣೆಯಲ್ಲಿ ಯಾರೇ ಗೆಲ್ಲಲಿ ಅಥವಾ ಸೋಲಲಿ, ಆದರೆ ʼಇಂಡಿಯಾʼ ಬ್ಲಾಕ್‌ ಹೆಚ್ಚಿನ ಸ್ಥಾನ ಗಳಿಸುವ ಏಕೈಕ ರಾಜ್ಯವೆಂದರೆ ಅದು ಕೇರಳ ಎಂಬಂತೆ ತೋರುತ್ತಿದೆ. ಎಡ ಪ್ರಜಾಸತ್ತಾತ್ಮಕ ಫ್ರಂಟ್ (LDF) ಅಥವಾ ಯುನೈಟೆಡ್ ಡೆಮಾಕ್ರಟಿಕ್ ಸರ್ಕಾರ (UDF) ಗಳ ಹಿನ್ನೆಲೆಯಲ್ಲಿ ನೋಡಿದರೆ, ಬಿಜೆಪಿ ಹೊರಗಿನ ಪಕ್ಷವೆಂಬ ಭಾವನೆಯನ್ನು ಮತದಾರರು ಮನವರಿಕೆ ಮಾಡಿಕೊಟ್ಟಂತೆ ತೋರುತ್ತಿದೆ.


ಫೆಡರಲ್ ಸಮೀಕ್ಷೆಯು ಕಾಂಗ್ರೆಸ್ ನೇತೃತ್ವದ ಯುಡಿಎಫ್ 17 ಸ್ಥಾನಗಳನ್ನು ಗೆಲ್ಲುವುದರ ಮೂಲಕ, ಮತ್ತೊಮ್ಮೆ ಕೇರಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. 2019 ಕ್ಕೆ ಹೋಲಿಸಿದರೆ ಎರಡು ಸ್ಥಾನ ನಷ್ಟವಾಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ ಮತಹಂಚಿಕೆಯ ಪ್ರಮಾಣದಲ್ಲಿ ಶೇ 3 ರಷ್ಟು ಕಡಿತಗೊಳ್ಳುವ ಸಾಧ್ಯತೆಗಳಿವೆ.


2021 ರ ವಿಧಾನ ಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ನೋಡಬಹುದಾದರೆ, ಚರಿತ್ರೆಯ ನಿರೀಕ್ಷೆಯನ್ನು ಸುಳ್ಳು ಮಾಡಿ ಎಡಪಕ್ಷಗಳು ಬಹುಮತಗಳಿಸಿದವು. ಆದರೆ, ಇದರ ಪರಿಣಾಮ ಲೋಕಸಭಾ ಚುನಾವಣೆಯ ಮೇಲೆ ಆಗುವಂತೆ ತೋರುತ್ತಿಲ್ಲ. 99 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿದ ಎಲ್ಡಿಎಫ್ ಲೋಸಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, ಮತಗಳ ಪ್ರಮಾಣವು ಶೇಕಡಾ 20.54 ಕ್ಕೆ ಕುಸಿಯುಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. 2019 ರ ಲೋಕಸಭಾ ಚುನಾವಣೆಯ ನಂತರ ಎಲ್‌ ಡಿ ಎಫ್‌, ಕೇರಳ ಕಾಂಗ್ರೆಸ್ ಅನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದರೂ, ಈ ಭಾರೀ ಕುಸಿತದಿಂದ ಪಾರಾಗಲು ಸಾಧ್ಯವಾಗುವಂತೆ ತೋರುತ್ತಿಲ್ಲ.

ಕುತೂಹಲಕಾರಿ ಬೆಳವಣಿಗೆಯೆಂದರೆ , ಬಿಜೆಪಿಯು ಕೇರಳದಲ್ಲಿ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇದೆ. ಆದರೂ ಅದರ ಸ್ಥಾನ ಹಂಚಿಕೆ ಶೇಕಡಾ 5 ರಷ್ಟು ಕುಸಿಯುವ ನಿರೀಕ್ಷೆಯಿದೆ. 2019 ರಲ್ಲಿ, ಬಿಜೆಪಿ ಪಕ್ಷವು ಯಾವುದೇ ಸ್ಥಾನ ಗಳಿಸದಿದ್ದರೂ, ಶೇ 13 ರಷ್ಟು ಮತಗಳಿಸಿ ಆಶ್ಚರ್ಯ ಹುಟ್ಟಿಸಿತ್ತು.


