ಕೋಲ್ಕತ್ತಾ ಮೆಟ್ರೋದ ನೀರೊಳಗಿನ ವಿಸ್ತರಣೆ ಅನಾವರಣ
x
ಬುಧವಾರ ಕೋಲ್ಕತ್ತಾದಲ್ಲಿ ನೀರೊಳಗೆ ಸಂಚರಿಸುವ ಮೆಟ್ರೋದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ.

ಕೋಲ್ಕತ್ತಾ ಮೆಟ್ರೋದ ನೀರೊಳಗಿನ ವಿಸ್ತರಣೆ ಅನಾವರಣ


ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಮಾರ್ಚ್ 6) ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋ ಲೈನ್ ಸೇರಿದಂತೆ ದೇಶಾದ್ಯಂತ ಹಲವು ಮೆಟ್ರೋ ಯೋಜನೆಗಳನ್ನು ಅನಾವರಣಗೊಳಿಸಿದರು.

ನದಿಯಡಿ ಸಾರಿಗೆ ಸುರಂಗ ಇರುವ ಕೋಲ್ಕತ್ತಾ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್‌ನ 4,965 ರೂ. ಕೋಟಿ ವೆಚ್ಚದ ಹೌರಾ ಮೈದಾನ- ಎಸ್‌ಪ್ಲನೇಡ್ ವಿಭಾಗವನ್ನು ಪ್ರಧಾನಿ ಉದ್ಘಾಟಿಸಿದರು. ಈ ವಿಸ್ತರಣೆಯಲ್ಲಿ ದೇಶದ ಅತ್ಯಂತ ಆಳದ ಹೌರಾ ಮೆಟ್ರೋ ನಿಲ್ದಾಣ ಇರಲಿದೆ. ಉದ್ಘಾಟನೆ ಕಾರ್ಯಕ್ರಮದ ನಂತರ, ಮೋದಿ ಅವರು ಶಾಲಾ ಮಕ್ಕಳೊಂದಿಗೆ ಎಸ್‌ಪ್ಲನೇಡ್‌ನಿಂದ ಹೌರಾ ಮೈದಾನದವರೆಗೆ ಪ್ರಯಾಣ ಮಾಡಿದರು. ಸುರಂಗ 520 ಮೀಟರ್ ಉದ್ದವಿದ್ದು, ಅದನ್ನು ದಾಟಲು ರೈಲು 45 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಪ್ಲನೇಡ್ ಮೆಟ್ರೋ ನಿಲ್ದಾಣದಲ್ಲಿ ನಡೆದ ಸಮಾರಂ ಭದಲ್ಲಿ ಗರಿಯಾ ವಿಮಾನ ನಿಲ್ದಾಣ ಮಾರ್ಗದ ಕವಿ ಸುಭಾಷ್ ಹೇಮಂತ ಮುಖೋಪಾಧ್ಯಾಯ (ಮಾಣಿಕ್ಯ) ವಿಭಾಗ ಮತ್ತು ಜೋ ಕಾ-ಎಸ್‌ಪ್ಲನೇಡ್ ಮಾರ್ಗದ ತಾರಾತಲಾ-ಮಜೆರ್‌ಹತ್ ವಿಭಾಗವನ್ನು ಉದ್ಘಾಟಿಸಿದರು.

ದೇಶದ ಇತರ ಮಾರ್ಗಗಳು: ದೆಹಲಿ-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ ದುಹೈ-ಮೋದಿನಗರ (ಉತ್ತರ) ವಿಭಾಗ, ಪುಣೆ ಮೆಟ್ರೋದ ರೂಬಿ ಹಾಲ್ ಕ್ಲಿನಿಕ್-ರಾಮ್‌ವಾಡಿ ವಿಸ್ತರಣೆ, ಕೊಚ್ಚಿ ಮೆಟ್ರೋದ ಎಸ್‌ಎನ್ ಜಂಕ್ಷನ್‌ನಿಂದ ತ್ರಿಪುನಿಥುರಾ ವಿಭಾಗ ಮತ್ತು ಆಗ್ರಾ ಮೆಟ್ರೋದ ತಾಜ್ ಈಸ್ಟ್ ಗೇಟ್-ಮಂಕಮೇಶ್ವರ ವಿಭಾಗವನ್ನು ಮೋದಿ ಉದ್ಘಾಟಿಸಿದರು. ಪಿಂಪ್ರಿ ಚಿಂಚ್‌ವಾಡ ಮತ್ತು ನಿಗ್ಡಿ ನಡುವೆ ಪುಣೆ ಮೆಟ್ರೋ ವಿಸ್ತರಣೆಗೆ ಶಂಕುಸ್ಥಾಪನೆ ಮಾಡಿದರು.

ಈ ವಿಭಾಗಗಳು ರಸ್ತೆ ದಟ್ಟಣೆಯನ್ನು ನಿವಾರಿ ಸಲು ಮತ್ತು ತಡೆರಹಿತ, ಸುಲಭ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತವೆ. ಆಗ್ರಾ ಮೆಟ್ರೋದ ವಿಭಾಗವು ಐತಿಹಾಸಿಕ ಪ್ರವಾಸಿ ಸ್ಥಳಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಆರ್‌ಆರ್‌ಟಿಎಸ್‌ನ 17-ಕಿಮೀ ವಿಭಾಗವು ಎನ್‌ಸಿಆರ್‌ನಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದೆ.


Read More
Next Story