UPI Payments | ಬಳಕೆದಾರರೇ ಗಮನಿಸಿ! ಹೊಸ ನಿಯಮ ಜಾರಿ
ಆರ್‌ಬಿಐ ಹಾಗೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಮಾಡಿರುವ ಹೊಸ ಬದಲಾವಣೆಯಲ್ಲಿ ಯುಪಿಐ ಲೈಟ್ ವಹಿವಾಟು ಮಿತಿಯನ್ನು 500 ರೂ.ನಿಂದ 1,000 ರೂ.ಗೆ ಹೆಚ್ಚಿಸಲಾಗಿದೆ. ವ್ಯಾಲೆಟ್ ಬ್ಯಾಲೆನ್ಸ್ 2 ಸಾವಿರ ರೂ. ನಿಂದ 5 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಯುಪಿಐ ಪಾವತಿ ವ್ಯವಸ್ಥೆಯಲ್ಲಿ ವಹಿವಾಟು ಮಿತಿ ಹೆಚ್ಚಳ ಹಾಗೂ ಅಟೋ ಟಾಪ್ ಅಪ್ ವ್ಯವಸ್ಥೆ ಇಂದಿನಿಂದ(ನ.1) ಜಾರಿಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಈ ಎರಡು ಬದಲಾವಣೆಗಳನ್ನು ಮಾಡಿದ್ದು, ಇವು ಯುಪಿಐ ಲೈಟ್‌ಗೆ ಅನ್ವಯವಾಗಲಿವೆ. ಇದರಿಂದ ಯುಪಿಐ ಲೈಟ್ ಬಳಕೆದಾರರು ಸಮಯ ವ್ಯರ್ಥ ಮಾಡದೇ ಸಣ್ಣ ವಹಿವಾಟು ನಡೆಸಬಹುದಾಗಿದೆ.
ಯುಪಿಐ ಲೈಟ್ ಮೂಲಕ ಯಾವುದೇ ಕಿರಾಣಿ ಅಂಗಡಿ ಅಥವಾ ಇತರ ಪಾವತಿಯಲ್ಲಿ ಸಣ್ಣ ಮೊತ್ತ ಪಾವತಿಸಲು ಪಿನ್ ಬಳಕೆ ಮಾಡುವ ಅಗತ್ಯವಿರಲಿಲ್ಲ. ಆದರೆ ಇದರಲ್ಲಿ ಪ್ರತಿ ದಿನ ಇಂತಿಷ್ಟೇ ವಹಿವಾಟು ನಡೆಸಲು ಮಿತಿ ಇತ್ತು. ಈಗ ವಹಿವಾಟು ಮಿತಿಯನ್ನು ಹೆಚ್ಚಿಸಲಾಗಿದೆ.
ಈವರೆಗೆ ಯುಪಿಐ ಲೈಟ್ನಲ್ಲಿ ಗರಿಷ್ಠ ಎಂದರೆ 500 ರೂ. ವಹಿವಾಟು ನಡೆಸಬಹುದಾಗಿತ್ತು. ಇನ್ನು ಯುಪಿಐ ವ್ಯಾಲೆಟ್ ಬ್ಯಾಲೆನ್ಸ್ ಮಿತಿಯನ್ನು ಗರಿಷ್ಠ 2 ಸಾವಿರ ರೂಪಾಯಿವರೆಗೆ ನಿಗದಿ ಮಾಡಲಾಗಿತ್ತು.
ಆರ್‌ಬಿಐ ಹಾಗೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಮಾಡಿರುವ ಹೊಸ ಬದಲಾವಣೆಯಲ್ಲಿ ಯುಪಿಐ ಲೈಟ್ ವಹಿವಾಟು ಮಿತಿಯನ್ನು 500 ರೂ.ನಿಂದ 1,000 ರೂ.ಗೆ ಹೆಚ್ಚಿಸಲಾಗಿದೆ. ವ್ಯಾಲೆಟ್ ಬ್ಯಾಲೆನ್ಸ್ 2 ಸಾವಿರ ರೂ. ನಿಂದ 5 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಯುಪಿಐ ಲೈಟ್‌ನಲ್ಲಿ ಆಟೋ ರಿಚಾರ್ಜ್ ಆಯ್ಕೆಯೂ ಲಭ್ಯವಾಗಿದೆ. ಈ ಆಯ್ಕೆ ಕ್ಲಿಕ್ ಮಾಡಿದರೆ ನಿಮ್ಮ ಯುಪಿಐ ವ್ಯಾಲೆಟ್ ನಿಗದಿತ ಬ್ಯಾಲೆನ್ಸ್‌ಗಿಂತ ಕಡಿಮೆಯಾದರೆ ಸ್ವಯಂಪ್ರೇರಿತವಾಗಿ ಖಾತೆಯಿಂದ ಟಾಪ್ ಅಪ್ ಮಾಡಿಕೊಳ್ಳಲಿದೆ.
ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಸೇರಿದಂತೆ ವಿವಿಧ ಯುಪಿಐ ಪಾವತಿ ಆ್ಯಪ್ ಬಳಕೆ ಮಾಡುವ ಗ್ರಾಹಕರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.
ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಹೆಚ್ಚು ಸುರಕ್ಷತೆಗೆ ಆರ್‌ಬಿಐ ಹಾಗೂ NPCI ಹಲವು ಕ್ರಮಗಳನ್ನು ಕೈಗೊಂಡಿದೆ. ಯುಪಿಐ ಪಾವತಿ ವ್ಯವಸ್ಥೆ ಹೊಂದಿರುವ ಬಳಕೆದಾರರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಆಗುತ್ತಿರುವ ವಂಚನೆ ಪ್ರಕರಣಗಳಿಂದ ದೂರ ಇರುವಂತೆಯೂ ಗ್ರಾಹಕರಿಗೆ ಆರ್‌ಬಿಐ ಎಚ್ಚರಿಕೆ ನೀಡಿದೆ.