ಪಶ್ಚಿಮ ಬಂಗಾಳ: ಕೇಸರಿ ಪೂರ್ವದ ಆಕ್ರಮಣ

ಪಶ್ಚಿಮ ಬಂಗಾಳದ ಉತ್ತರ ಮತ್ತು ಪಶ್ಚಿಮ ಭಾಗಗಳ ಮೇಲೆ ಆಕ್ರಮಣಕ್ಕೆ ಸಜ್ಜಾಗಿರುವಂತೆ ತೋರುತ್ತಿರುವ ಬಿಜೆಪಿ ಪೂರ್ವ ಭಾಗದ ಮೇಲೆ ತನ್ನ ಹಿಡಿತ ಸಾಧಿಸುತ್ತಿರುವಂತೆ ತೋರುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ 13 ಸ್ಥಾನಗಳನ್ನು ಗಳಿಸಿದರೆ ಬಿಜೆಪಿ 29 ಸ್ಥಾನಗಳನ್ನು ಗಳಿಸಬಹುದು ಎಂದು ಫೆಡರಲ್ ಸಮೀಕ್ಷೆ ಸೂಚಿಸುತ್ತದೆ.


ಸಮೀಕ್ಷೆಯ ಫಲಿತಾಂಶದ ಪ್ರಕಾರ ಬಿಜೆಪಿಯು 41.78 ರಷ್ಟು ಹೆಚ್ಚಿನ ಮತಗಳನ್ನು ಗಳಿಸುವ ನಿರೀಕ್ಷೆ ಇದ್ದರೆ, ಟಿಎಂಸಿಯ ಮತಗಳಿಕೆ 31.86 ಕ್ಕೆ ಕುಸಿಯಲಿದೆ. ಅಂದರೆ ಟಿಎಂಸಿ ಶೇ 11.83 ರಷ್ಟು ಕುಸಿತ ಕಾಣುವ ಸಾಧ್ಯತೆಗಳು ಕಾಣುತ್ತಿವೆ. 2019 ರಲ್ಲಿ, ಬಿಜೆಪಿ ಶೇ 40.64 ಮತಗಳನ್ನು ಗಳಿಸಿದ್ದರೂ 18 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.


ಕುತೂಹಲಕಾರಿ ಸಂಗತಿ ಎಂದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಯಾವುದೇ ಸ್ಥಾನ ಗಳಿಸುವ ಸಾಧ್ಯತೆಗಳು ಕಾಣುತ್ತಿಲ್ಲಎಂದು ಸಮೀಕ್ಷೆ ಹೇಳುತ್ತದೆ. ಕಾಂಗ್ರೆಸ್ನ ಮತಗಳಿಕೆ ಪ್ರಮಾಣ ಶೇಕಡಾ 6.69 ಕ್ಕೆ ಕುಸಿದರೆ ಎಡಪಕ್ಷಗಳ ಮತ ಪ್ರಮಾಣದ ಗಳಿಕೆ ಶೇ 1.75 ಕ್ಕೆ ಕುಸಿಯುತ್ತದೆ ಎಂದು ಸಮೀಕ್ಷೆ ಹೇಳುತ್ತಿದೆ. ಇದು 34 ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಪಕ್ಷದ ಸಾರ್ವಕಾಲಿಕ ಕನಿಷ್ಠ ಮತಗಳಿಕೆಯಾಗಿದೆ. ಇಲ್ಲಿ ಇನ್ನೊಂದು ಸಂಗತಿ ಗಮನಿಸಬೇಕು. ಶೇ 10.62% ಮತದಾರರು ತಾವು ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿರುವುದು ಚುನಾವಣೆಯ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಗಮನಾರ್ಹ. ಹಾಗಾಗಿ ಚುನಾವಣೆಗೆ ಮುಂಚಿತವಾಗಿ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಟಿಎಂಸಿಗೆ ಅವಕಾಶವನ್ನ ತೆರೆದಿಟ್ಟಿದೆ.

ಹಿಂದಿನ ಸಮೀಕ್ಷೆ-ಸಂಬಂಧಿತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Read More
Next Story