ಸ್ಪ್ಯಾನಿಷ್ ಮಹಿಳೆ ಅತ್ಯಾಚಾರ: ಮೂವರ ಬಂಧನ
x
ಮೂವರು ಆರೋಪಿಗಳನ್ನು ಜಾರ್ಖಂಡ್‌ನ ದುಮ್ಕಾ ನ್ಯಾಯಾಲಯಕ್ಕೆ ಕರೆತಂದ ಪೊಲೀಸರು

ಸ್ಪ್ಯಾನಿಷ್ ಮಹಿಳೆ ಅತ್ಯಾಚಾರ: ಮೂವರ ಬಂಧನ


ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸ್ಪ್ಯಾನಿಷ್ ಪ್ರವಾಸಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನುನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮಾ.3ರಂದು ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ್ ಸಿಂಗ್ ಖೇರ್ವಾರ್, ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನು ನಡೆದಿದ್ದು, ಅತ್ಯಾಚಾರ ದೃಢಪಟ್ಟಿದೆ ಎಂದು ಹೇಳಿದ್ದರು.

ರಾಜಧಾನಿ ರಾಂಚಿಯಿಂದ 300 ಕಿಮೀ ದೂರದಲ್ಲಿರುವ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ ಶುಕ್ರವಾರ ಸ್ಪೇನ್‌ನ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಏಳು ಆರೋಪಿಗಳ ಪೈಕಿ ಮೂವರು, ರಾಜನ್ ಮರಾಂಡಿ, ಪ್ರದೀಪ್ ಕಿಸ್ಕು ಮತ್ತು ಸುಖಲಾಲ್ ಹೆಂಬ್ರೋಮ್ ಬಂಧಿಸಲಾಗಿದೆ ಮತ್ತು ಇತರ ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಖೇರ್ವಾರ್ ಹೇಳಿದ್ದಾರೆ.

ತನಿಖೆ ತೀವ್ರ: ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಜಾರ್ಖಂಡ್ ಸಿಐಡಿ ಪ್ರಕರಣದ ತನಿಖೆ ಆರಂಭಿಸಿದೆ. ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ನೇತೃತ್ವದ ಸಿಐಡಿ ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಿತು. ದಂಪತಿಯನ್ನು ಭೇಟಿಯಾಗಿ, ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿತು.

ಎರಡು ವಿಧಿವಿಜ್ಞಾನ ತಂಡಗಳು ಕೂಡ ಸ್ಥಳಕ್ಕೆ ಭೇಟಿ ನೀಡಿವೆ. ಕೈಗಡಿಯಾರ, ಹೆಲ್ಮೆಟ್‌ನ ಒಡೆದ ಭಾಗಗಳು ಮತ್ತು ಬಟ್ಟೆ ಸೇರಿದಂತೆ ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ. ಮಹಿಳಾ ಆಯೋಗ ಭೇಟಿ:

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಮಮತಾ ಕುಮಾರಿ ಸಂತ್ರಸ್ತೆಯನ್ನು ಭೇಟಿಯಾಗಿದ್ದು, ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಮತ್ತು ಕಠಿಣ ಕ್ರಮವನ್ನು ಖಚಿತಪಡಿಸಿಕೊಳ್ಳಬೇಕುʼ ಎಂದು ಹೇಳಿದರು.

ಭಾರತ ಅಸುರಕ್ಷಿತ: ದೇಶ ಮಹಿಳೆಯರಿಗೆ ಅಸುರಕ್ಷಿತವಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಯುಎಸ್ ಮೂಲದ ಬರಹಗಾರ ಡೇವಿಡ್ ಜೋಸೆಫ್ ವೊಲೊಡ್ಜ್ಕೊ ಅವರನ್ನುಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಟೀಕಿಸಿದ್ದಾರೆ.

ʼನಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ಅದು ವಿಶ್ವದ ನೆಚ್ಚಿನ ಸ್ಥಳಗಳಲ್ಲಿ ಒಂದು. ಆದರೆ, ಒಬ್ಬಂಟಿಯಾಗಿ ಪ್ರಯಾಣಿಸಬೇಡಿ ಎಂದು ಮಹಿಳಾ ಸ್ನೇಹಿತರಿಗೆ ಸಲಹೆ ನೀಡಿದ್ದೇನೆʼ ಎಂದು ಸಿಯಾಟಲ್ ಮೂಲದ ಲೇಖಕ ಪೋಸ್ಟ್ ಮಾಡಿದ್ದರು.

ʻನೀವು ಎಂದಾದರೂ ಘಟನೆಯನ್ನು ಪೊಲೀಸರಿಗೆ ವರದಿ ಮಾಡಿದ್ದೀರಾ? ಇಲ್ಲದಿದ್ದರೆ, ನೀವು ಸಂಪೂರ್ಣವಾಗಿ ಬೇಜವಾಬ್ದಾರಿ ವ್ಯಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಬರೀ ಬರೆದು ಇಡೀ ದೇಶದ ಮಾನಹಾನಿ ಮಾಡುವುದು ಒಳ್ಳೆಯದಲ್ಲʼ ಎಂದಿದ್ದಾರೆ.

Read More
Next Story