ರಾಮ ನನ್ನ ದೇವರಲ್ಲ, ಭಾರತ ರಾಷ್ಟ್ರವಲ್ಲ: ಎ.ರಾಜಾ
x

ರಾಮ ನನ್ನ ದೇವರಲ್ಲ, ಭಾರತ ರಾಷ್ಟ್ರವಲ್ಲ: ಎ.ರಾಜಾ

ಬಿಜೆಪಿ ಆಕ್ರೋಶ , ಹೇಳಿಕೆಯಿಂದ ದೂರ ಕಾಯ್ದುಕೊಂಡ ಕಾಂಗ್ರೆಸ್


ಡಿಎಂಕೆ ಸಂಸದ ಎ. ರಾಜಾ ಅವರ ಭಗವಾನ್‌ ರಾಮನ ವಿರುದ್ಧ ಮತ್ತು ಭಾರತದ ಅಸ್ಮಿತೆಯನ್ನುತಳ್ಳಿಹಾಕುವ ಹೇಳಿಕೆ ತಮಿಳುನಾಡಿನಲ್ಲಿ ವಿವಾದ ಸೃಷ್ಟಿಸಿದೆ. ಬಿಜೆಪಿ ಮಾತ್ರವಲ್ಲದೆ, ಆಡಳಿತ ಪಕ್ಷದ ಮಿತ್ರ ಪಕ್ಷವಾದ ಕಾಂಗ್ರೆಸ್‌ ಹೇಳಿಕೆಯನ್ನು ಖಂಡಿಸಿವೆ.

ರಾಜಾ ಹೇಳಿದ್ದೇನು?: ಮಧುರೈನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಜಾ, ಭಾರತ ಎಂದಿಗೂ ರಾಷ್ಟ್ರವಾಗಿರಲಿಲ್ಲ; ವೈವಿಧ್ಯಮಯ ಆಚರಣೆಗಳು ಮತ್ತು ಸಂಸ್ಕೃತಿಗಳ ನೆಲೆಯಾಗಿರುವ ಉಪಖಂಡವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಭಾಷಣದ ವಿಡಿಯೋ ಹಂಚಿಕೊಂಡಿದ್ದಾರೆ.

ʻಭಾರತವು ಒಂದು ರಾಷ್ಟ್ರವಲ್ಲ; ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಭಾರತ ಎಂದಿಗೂ ಒಂದು ರಾಷ್ಟ್ರವಾಗಿರಲಿಲ್ಲ. ರಾಷ್ಟ್ರ ಎನ್ನುವುದು ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿಯನ್ನು ಸೂಚಿಸುತ್ತದೆ; ಅಂತಹ ಗುಣಲಕ್ಷಣಗಳು ಮಾತ್ರ ಒಂದು ರಾಷ್ಟ್ರವನ್ನು ರೂಪಿಸುತ್ತವೆ, ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ʻಇದಕ್ಕೇನು ಕಾರಣ? ಇಲ್ಲಿ ತಮಿಳು ಒಂದೇ ರಾಷ್ಟ್ರ ಮತ್ತು ಒಂದು ದೇಶ. ಮಲಯಾಳಂ ಒಂದು ಭಾಷೆ, ಒಂದು ರಾಷ್ಟ್ರ ಮತ್ತು ಒಂದು ದೇಶ. ಒರಿಯಾ ಒಂದು ರಾಷ್ಟ್ರ, ಒಂದು ಭಾಷೆ ಮತ್ತು ಒಂದು ದೇಶ. ಅಂತಹ ಎಲ್ಲಾ ರಾಷ್ಟ್ರೀಯ ಜನಾಂಗಗಳು ದೇಶವನ್ನು ರೂಪಿಸುತ್ತವೆ. ಆದ್ದರಿಂದ, ಭಾರತ ಒಂದು ದೇಶವಲ್ಲ; ಬದಲಾಗಿ, ವಿವಿಧ ಆಚರಣೆಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಹೊಂದಿರುವ ಉಪಖಂಡʼ ಎಂದು ಹೇಳಿದ್ದಾರೆ.

