
ಉತ್ತರ ಪ್ರದೇಶ: ಗುಡಿಸಲಿಗೆ ಬೆಂಕಿ, 4 ಮಕ್ಕಳು ಸಜೀವ ದಹನ
ಬರೇಲಿ (ಯುಪಿ), ಫೆ 23- ನಾವಡ ಬಿಲಸಂದಿ ಗ್ರಾಮದ ಗುಡಿಸಲಿಗೆ ಬೆಂಕಿ ತಗುಲಿ, ಮೂರರಿಂದ ಆರು ವರ್ಷದೊಳಗಿನ ನಾಲ್ವರು ಬಾಲಕಿಯರು ಸಜೀವ ದಹನಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪ್ರಿಯಾಂಶಿ (3), ಮಾನ್ವಿ (6) ಮತ್ತು ನೈನಾ (5) ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನೀತು(6) ಕೂಡ ಮೃತಪಟ್ಟಳು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಬೆಂಕಿಗೆ ಕಾರಣ ತಿಳಿದುಬಂದಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story