ಮಹಾರಾಷ್ಟ್ರ: ಇಂಡಿಯ ಒಕ್ಕೂಟ ಸೀಟು ಹಂಚಿಕೆ ಒಪ್ಪಂದ ಅಂತಿಮ
x

ಮಹಾರಾಷ್ಟ್ರ: ಇಂಡಿಯ ಒಕ್ಕೂಟ ಸೀಟು ಹಂಚಿಕೆ ಒಪ್ಪಂದ ಅಂತಿಮ


ಮಹಾರಾಷ್ಟ್ರ, ಮಾ.1- ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿವೆ.

ಎನ್‌ ಡಿಟಿವಿ ಪ್ರಕಾರ, ಮೈತ್ರಿ ಪಾಲುದಾರರು ಯಾವುದೇ ಸಮಯದಲ್ಲಿ ಒಪ್ಪಂದವನ್ನು ಬಹಿರಂಗಪಡಿಸಬಹುದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪವಾರ್ ಅವರನ್ನು ಸಂಪರ್ಕಿಸಿದ ನಂತರ ಒಪ್ಪಂದ ಸಾಧ್ಯವಾಗಿದೆ.

ಸೀಟು ಹಂಚಿಕೆ ವ್ಯವಸ್ಥೆ: 48 ಸಂಸದೀಯ ಸ್ಥಾನಗಳಲ್ಲಿ, ಶಿವಸೇನೆ (ಯುಬಿಟಿ) 20, ಕಾಂಗ್ರೆಸ್‌ಗೆ 18 ಸ್ಥಾನ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ 10 ಸ್ಥಾನ ಹಾಗೂ ಜನವರಿಯಲ್ಲಿ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ) ಗೆ ಶಿವಸೇನೆ (ಯುಬಿಟಿ) 2 ಸ್ಥಾನ ನೀಡಲಿದೆ.

ವರದಿಗಳ ಪ್ರಕಾರ 39 ಕ್ಷೇತ್ರಗಳಿಗೆ ಸೀಟು ಹಂಚಿಕೆ ಕಳೆದ ವಾರ ಅಂತಿಮಗೊಂಡಿತ್ತು. ಆದರೆ, ಮುಂಬೈನ ದಕ್ಷಿಣ, ಮಧ್ಯ ಮತ್ತು ವಾಯವ್ಯದಲ್ಲಿ ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ಸ್ಪರ್ಧಿಸಲು ಬಯಸಿದ್ದರಿಂದ, ಭಿನ್ನಾಭಿಪ್ರಾಯ ಉಂಟಾಗಿತ್ತು. ಶಿವಸೇನೆ (ಯುಬಿಟಿ) ಈಗ ಮುಂಬೈನ ಆರರಲ್ಲಿ 4 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು. ಒಂದು ಸ್ಥಾನ ವಿಬಿಎಗೆ ಹೋಗಬಹುದು.

ದೊಡ್ಡ ಹೆಜ್ಜೆ: ಕಾಂಗ್ರೆಸ್ ಯುಪಿಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಹಾಗೂ ದಿಲ್ಲಿಯಲ್ಲಿ ಎಎಪಿ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಕಳೆದ ಜೂನ್‌ನಲ್ಲಿ ಆರಂಭವಾದ ಇಂಡಿಯ ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುಸಲಿದೆ. ರಾಜಕೀಯ ಭವಿಷ್ಯ ಕ್ಷೀಣಿಸಿರುವ ಕಾಂಗ್ರೆಸ್‌, ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಸ್ಥಾನ ನೀಡಲು ಮುಂದಾಗಿದೆ.

2019 ರ ಚುನಾವಣೆ: 2019ರ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ 25 ಸ್ಥಾನಗಳಲ್ಲಿ ಕೇವಲ ಮೂರರಲ್ಲಿ ಸೋತಿತ್ತು. ಬಿಜೆಪಿ ಪಾಲುದಾರ ಅವಿಭಜಿತ ಶಿವಸೇನೆ 23 ರಲ್ಲಿ 18 ಸ್ಥಾನ ಪಡೆದುಕೊಂಡಿತ್ತು. ಕಾಂಗ್ರೆಸ್‌ ಕೇವಲ ಒಂದು ಸ್ಥಾನ ಗಳಿಸಿತು. ಅವಿಭಜಿತ ಎನ್ಸಿಪಿ 4 ಅಭ್ಯರ್ಥಿಗಳನ್ನು ಸಂಸತ್ತಿಗೆ ಹಿಂದಿರುಗಿಸಿತು.

Read More
Next Story