ಬಿಷ್ಣುಪುರ ಶಸ್ತ್ರಾಸ್ತ್ರ ಲೂಟಿ ಪ್ರಕರಣ:  ಸಿಬಿಐನಿಂದ ಏಳು ಚಾರ್ಜ್‌ ಶೀಟ್
x

ಬಿಷ್ಣುಪುರ ಶಸ್ತ್ರಾಸ್ತ್ರ ಲೂಟಿ ಪ್ರಕರಣ: ಸಿಬಿಐನಿಂದ ಏಳು ಚಾರ್ಜ್‌ ಶೀಟ್


ಹೊಸದಿಲ್ಲಿ, ಮಾ.3- ಕಳೆದ ವರ್ಷ ಮಣಿಪುರದ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ಬಿಷ್ಣುಪುರ ಪೊಲೀಸ್ ಶಸ್ತ್ರಾಗಾರದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಏಳು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.‌

ಕೇಂದ್ರೀಯ ತನಿಖಾ ದಳ ಇತ್ತೀಚೆಗೆ ಅಸ್ಸಾಂನ ಗುವಾಹಟಿಯ ಕಾಮ್ರೂಪದಲ್ಲಿರುವ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾದ ಆರೋಪಿಗಳೆಂದರೆ, ಲೈಶ್ರಾಮ್ ಪ್ರೇಮ್ ಸಿಂಗ್, ಖುಮುಚ್ಚಮ್ ಧೀರೆನ್ ಅಲಿಯಾಸ್ ಥಾಪ್‌ಕ್ಪಾ, ಮೊಯರಂಗತೇಮ್ ಆನಂದ್ ಸಿಂಗ್, ಅಥೋಕ್‌ಪಂ ಕಾಜಿತ್ ಅಲಿಯಾಸ್ ಕಿಶೋರ್ಜಿತ್, ಲೌಕ್ರಕ್‌ಪಂ ಮೈಕೆಲ್ ಮಂಗ್ಯಾಂಗ್‌ಚಾ ಅಲಿಯಾಸ್ ಮೈಕೆಲ್, ಕೊಂತೌಜಮ್ ರೊಮೊಜಿತ್ ಮೈತಿ, ಅಲಿಯಾಸ್ ಜಾನ್‌ಸನ್, ಅಲಿಯಾಸ್ ರೊಮೊಜಿತ್.

2023ರ ಆಗಸ್ಟ್ 3 ರಂದು ಬಿಷ್ಣುಪುರದ ನರನ್ಸೇನಾದಲ್ಲಿರುವ 2 ನೇ ಭಾರತೀಯ ರಿಸರ್ವ್ ಬೆಟಾಲಿಯನ್ ಪ್ರಧಾನ ಕಚೇರಿಯ ಎರಡು ಕೊಠಡಿಗಳಿಂದ ಲೂಟಿ ನಡೆದಿತ್ತು.

2023, ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯಿಂದ ಭುಗಿಲೆದ್ದಿತು. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀತಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಐಕಮತ್ಯ ಮೆರವಣಿಗೆ' ಆಯೋಜಿಸಿದ ನಂತರ ಘರ್ಷಣೆ ಆರಂಭವಾಗಿ, 219 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

ಮಣಿಪುರದ ಜನಸಂಖ್ಯೆಯ ಶೇ. 53 ರಷ್ಟಿರುವ ಮೈತಿಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಶೇ.40 ರಷ್ಟು ಇರುವ ಬುಡಕಟ್ಟು ಜನಾಂಗದವರು( ನಾಗಾಗಳು ಮತ್ತು ಕುಕಿಗಳು) ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

Read More
Next Story