ತಿರುವನಂತಪುರ-ಕಾಸರಗೋಡು ವಂದೇ ಭಾರತ್: ಮಂಗಳೂರಿನವರೆಗೆ ವಿಸ್ತರಣೆ
x

ತಿರುವನಂತಪುರ-ಕಾಸರಗೋಡು ವಂದೇ ಭಾರತ್: ಮಂಗಳೂರಿನವರೆಗೆ ವಿಸ್ತರಣೆ


ಮಂಗಳೂರು, ಫೆ.22- ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ನ್ನು ಮಂಗಳೂರಿನವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.

ರೈಲು ಸಂಖ್ಯೆ 20632/20631 ಮಂಗಳೂರಿನಿಂದ ಬೆಳಗ್ಗೆ 6.15 ಕ್ಕೆ ಹೊರಟು ಮಧ್ಯಾಹ್ನ 3.05 ಕ್ಕೆ ತಿರುವನಂತಪುರ ತಲುಪಲಿದೆ. ತಿರುವನಂತಪುರರದಿಂದ ಸಂಜೆ 4.05ಕ್ಕೆ ಹೊರಟು 12.40ಕ್ಕೆ ಮಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲುಗಳು ಕಾರ್ಯನಿರ್ವಹಿಸಲಿವೆ. ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ತಿರೂರ್, ಶೋರನೂರು, ತ್ರಿಶೂರ್, ಎರ್ನಾಕುಲಂ, ಅಲಪ್ಪುಳ ಮತ್ತು ಕೊಲ್ಲಂನಲ್ಲಿ ನಿಲುಗಡೆಯಾಗಲಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮಂಗಳೂರಿನವರೆಗೆ ವಿಸ್ತರಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವ ರಿಗೆ ಮನವಿ ಮಾಡಲಾಗಿತ್ತು. ವಿಸ್ತರಿಸಿದ ಕೇಂದ್ರ ಸಚಿವರಿಗೆ ಧನ್ಯವಾದ ಎಂದರು.

Read More
Next Story