ಎನ್ ಡಿಎ- ಟಿಡಿಪಿ; ಸೀಟು ಹಂಚಿಕೆಗೆ ಮಾತುಕತೆ
x

ಎನ್ ಡಿಎ- ಟಿಡಿಪಿ; ಸೀಟು ಹಂಚಿಕೆಗೆ ಮಾತುಕತೆ


ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ)ದ ನಾಯಕ ಚಂದ್ರಬಾಬು ನಾಯ್ಡು ಐದು ವರ್ಷಗಳ ನಂತರ ಮತ್ತೆ ಕೈಜೋಡಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಕೈಜೋಡಿಸಲು ಟಿಡಿಪಿ ಸಜ್ಜಾಗಿದೆ.

ಈಸಂಬಂಧ ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಮುಖಂಡ ಪವನ್ ಕಲ್ಯಾಣ್, ದಿಲ್ಲಿಯಲ್ಲಿ ಗುರುವಾರ ರಾತ್ರಿ ಚರ್ಚೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಚರ್ಚೆ ನಡೆದಿದ್ದು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತರಿದ್ದರು. ಮೈತ್ರಿ ಅಂತಿಮಗೊಂಡಿದೆ ಎನ್ನಲಾಗಿದ್ದು, ಸೀಟು ಹಂಚಿಕೆ ನಿರ್ಧಾರ ಬಾಕಿ ಇದೆ. ಶುಕ್ರವಾರವೂ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಟಿಡಿಪಿ ಸಂಸದರೊಬ್ಬರು ಫೆಡರಲ್ ತೆಲಂಗಾಣಕ್ಕೆ ತಿಳಿಸಿದ್ದಾರೆ.

ಸೀಟು ಹಂಚಿಕೆ ಚರ್ಚೆ: ಬಿಜೆಪಿಗೆ ಎಷ್ಟು ಸೀಟು ನೀಡಬೇಕು ಎಂಬ ಬಗ್ಗೆ ಟಿಡಿಪಿ ಮುಖಂಡರಾದ ರಾಮಮೋಹನ್ ನಾಯ್ಡು, ಕನಕಮೇಡಲ ರವೀಂದ್ರಕುಮಾರ್, ರಘುರಾಮಕೃಷ್ಣಂ ರಾಜು, ವೇಮಿರೆಡ್ಡಿ ಪ್ರಭಾಕರ್ ರೆಡ್ಡಿ, ಲಾವು ಕೃಷ್ಣದೇವರಾಯ ಮತ್ತಿತರರೊಂದಿಗೆ ಚಂದ್ರಬಾಬು ನಾಯ್ಡು ಮಾತುಕತೆ ನಡೆಸಿದರು.

ಅಮಿತ್‌ ಷಾ 10 ಲೋಕಸಭೆ ಸ್ಥಾನ ಕೇಳಿದ್ದಾರೆ. ಟಿಡಿಪಿ ನಾಲ್ಕು ಲೋಕಸಭೆ ಮತ್ತು ಆರು ವಿಧಾನಸಭಾ ಸ್ಥಾನಗಳನ್ನು ಬಿಜೆಪಿಗೆ ನೀಡಲು ಸಿದ್ಧವಾಗಿದೆ ಎಂದು ಹೇಳಲಾಗಿದೆ. ಬಿಜೆಪಿ ನಾಯಕರು ವಿಧಾನಸಭೆ ಸ್ಥಾನಗಳ ನಿರ್ಧಾರವನ್ನು ಚಂದ್ರಬಾಬು ಅವರಿಗೆ ಬಿಟ್ಟಿದ್ದಾರೆ.

2019 ರ ಚುನಾವಣೆಗೆ ಮುನ್ನ ಚಂದ್ರಬಾಬು ಅವರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಮೋದಿಯವರ ನೀತಿಗಳನ್ನು, ವಿಶೇಷವಾಗಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದಕ್ಕಾಗಿ ಟೀಕಿಸಿದ್ದರು.


Read More
Next Story