ಶಿಕ್ಷೆ ಅಮಾನತು: ಅಸಾರಾಂ  ಮನವಿ ತಿರಸ್ಕೃತ
x

ಶಿಕ್ಷೆ ಅಮಾನತು: ಅಸಾರಾಂ ಮನವಿ ತಿರಸ್ಕೃತ


ಹೊಸದಿಲ್ಲಿ, ಮಾ.1- ತಮ್ಮ ಆರೋಗ್ಯ ಸ್ಥಿತಿ ಹದಗೆಟ್ಟಿರುವುದರಿಂದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಅಸಾರಾಂ ಬಾಪು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಮಹಾರಾಷ್ಟ್ರದ ಖೋಪೋಲಿಯಲ್ಲಿರುವ ಮಾಧವ್‌ಬಾಗ್ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಪರಿಹಾರಕ್ಕಾಗಿ ರಾಜಸ್ಥಾನ ಹೈಕೋರ್ಟ್‌ನ ಮೊರೆ ಹೋಗುವಂತೆ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ದೀಪಂಕರ್ ದತ್ತಾ ಅವರ ಪೀಠವು ಹಿರಿಯ ವಕೀಲ ಮುಕುಲ್ ರೋಹಟಗಿ ಅವರಿಗೆ ಹೇಳಿದೆ.

ಮಾಧವ್‌ಬಾಗ್ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರಾಜಸ್ಥಾನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಪೀಠ ಅಸಾರಾಂ ಅವರಿಗೆ ಸೂಚಿಸಿತು. ಪ್ರಕರಣ ದಲ್ಲಿ ಶಿಕ್ಷೆ ಮತ್ತು ಶಿಕ್ಷೆ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ವಿಳಂಬಗೊಳಿಸಲು ಅಸಾರಾಂ ಮಾಡಿದ ಉದ್ದೇಶಪೂರ್ವಕ ವಿಳಂಬವನ್ನು ನ್ಯಾ. ಖನ್ನಾ ಉಲ್ಲೇಖಿಸಿದ್ದಾರೆ.

ಅಸಾರಾಂಗೆ ಹಲವು ಬಾರಿ ಹೃದಯಾಘಾತವಾಗಿದೆ, ಕರುಳಿನ ರಕ್ತಸ್ರಾವದ ಜೊತೆಗೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ರೋಹಟಗಿ ಹೇಳಿದರು. ಅವರ ಮೇಲ್ಮನವಿಯನ್ನು ಹೈಕೋರ್ಟ್‌ ತ್ವರಿತ ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಜೋಧ್‌ಪುರದ ವಿಶೇಷ ಪೋಕ್ಸೋ ನ್ಯಾಯಾಲಯ 2018 ರಲ್ಲಿ ಅಸಾರಾಂ ಅಪರಾಧಿ ಎಂದು ನಿರ್ಣಯಿಸಿ, ಜೀವಾವಧಿ ಶಿಕ್ಷೆ ವಿಧಿಸಿತು. ಆಶ್ರಮದಲ್ಲಿ ಹದಿಹರೆ ಯದ ಹುಡುಗಿ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಸೆಪ್ಟೆಂಬರ್ 2, 2013 ರಿಂದ ಬಂಧನದಲ್ಲಿದ್ದಾರೆ.

Read More
Next Story