
ಜೀವ ಬೆದರಿಕೆ: ಮಲ್ಲಿಕಾರ್ಜುನ ಖರ್ಗೆಗೆ ಝಡ್ ಪ್ಲಸ್ ಭದ್ರತೆ
ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಬೆದರಿಕೆ ಗ್ರಹಿಕೆ ವರದಿಯ ನಂತರ ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರತೆ ಹೆಚ್ಚಿಸಲಾಗಿದೆ.
ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಬೆದರಿಕೆ ಗ್ರಹಿಕೆ ವರದಿಯ ನಂತರ ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ಭದ್ರತೆ (Security) ಹೆಚ್ಚಿಸಲಾಗಿದೆ. ಖರ್ಗೆ ಅವರಿಗೆ ಝಡ್ ಪ್ಲಸ್ (Z+ Security) ಭದ್ರತೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಖರ್ಗೆ ಅವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಎಫ್) ಭದ್ರತೆ ನೀಡಲಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಝಡ್ ಪ್ಲಸ್ ಭದ್ರತೆಯು ಅತ್ಯುನ್ನತ ಮಟ್ಟದ ರಕ್ಷಣೆಯಾಗಿದ್ದು, ಎಸ್‌ಪಿಜಿ ಭದ್ರತೆಯ ನಂತರ, ಅವರ ಜೀವಕ್ಕೆ ಹೆಚ್ಚಿನ ಮಟ್ಟದ ಬೆದರಿಕೆ ಇರುವ ವ್ಯಕ್ತಿಗೆ ಸರ್ಕಾರ ಒದಗಿಸುತ್ತದೆ. ಈ ಭದ್ರತೆಯಲ್ಲಿ 55 ಸಿಬ್ಬಂದಿ, ಸಿಆರ್‌ಪಿಎಫ್ ಕಮಾಂಡೋಗಳು ದಿನದ 24 ಗಂಟೆಯೂ ಅವರನ್ನು ಕಾವಲು ಕಾಯುತ್ತಾರೆ.
ಈ ಕವರ್ ಮೂರು ಪಾಳಿಗಳಲ್ಲಿ ಬುಲೆಟ್ ಪ್ರೂಫ್ ವಾಹನ ಮತ್ತು ಬೆಂಗಾವಲು ವಾಹನವನ್ನು ಸಹ ಒಳಗೊಂಡಿದೆ.ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅವರಿಗೆ ಭದ್ರತೆ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕೇವಲ ಮಲ್ಲಿಕಾರ್ಜುನ ಖರ್ಗೆ ಅಷ್ಟೇ ಅಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಝಡ್ ಪ್ಲಸ್ ರಕ್ಷಣೆ ಇದೆ. 2019 ರವರೆಗೆ, ಗಾಂಧಿ ಕುಟುಂಬವು SPG ಭದ್ರತೆಯನ್ನು ಹೊಂದಿತ್ತು ಅದನ್ನು Z ಪ್ಲಸ್ ಗೆ ಇಳಿಸಲಾಯಿತು.1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಗಾಂಧಿ ಕುಟುಂಬಕ್ಕೆ SPG ಭದ್ರತೆ ನೀಓಡಲಾಗಿತ್ತು. SPG 3,000 ಸಿಬ್ಬಂದಿಯನ್ನು ಹೊಂದಿದೆ.
Z ಪ್ಲಸ್ ಭದ್ರತೆಯನ್ನು ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಹಣಕಾಸು ಸಚಿವರು ಮತ್ತು ಇತರರಿಗೆ ನೀಡಲಾಗಿದೆ.
Z-ವರ್ಗವು ದೇಶದ ಮೂರನೇ ಅತ್ಯುನ್ನತ ಮಟ್ಟದ ಭದ್ರತಾ ರಕ್ಷಣೆಯಾಗಿದೆ ಮತ್ತು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಗಳೊಂದಿಗೆ 22 ಸಿಬ್ಬಂದಿಯನ್ನು ಒಳಗೊಂಡಿದೆ. Z-ವರ್ಗದ ಅಡಿಯಲ್ಲಿ, ಖಾಸಗಿ ವ್ಯಕ್ತಿಗಳು ಭದ್ರತಾ ರಕ್ಷಣೆಗಾಗಿ ಬಾಬಾ ರಾಮ್‌ದೇವ್ ಮತ್ತು ನಟ ಅಮೀರ್ ಖಾನ್ ಅವರಿಗೂ ಝಡ್ ಕೆಟಗರಿ ಭದ್ರತೆ ನೀಡಲಾಗಿದೆ ಆದರೆ ಇವರುಗಳು ಹಣ ಪಾವತಿಸುತ್ತಾರೆ.
ಒಬ್ಬ ವ್ಯಕ್ತಿ ಅಥವಾ ವಿಐಪಿಗೆ ಇರಬಹುದಾದ ಅಪಾಯಗಳನ್ನು ಅಂದಾಜಿಸಿ ಅವರಿಗೆ ನೀಡಲಾಗುವ ಭದ್ರತೆಯನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳು ಎಕ್ಸ್(X), ವೈ(Y), ