ನಮ್ಮ ಅನುಮತಿ ಇಲ್ಲದೆ ಮೇಕೆದಾಟು ಅಣೆಕಟ್ಟು ಸಾಧ್ಯವಿಲ್ಲ: ತಮಿಳುನಾಡು ಸಚಿವ ದೊರೈ ಮುರುಗನ್
x

ನಮ್ಮ ಅನುಮತಿ ಇಲ್ಲದೆ ಮೇಕೆದಾಟು ಅಣೆಕಟ್ಟು ಸಾಧ್ಯವಿಲ್ಲ: ತಮಿಳುನಾಡು ಸಚಿವ ದೊರೈ ಮುರುಗನ್

ಕರ್ನಾಟಕ ಸರ್ಕಾರ ತನಗೆ ಬೇಕಾದ ಸಮಿತಿಯನ್ನು ರಚಿಸಬಹುದು, ಆದರೆ ತಮಿಳುನಾಡು ಸರ್ಕಾರದ ಅನುಮತಿ ಇಲ್ಲದೆ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ ಎಂದ ದೊರೈ ಮುರುಗನ್


ಕರ್ನಾಟಕ ಸರ್ಕಾರ ತನಗೆ ಬೇಕಾದ ಸಮಿತಿಯನ್ನು ರಚಿಸಬಹುದು, ಆದರೆ ತಮಿಳುನಾಡು ಸರ್ಕಾರದ ಅನುಮತಿ ಇಲ್ಲದೆ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ದೊರೈಮುರುಗನ್ ಹೇಳಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆ ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ತಮ್ಮ ಸರ್ಕಾರದ ಬದ್ಧತೆಯನ್ನು ಪ್ರತಿಪಾದಿಸಿದರು. ಇದು, ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಅದರಲ್ಲೂ ಕಾಂಗ್ರೆಸ್ನ ಐಎನ್ ಡಿಐಎ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಖಂಡಿಸಿದೆ.

ಸೂಕ್ತ ಅನುಮತಿ ಪಡೆದು ಶೀಘ್ರವೇ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು, ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ರಚಿಸಲಾಗಿರುವ ವಿಶೇಷ ಸಮಿತಿಗಳ ಅಡಿಯಲ್ಲಿ ಎರಡು ಉಪ ಸಮಿತಿಗಳು ಕಾರ್ಯನಿರ್ವಹಿಸಲಿವೆ ಎಂದು ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.

ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮೇಕೆದಾಟು ಪ್ರದೇಶದಲ್ಲಿ ಕಾವೇರಿಗೆ ಅಡ್ಡಲಾಗಿ ತಕ್ಷಣವೇ ಅಣೆಕಟ್ಟು ನಿರ್ಮಿಸಲಾಗುವುದು. ಈ ಯೋಜನೆಯಡಿ ಮುಳುಗಡೆಯಾಗುವ ಜಮೀನು ಗುರುತಿಸುವ ಕಾರ್ಯ ಹಾಗೂ ಅಣೆಕಟ್ಟು ಪ್ರದೇಶದಲ್ಲಿನ ಮರಗಳ ಸಮೀಕ್ಷೆ ಕಾರ್ಯ ಈಗಾಗಲೇ ಆರಂಭವಾಗಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದಕ್ಕೆ ತಮಿಳುನಾಡಿನ ಹಲವು ರಾಜಕೀಯ ಪಕ್ಷಗಳೂ ತಮ್ಮ ಆಕ್ಷೇಪಗಳನ್ನು ದಾಖಲಿಸಿವೆ. ಈ ಪುತಿಯ ತಲೈಮುರೈ ಸುದ್ಧಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಚಿವ ದುರೈಮುರುಗನ್, ''ಸುಪ್ರೀಂ ಕೋರ್ಟ್ ತೀರ್ಪು ನೀಡದೆ ಮೇಕೆದಾಟು ಬಗ್ಗೆ ಮಾತನಾಡಲು ಕಾವೇರಿ ಆಯೋಗಕ್ಕೆ ಅಧಿಕಾರವಿಲ್ಲ. ಇದನ್ನೇ ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆʼʼ ಎಂದಿದ್ದಾರೆ.

ಕಳೆದ ಸಭೆಯಲ್ಲೂ ಮೇಘದಾಟು (ತಮಿಳು)ದಲ್ಲಿ ಅಣೆಕಟ್ಟು ನಿರ್ಮಾಣದ ವಿಷಯ ಪ್ರಸ್ತಾಪವಾದಾಗ ನಾವು ವಿರೋಧಿಸಿದ್ದೆವು. ನಾವು ಮಾತ್ರವಲ್ಲದೆ ಕೇರಳ, ಪಾಂಡಿಚೇರಿ ಮುಂತಾದವರು ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿದರು. ನಂತರ ಇದು ಅಗತ್ಯವಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮೇಕೆದಾಟು ಎಂಬಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸುವ ಪ್ರಸ್ತಾವನೆಯನ್ನು ಪ್ರಾಧಿಕಾರದ ಸಭೆಯ ಅಜೆಂಡಾದಲ್ಲಿ ಪದೇ ಪದೇ ಪ್ರಸ್ತಾಪಿಸಿ, ಚರ್ಚೆ ಮಾಡಿದ್ದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಬಾರದು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಅವರೂ ಹೇಳಿದ್ದಾರೆ ಎಂದು ದೊರೈಮುರುಗನ್‌ ಹೇಳಿದ್ದಾರೆ.

‘ಅದಾಗ್ಯೂ ಚರ್ಚೆಯ ಅಜೆಂಡಾದಲ್ಲಿ ಮೇಕೆದಾಟು ಜಲಾಶಯವನ್ನು ಸೇರಿಸಲಾಗುತ್ತಿದೆ. ಇದು ಸರಿಯಾದ ಕ್ರಮ ಅಲ್ಲ ಎಂದು ನಾವು ಪ್ರಾಧಿಕಾರಕ್ಕೆ ತಿಳಿಸಿದ್ದೇವೆ’ ಎಂದು ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಅಣೆಕಟ್ಟು ಕಟ್ಟಬೇಕಾದರೆ ತಮಿಳುನಾಡಿನ ಒಪ್ಪಿಗೆ ಇಲ್ಲದೇ ಅಣೆಕಟ್ಟು ಕಟ್ಟುವಂತಿಲ್ಲ. ಮತ್ತು DPR ಅನ್ನು ರವಾನಿಸಲಾಗುವುದಿಲ್ಲ. ಕೇಂದ್ರ ನೀರು ನಿರ್ವಹಣಾ ಪ್ರಾಧಿಕಾರಕ್ಕೂ ಹೋಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ದೊರೈಮುರುಗನ್ ಹೇಳಿದ್ದಾರೆ.

Read More
Next Story