ಲಕ್ನೋದಲ್ಲಿ ಅವಳಿ ಸಿಲಿಂಡರ್ ಸ್ಫೋಟ:  ಕುಟುಂಬದ ಐವರು ಸಾವು
x

ಲಕ್ನೋದಲ್ಲಿ ಅವಳಿ ಸಿಲಿಂಡರ್ ಸ್ಫೋಟ: ಕುಟುಂಬದ ಐವರು ಸಾವು


ಲಕ್ನೋ, ಮಾ.6 - ಇಲ್ಲಿನ ಹತಾ ಹಜರತ್ ಸಾಹಬ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಎರಡು ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡು ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಕಾಕೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದೆ. ಕುಟುಂಬದ ಒಂಬತ್ತು ಸದಸ್ಯರನ್ನು ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯ ಟ್ರಾಮಾ ಸೆಂಟರ್‌ಗೆ ರವಾನಿಸಲಾಗಿದ್ದು, ಅವರಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಶೀರ್ (50), ಅವರ ಪತ್ನಿ ಹುಸ್ನ್ ಬಾನೋ (45), ರೈಯಾ (7), ಉಮಾ (4) ಮತ್ತು ಹಿನಾ (2) ಮೃತರು. ಇಶಾ(17), ಲಕಾಬ್( 21), ಅಮ್ಜದ್(34) ಮತ್ತು ಅನಮ್(18) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ್ಕೂ ಮುನ್ನ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕಿಟ್ ನಿಂದ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಮೂರು ತಂಡಗಳು ಹಾಗೂ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.


Read More
Next Story