ರಾಜ್ಯಗಳ ಸಂಸ್ಕೃತಿಗಳು ವ್ಯತ್ಯಾಸ ಹೊಂದಿರುತ್ತವೆ ಎಂದು ವಿವರಿಸುತ್ತ,ʼ ತಮಿಳುನಾಡಿನಲ್ಲಿ ಒಂದು ಸಂಸ್ಕೃತಿಯಿದೆ ಮತ್ತು ಕೇರಳದಲ್ಲಿ ಇನ್ನೊಂದು ಸಂಸ್ಕೃತಿಯಿದೆ. ಅದೇ ರೀತಿ ದೆಹಲಿಯಲ್ಲೂ ಒಂದು ಸಂಸ್ಕೃತಿ ಇದೆ. ಒಡಿಶಾದಲ್ಲಿ ಮತ್ತೊಂದು ಸಂಸ್ಕೃತಿ ಇದೆ. ಮಣಿಪುರದಲ್ಲಿ ನಾಯಿ ಮಾಂಸ ಸೇವಿಸುತ್ತಾರೆ. ಇದು ಸಾಂಸ್ಕೃತಿಕ ಅಂಶ. ಕಾಶ್ಮೀರದಲ್ಲಿ ಒಂದೇ ಸಂಸ್ಕೃತಿ ಇದೆ. ಪ್ರತಿಯೊಂದು ಸಂಸ್ಕೃತಿಯನ್ನು ಗುರುತಿಸಬೇಕು. ಸಮುದಾಯವೊಂದು ಗೋಮಾಂಸ ತಿಂದರೆ ಅದನ್ನು ಗೌರವಿಸಿ. ನಿಮ್ಮ ಸಮಸ್ಯೆ ಏನು? ಅವರು ನೀವು ತಿನ್ನಿ ಎನ್ನುತ್ತಿದ್ದಾರೆಯೇ? ಇದೇ ವಿವಿಧತೆಯಲ್ಲಿ ಏಕತೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ ಮತ್ತು ಅದನ್ನು ಒಪ್ಪಿಕೊಳ್ಳಬೇಕು, ʼಎಂದು ವಿಡಿಯೋದಲ್ಲಿ ಹೇಳಿದ್ದಾರೆ.

'ನಿಮ್ಮ ಜೈ ಶ್ರೀರಾಮ್ ಚಿ': ರಾಮಾಯಣ ಮತ್ತು ರಾಮನ ಬಗ್ಗೆ ಅವಹೇಳನಕಾರಿ ಟೀಕೆ ಮಾಡಿದ್ದಾರೆ ಎನ್ನಲಾಗಿದೆ. ʻತಮಿಳರು ಎಂದಿಗೂ ರಾಮನನ್ನು ತಮ್ಮ ದೇವರೆಂದು ಒಪ್ಪಿಕೊಳ್ಳುವುದಿಲ್ಲ ಅಥವಾ 'ಜೈ ಶ್ರೀ ರಾಮ್' ಅಥವಾ 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗುವುದಿಲ್ಲʼ ಎಂದು ಹೇಳಿದ್ದಾರೆ.

ʻನೀವು ಹೇಳಿದರೆ ಇದು ದೇವರು. ಇದು ನಿಮ್ಮ ಜೈ ಶ್ರೀ ರಾಮ್ , ಇದು ನಿಮ್ಮ ಭಾರತ್ ಮಾತಾ ಕೀ ಜೈ. ನಾವು ಜೈ ಶ್ರೀ ರಾಮ್ ಮತ್ತು ಭಾರತ್ ಮಾತೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ತಮಿಳುನಾಡು ಒಪ್ಪುವುದಿಲ್ಲ. ನೀವು ಹೋಗಿ ಹೇಳಿ- ನಾವು ರಾಮನ ಶತ್ರುಗಳು,ʼ ಎಂದು ವೀಡಿಯೊದಲ್ಲಿದೆ.

ʻರಾಮಾಯಣದ ಹೆಸರಿನಲ್ಲಿ ಸೌಹಾರ್ದ ಇದೆ ಎಂದು ನೀವು ಹೇಳಿದರೆ, ನಾಲ್ವರು ಸಹೋದರರು, ಒಬ್ಬ ಕುರವ ಸಹೋದರ, ಒಬ್ಬ ಬೇಟೆಗಾರ ಸೋದರ, ಕೋತಿ ಮತ್ತೊಂದು ಸಹೋದರ, ಇನ್ನೊಂದು ಕೋತಿ ಆರನೇ ಸಹೋದರ ಎಂದು ನೀವು ಹೇಳಿದರೆ, ಆಗ ನಿಮ್ಮ ' ಜೈ ಶ್ರೀ ರಾಮ್ ಚಿ! ಈಡಿಯಟ್ಸ್!ʼ ಎಂದು ಹೇಳಿರುವುದಾಗಿ ಉಲ್ಲೇಖಿಸಿದೆ.

ರಾಜಾ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ: ರಾಜಾ ಹೇಳಿಕೆಗೆ ಬಿಜೆಪಿ ರೊಚ್ಚಿಗೆದ್ದಿದ್ದು, ʻದೇಶವನ್ನು ಬಾಲ್ಕನೈಸ್ ಮಾಡುವ ಪ್ರಯತ್ನʼ ಎಂದು ಕರೆದಿದೆ.

ʻಡಿಎಂಕೆಯ ದ್ವೇಷ ಭಾಷಣಗಳು ನಿರಂತರವಾಗಿ ಮುಂದುವರಿದಿವೆ. ಸನಾತನ ಧರ್ಮವನ್ನು ನಿರ್ನಾಮ ಮಾಡಲು ಉದಯನಿಧಿ ಸ್ಟಾಲಿನ್ ಕರೆ ನೀಡಿದ ನಂತರ, ಈಗ ರಾಜ ದೇಶವನ್ನು ಬಾಲ್ಕನೈಸ್‌ ಮಾಡಲು ಕರೆ ನೀಡಿದ್ದಾರೆ. ಭಗವಾನ್ ರಾಮನನ್ನು ಧಿಕ್ಕರಿಸುತ್ತಾರೆ; ಮಣಿಪುರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಾರೆ ಮತ್ತು ಒಂದು ರಾಷ್ಟ್ರವಾಗಿ ಭಾರತದ ಕಲ್ಪನೆಯನ್ನು ಪ್ರಶ್ನಿಸುತ್ತಾರೆ. ಕಾಂಗ್ರೆಸ್ ಮತ್ತು ಇಂಡಿಯ ಒಕ್ಕೂಟದ ಪಾಲುದಾರ ರು ಮೌನವಾಗಿದ್ದಾರೆ. ಅವರ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಮೌನ ಅರ್ಥ ವಾಗುವಂಥದ್ದುʼ ಎಂದು ಮಾಳವೀಯ ಎಕ್ಸ್‌ನಲ್ಲಿ ಬರೆದಿದ್ದಾರೆ.

ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಸಾರ್ವಜನಿಕವಾಗಿ ಭಾರತದ ನೀತಿಯನ್ನು ಅವಮಾನಿಸುವುದು ಮತ್ತು ಹಿಂದೂ ದೇವರು ಗಳನ್ನು ಅವಮಾನಿಸುವುದು ಇಂಡಿಯಾ ಒಕ್ಕೂಟದ ರಾಜಕೀಯ ಕಾರ್ಯಸೂಚಿಯ ಲಕ್ಷಣ. ರಾಜಾ ಅವರ 'ಭಾರತ ಒಂದು ರಾಷ್ಟ್ರವಲ್ಲ' ಹೇಳಿಕೆಯು ʻಮಾವೋವಾದಿ ಸಿದ್ಧಾಂತʼ ಎಂದು ಹೇಳಿದರು.

ಗಾಂಧಿ ಕುಟುಂಬ, ಕಾಂಗ್ರೆಸ್‌ನಿಂದ ವಿವರಣೆ ಕೇಳಿದ ಬಿಜೆಪಿ: ʻಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ, ಮಲ್ಲಿಕಾರ್ಜುನ ಖರ್ಗೆ, ನೀವು ಇದನ್ನು ಸರಿ ಎಂದು ಪರಿಗಣಿಸುತ್ತೀರಾ?ʼ ಎಂದು ಪ್ರಸಾದ ಕೇಳಿದ್ದಾರೆ.

ʻಸನಾತನ ಧರ್ಮ ನಿರ್ಮೂಲನೆ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌, ಸಚಿವ ಉದಯನಿಧಿ ಸ್ಟಾಲಿನ್‌ ಅವರಿಗೆ ಛೀಮಾರಿ ಹಾಕಿದೆ. ಹಿಂದುಗಳ ಭಾವನೆಗಳನ್ನು ಅವಮಾನಿಸಬೇಡಿ. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಇದು ಋಗ್ವೇದದ ಭಾರತೀಯ 'ಸಂಸ್ಕಾರ'. ಇದು 'ಸತ್ಯ ಒಂದೇ, ಮಾರ್ಗಗಳು ವಿಭಿನ್ನವಾಗಿರಬಹುದು' ಎಂದು ಹೇಳುತ್ತದೆʼ ಎಂದರು.

ರಾಜಾ ಹೇಳಿಕೆಗೆ ಕಾಂಗ್ರೆಸ್ ಖಂಡನೆ: ಕಾಂಗ್ರೆಸ್ ರಾಜಾ ಅವರ ಟೀಕೆಗಳನ್ನು ಖಂಡಿಸಿದೆ. ಮಾತನಾಡುವಾಗ ಸಂಯಮದಿಂದ ವರ್ತಿಸಬೇಕು ಎಂದು ಹೇಳಿದೆ.

ʻ"ನಾನು ಅವರ ಹೇಳಿಕೆಗಳನ್ನು ಒಪ್ಪುವುದಿಲ್ಲ. ಇಂತಹ ಹೇಳಿಕೆಯನ್ನು ಖಂಡಿಸುತ್ತೇನೆ. ರಾಮ ಎಲ್ಲರಿಗೂ ಸೇರಿದವನು ಮತ್ತು ಎಲ್ಲರನ್ನೂ ಒಳಗೊಳ್ಳುತ್ತಾನೆ ಎಂದು ನಾನು ನಂಬುತ್ತೇನೆʼ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಹೇಳಿದ್ದಾರೆ.

ʻಇಮಾಮ್-ಎ-ಹಿಂದ್ ಎಂದು ಕರೆಯಲ್ಪಡುವ ರಾಮನು ಸಮುದಾಯಗಳು, ಧರ್ಮಗಳು ಮತ್ತು ಜಾತಿಗಳಿಗಿಂತ ಮೇಲಿದ್ದಾನೆ ಎಂದು ನಾನು ನಂಬುತ್ತೇನೆ. ರಾಮನು ಬದುಕುವ ಆದರ್ಶ, ರಾಮನು ಘನತೆ, ರಾಮನು ನೀತಿ, ರಾಮನು ಪ್ರೀತಿʼ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Read More
Next Story