ಫೆಡರಲ್ ಸಮೀಕ್ಷೆ | ಭಾರತದ ಸಾರ್ವಕಾಲಿಕ ನೆಚ್ಚಿನ ಪ್ರಧಾನಿ ಯಾರು?
x

ಫೆಡರಲ್ ಸಮೀಕ್ಷೆ | ಭಾರತದ ಸಾರ್ವಕಾಲಿಕ ನೆಚ್ಚಿನ ಪ್ರಧಾನಿ ಯಾರು?

ನೆಚ್ಚಿನ ಪ್ರಧಾನಿ ಮೋದಿ, ನಂತರದ ಸ್ಥಾನ ವಾಜಪೇಯಿಗೆ ಮೂರನೇ ಸ್ಥಾನಕ್ಕೆ ಇಂದಿರಾ ಗಾಂಧಿಗೆ


ನರೇಂದ್ರ ಮೋದಿ ಭಾರತದ ಸಾರ್ವಕಾಲಿಕ ನೆಚ್ಚಿನ ಪ್ರಧಾನಿ. ಅವರ ನಂತರದ ಸ್ಥಾನ ಅಟಲ್ ಬಿಹಾರಿ ವಾಜಪೇಯಿಗೆ. ಮೂರನೇಯ ಹಾಗೂ ಕೊನೆಯ ಸ್ಥಾನ ಇಂದಿರಾ ಗಾಂಧಿ ಅವರದು.

ಇದು- ಫೆಡರಲ್-ಪುತಿಯತಲೈಮುರೈ-ಆಪ್ಟ್ ಸಂಸ್ಥೆ ನಡೆಸಿದ 2024 ರ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮತದಾರರ ಮನದಾಳದ ಅನಿಸಿಕೆ.

2024ರ ಲೋಕಸಭಾ ಚುನಾವಣೆಗೆ ಮುನ್ನ ಜಾತಿ ಗಣತಿ ಪ್ರಮುಖ ಚುನಾವಣಾ ವಿಷಯಸೂಚಿಯಾಗಿ, ಪ್ರತಿಪಕ್ಷಗಳು ಇದನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರೂ, ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಮುಖ ಕಥಾನಕ ನಿರೂಪಣೆ -ಪ್ರಧಾನಿ ನರೇಂದ್ರ ಮೋದಿ ಸುತ್ತಲೇ ಸುತ್ತುತ್ತಿದೆ.

ʼಒಂದು ರಾಷ್ಟ್ರ, ಒಂದು ಚುನಾವಣೆʼ ಪ್ರತಿಪಾದನೆಯನ್ನು ಮುಂದುಮಾಡುತ್ತಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ, ಈ ಪ್ರಸ್ತಾವನೆಯ ಅನುಷ್ಠಾನಕ್ಕಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ಆದರೆ ಲೋಕಸಭೆ ಚುನಾವಣೆಗೆ ರಾಜ್ಯದ ವಿಧಾನಸಭಾ ಚುನಾವಣೆಯನ್ನು ತಳಕು ಹಾಕಿದರೆ, ರಾಜ್ಯ ಸರ್ಕಾರಗಳ ಕಾರ್ಯವೈಖರಿಗೆ ಧಕ್ಕೆಯಾಗುತ್ತದೆ ಎಂಬ ಆತಂಕವೂ ಕಾಡುತ್ತಿದೆ.

ರಾಷ್ಟ್ರ ಪ್ರಾಮಖ್ಯದ, ಅತಿ ಚರ್ಚಿತವಾಗುತ್ತಿರುವ ಈ ಸಂಗತಿಗಳ ಬಗ್ಗೆ ದೇಶದ ಮತದಾರರ ಮನಸ್ಸಿನಲ್ಲೇನಿದೆ? ಅವೆಲ್ಲವೂ ಪ್ರಾಮುಖ್ಯವೇ? ನಾಯಕರ ವರ್ಚಸ್ಸು ಚುನಾವಣೆಯ ಸಂದರ್ಭವನ್ನು ಆಕ್ರಮಿಸಿರುವ ಜ್ವಲಂತ ಸಮಸ್ಯೆಗಳನ್ನು ಮಂಕು ಮಾಡಲಿದೆಯೇ? ಕಳೆದ 76 ವರ್ಷಗಳಲ್ಲಿ ದೇಶದ ಸಾರ್ವಕಾಲಿಕ ನೆಚ್ಚಿನ ನಾಯಕ ಯಾರು?

ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಮತದಾರನ ನಾಡಿಮಿಡಿತ ಹಿಡಿಯಲು ಫೆಡರಲ್ ಮತ್ತು ಅದರ ಸಹೋದರಿ ಸಂಸ್ಥೆ ಪುತಿಯ ತಲೈಮುರೈ ಆಪ್ಟ್ ರಿಸರ್ಚ್ ಗ್ರೂಪ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಮತದಾರರಿಗೆ ಒಂಭತ್ತು ಪ್ರಶ್ನೆಗಳನ್ನು ಕೇಳಲಾಗಿದೆ.

ಮೊದಲ ಐದು ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳನ್ನು ಓದಲು ಮತ್ತು ಸಮೀಕ್ಷೆಯ ವಿಧಾನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಶ್ನೆ 6: ಜಾತಿ ಗಣತಿ

ವಿರೋಧ ಪಕ್ಷಗಳು ಪ್ರತಿಪಾದಿಸುವ ಜಾತಿ ಗಣತಿಯನ್ನು ನೀವು ಅನುಮೋದಿಸುತ್ತೀರಾ?

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇ.37 ರಷ್ಟು ಜನರು ಹೌದು ಎಂದು ಹೇಳಿದರು, ಆದರೆ ಬಹುಪಾಲು - ಅಂದರೆ ಶೇ. 55 ರಷ್ಟು ಮತದಾರರು ರಾಷ್ಟ್ರೀಯ ಮಟ್ಟದಲ್ಲಿ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಜಾತಿ ಗಣತಿಯನ್ನು ಬೆಂಬಲಿಸಿದ ವರಲ್ಲಿ ಗರಿಷ್ಠ ಸಂಖ್ಯೆಯ ಮತದಾರರು ಪೂರ್ವ ವಲಯದಲ್ಲಿ ಶೇ 43ರಷ್ಟು. 63 ರಷ್ಟು, ಮಂದಿ ಮತದಾರರು ಪ್ರಶ್ನೆಗೆ ʼಇಲ್ಲʼ ಎಂದು ಉತ್ತರಿಸಿ ಗಮನಸೆಳೆದಿದ್ದಾರೆ.

ಪ್ರಶ್ನೆ 7: ಒಂದು ರಾಷ್ಟ್ರ, ಒಂದು ಚುನಾವಣೆಗೆ ಬಹುಮತ

ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಯನ್ನು ಜಾರಿಗೆ ತರುವ ಕೇಂದ್ರದ ಯೋಜನೆಯನ್ನು ನೀವು ಅನುಮೋದಿಸುತ್ತೀರಾ?

ಈ ಆಲೋಚನೆಯ ಪರವಾಗಿ ಹೆಚ್ಚಿನ ಮತದಾರರು ಒಲವು ತೋರಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇ. 62 ರಷ್ಟು ಮತದಾರರು ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಯ ಪರವಾಗಿದ್ದಾರೆ. ಆದರೆ ಶೇಕಡಾ 30 ಕ್ಕಿಂತ ಕಡಿಮೆ ಜನರು ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣದಲ್ಲಿ ಮಾತ್ರ, ಕೆಲವು ಮತದಾರರು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶೇ 51 ರಷ್ಟು ಮತದಾರರು ಒಂದು ರಾಷ್ಟ್ರ, ಒಂದು ಚುನಾವಣೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಲ್ಲಿ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವುದರಿಂದ ಈ ಪ್ರತಿಕ್ರಿಯೆ ಸಹಜ ಎನ್ನಬಹುದು. ಆದರೆ ಈ ಪರಿಕಲ್ಪನೆಗೆ ಪಶ್ಚಿಮ ವಲಯದಿಂದ ಗರಿಷ್ಠ ಬೆಂಬಲ ದೊರೆತಿದೆ. ಈ ಭಾಗದ ಶೇ. 71 ರಷ್ಟು ಮತದಾರರು ಒಂದು ರಾಷ್ಟ್ರ, ಒಂದು ಚುನಾವಣೆಗೆ ಬೆಂಬಲ ಸೂಚಿಸಿದ್ದಾರೆ.

ಪ್ರಶ್ನೆ 8: ಪ್ರಧಾನಮಂತ್ರಿಯಾಗಿ ವಿರೋಧ ಪಕ್ಷದ ನಾಯಕ

ವಿರೋಧ ಪಕ್ಷದ ನಾಯಕರಲ್ಲಿ ಮತದಾರರ ಪ್ರಕಾರ ಉತ್ತಮ ಪ್ರಧಾನಿಯಾಗಬಲ್ಲ ಅಭ್ಯರ್ಥಿ ಯಾರು?

