
ʻದುಷ್ಟʼ ವಿತ್ತ ಮಂತ್ರಿ ಕೂಡ ರಾಜ್ಯಗಳ ಪಾಲು ತಿರುಚುವುದಿಲ್ಲ: ನಿರ್ಮಲಾ ಸೀತಾರಾಮನ್
ಬೆಂಗಳೂರು, ಮಾ.1-ʻರಾಜ್ಯಗಳ ತೆರಿಗೆ ಪಾಲನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ. ಅತ್ಯಂತ ದುಷ್ಟ ಹಣಕಾಸು ಸಚಿವರು ಕೂಡ ಒಂದು ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣವನ್ನುತಿರುಚಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಎಕ್ಸ್ಪ್ರೆಸ್ ಅಡ್ಡಾದಲ್ಲಿ ಮಾತನಾಡಿ, ʻಹಣಕಾಸು ಆಯೋಗದ ವರದಿ ಪಾಲಿಸುವುದನ್ನು ಹೊರತುಪಡಿಸಿ, ಕೇಂದ್ರ ಸರ್ಕಾರಕ್ಕೆ ತೆರಿಗೆ ಹಂಚಿಕೆಯಲ್ಲಿ ಯಾವುದೇ ಪಾತ್ರವಿಲ್ಲ. ಹಣಕಾಸು ಆಯೋಗವು ನೀವು ತಿಂಗಳಿಗೆ ಇಷ್ಟು ಕೊಡಿ ಎಂದು ಹೇಳುತ್ತದೆ. ನಾನು ಅದನ್ನು ಮಾಡಬೇಕುʼ ಎಂದು ಹೇಳಿದರು.
ದಕ್ಷಿಣ ಭಾರತದ ರಾಜ್ಯಗಳ ವಿರೋಧ ಪಕ್ಷದ ನಾಯಕರು ಕೇಂದ್ರದಿಂದ ಒಟ್ಟಾರೆಯಾಗಿ ತಮ್ಮ ತೆರಿಗೆಯ ಪಾಲನ್ನು ನೀಡುವಂತೆ ಒತ್ತಾಯಿಸಿದ್ದರ ಬಗ್ಗೆ ಮಾತನಾಡಿದ,ʻದಕ್ಷಿಣ ರಾಜ್ಯಗಳು ಒಟ್ಟುʼ ಎಂಬ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿವೆ. ಕರ್ನಾಟಕದ ಜವಾಬ್ದಾರಿಯುತ ಸಂಸದರೊಬ್ಬರು ನಾವು ಪ್ರತ್ಯೇಕ ದಕ್ಷಿಣ ರಾಷ್ಟ್ರ ಬೇಡಿಕೆ ಇರಿಸುತ್ತೇವೆ ಎಂದಿದ್ದಾರೆ. ಆ ಮಟ್ಟಕ್ಕೆ ತಲುಪುವ ಅವಶ್ಯಕತೆ ಇಲ್ಲ. ದಯವಿಟ್ಟು ಹಣಕಾಸು ಆಯೋಗದೊಂದಿಗೆ ಮಾತನಾಡಿʼ ಎಂದರು.
ʻಕೇಂದ್ರ ಸರ್ಕಾರವು ಮುಂದಿನ ಪೀಳಿಗೆಯ ಸುಧಾರಣೆಗಳತ್ತ ಗಮನ ಹರಿಸಲಿದೆ. ಆದರೆ, ಎಲ್ಲವೂ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಇಲ್ಲ. ರಾಜ್ಯಗಳಿಂದಲೂ ಸಾಕಷ್ಟು ಬದಲಾವಣೆ ಮಾಡಲು ಸಾಧ್ಯವಿದೆ. ಕೆಲವು ರಾಜ್ಯಗಳಿಗೆ ನಿರ್ದಿಷ್ಟ ಸಮಸ್ಯೆಗಳಿವೆ. ಕೆಲವು ರಾಜ್ಯಗಳು ವೇಗವಾಗಿ ಕೆಲಸ ಮಾಡುತ್ತಿವೆʼ ಎಂದರು.
ತನಿಖಾ ಸಂಸ್ಥೆಗಳ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿ, ʻತೆರಿಗೆ ಪಾವತಿಸಿದ ಹಣದಿಂದ ಮಾಡಿದ ಖರೀದಿಗಳ ಬಗ್ಗೆ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲʼ ಎಂದು ಹೇಳಿ ದರು.