ಚುನಾವಣೆ 2024: ಮೊಹಮ್ಮದ್ ಶಮಿ ಕಣಕ್ಕೆ?
x

ಚುನಾವಣೆ 2024: ಮೊಹಮ್ಮದ್ ಶಮಿ ಕಣಕ್ಕೆ?

ಬಿಜೆಪಿ ಶಮಿ ಅವರನ್ನು ಸಂಪರ್ಕಿಸಿದ್ದು,ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ ̤


ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಕಣಕ್ಕಿಳಿಸಲು ಬಿಜೆಪಿ ಸಂಪರ್ಕಿಸಿದೆ ಎಂದು ವರದಿಗಳು ಹೇಳಿವೆ.

ಗಾಯದಿಂದಾಗಿ ಕ್ರಿಕೆಟ್‌ನಿಂದ ಹೊರಗುಳಿದಿರುವ ಶಮಿ(33) ಬಿಜೆಪಿಯ ಪ್ರಸ್ತಾಪಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ. ಬಸಿರ್‌ಹತ್‌ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲು ಬಿಜೆಪಿ ಬಯಸಿದೆ.

ಆದರೆ, ಸಕ್ರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗರೊಬ್ಬರು ರಾಜಕೀಯಕ್ಕೆ ಸೇರಿದ ಉದಾಹರಣೆ ದೇಶದಲ್ಲಿ ಇಲ್ಲ. ಒಂದು ವೇಳೆ ಶಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರೆ, ಅವರು ಕ್ರಿಕೆಟ್ ತ್ಯಜಿಸಬೇಕಾಗುತ್ತದೆ.

ಕಳೆದ ತಿಂಗಳು ಸ್ನಾಯುರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ, ಮಾರ್ಚ್ 22 ರಂದು ಪ್ರಾರಂಭವಾಗುವ ಐಪಿಎಲ್‌ 2024ರಲ್ಲಿ ಆಡುತ್ತಿಲ್ಲ. ಟಿ20 ಲೀಗ್‌ನಲ್ಲಿ ಅವರು ಗುಜರಾತ್ ಟೈಟಾನ್ಸ್ ಪರ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಬಂಗಾಳದ ಪರ ಆಡುತ್ತಾರೆ. 2023ರ ನವೆಂಬರ್‌ ನಲ್ಲಿ ಐಸಿಸಿ ವಿಶ್ವಕಪ್ 2023 ಪಂದ್ಯದಿಂದ ಹೊರಗುಳಿದಿದ್ದಾರೆ.

ಶಮಿ ಶಸ್ತ್ರಚಿಕಿತ್ಸೆ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶಮಿಗೆ ಶುಭ ಹಾರೈಸಿದ್ದರು. ಪ್ರತಿಕ್ರಿಯಿಸಿದ್ದ ಶಮಿ,ʻ ನಿಮ್ಮ ಶುಭಾಶಯಗಳು ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ನಿರಂತರ ಹಾರೈಕೆ, ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳುʼ ಎಂದು ಬರೆದಿದ್ದರು,

ನಾನು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ ಅವರಿಂದ ವೈಯಕ್ತಿಕ ಟಿಪ್ಪಣಿಯನ್ನು ಸ್ವೀಕರಿಸುವುದು ಅದ್ಭುತ ಆಶ್ಚರ್ಯಕರವಾಗಿದೆ. ಅವರ ದಯೆ ಮತ್ತು ಚಿಂತನಶೀಲತೆ ನಿಜವಾಗಿಯೂ ನನಗೆ ಬಹಳಷ್ಟು ಅರ್ಥವಾಗಿದೆ. ಈ ಸಮಯದಲ್ಲಿ ನಿಮ್ಮ ಶುಭಾಶಯಗಳು ಮತ್ತು ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು ಮೋದಿ ಸರ್. ನಾನು ಮುಂದುವರಿಯುತ್ತೇನೆ... https://t.co/aDagbvLeAM

— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) ಫೆಬ್ರವರಿ 27, 2024

Read More
Next Story