ಸಮೀಕ್ಷೆಯಲ್ಲಿ ಉತ್ತರ ಹೇಳಲಾಗುವುದಿಲ್ಲ ಅಥವಾ ತಿಳಿದಿಲ್ಲ ಎಂದು ಹೇಳಿರುವವರ ಸಂಖ್ಯೆ ಹೆಚ್ಚಿದೆ. ದಕ್ಷಿಣ ವಲಯದಲ್ಲಿ ವಿರೋಧ ಪಕ್ಷಗಳು ಅಧಿಕಾರದಲ್ಲಿರುವುದರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶೇ 27 ರಷ್ಟು ಮತದಾರರ ಆಯ್ಕೆ. ನಂತರದ ಸ್ಥಾನ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್. ಶೇ. 17 ರಷ್ಟು ಮತದಾರರು ಅವರತ್ತ ಒಲವು ತೋರಿದ್ದಾರೆ. ಇತರರು ತಮ್ಮ ರಾಜ್ಯ/ಪ್ರದೇಶಗಳಿಂದ ಕೆಲವು ಬೆಂಬಲವನ್ನು ಪಡೆದಿರುವಂತೆ ತೋರುತ್ತಿದೆ.

ಪ್ರಶ್ನೆ 9: ಸಾರ್ವಕಾಲಿಕ ನೆಚ್ಚಿನ ಪ್ರಧಾನಿ

3 ಸಾರ್ವಕಾಲಿಕ ನೆಚ್ಚಿನ ಭಾರತದ ಪ್ರಧಾನ ಮಂತ್ರಿಗಳು ಯಾರು?

ಇಲ್ಲಿ ಸ್ಪಷ್ಟ ಉತ್ತರವೆಂದರೆ ದೇಶದ ಪ್ರಧಾನಿ ನರೇಂದ್ರ ಮೋದಿ. ಉತ್ತರ ವಲಯದ ಶೇ. 62 ಮತದಾರರು ಮೋದಿ ತಮ್ಮ ಆಯ್ಕೆ ಎಂದಿದ್ದರೆ, ಉತ್ತರ, ಪಶ್ಚಿಮ ಮತ್ತು ಪೂರ್ವದಿಂದ ಶೇಕಡಾ 60 ಕ್ಕಿಂತ ಹೆಚ್ಚು ಮಂದಿ ಮೋದಿ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಶೇ.48 ರಷ್ಟು ಮತದಾರರು ಅಟಲ್ ಬಿಹಾರಿ ವಾಜಪೇಯಿ ತಮ್ಮ ನೆಚ್ಚಿನ ನಾಯಕ ಎಂದು ಹೇಳಿದರೆ, ಶೇ.42 ರಷ್ಟು ಮಂದಿ ಮತದಾರರು ಇಂದಿರಾಗಾಂಧಿ ಅವರತ್ತ ಒಲವು ತೋರಿದ್ದಾರೆ. ಸ್ವಾತಂತ್ರ್ಯ ಬಂದ ಎಪ್ಪತ್ತಾರು ವರ್ಷಗಳಲ್ಲಿ ಇಂದಿರಾ ಗಾಂಧಿ ಅವರನ್ನು ದಕ್ಷಿಣ ವಲಯದಲ್ಲಿ ಶೇ 54 ರಷ್ಟು ಮತದಾರರು ನೆಚ್ಚಿನ ನಾಯಕಿ ಎಂದಿದ್ದಾರೆ. ಮೋದಿ ಅವರನ್ನು ಬೆಂಬಲಿಸಿದವರ ಸಂಖ್ಯೆ ಶೇ. 48 ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ರಾಜ್ಯವಾರು ಅಂಕಿ-ಅಂಶ

ದ ಫೆಡರಲ್ ಪ್ರತಿದಿನ ಪ್ರಕಟವಾಗುತ್ತಿರುವ ಈ ಸಮೀಕ್ಷೆಯನ್ನು ಕುರಿತು ರಾಜಕೀಯ ತಜ್ಞರೊಂದಿಗೆ ಚರ್ಚೆಗಳನ್ನು ನಡೆಸುತ್ತಿದೆ.

ನಾಳೆಯಿಂದ, ನಾವು 2024 ರ ಲೋಕಸಭಾ ಚುನಾವಣೆಯ ರಾಜ್ಯವಾರು ಸಮೀಕ್ಷೆಯ ಫಲಿತಾಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ…


ಚುನಾವಣಾ ಪೂರ್ವ ಸಮೀಕ್ಷೆಯ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ..

Read More
Next Story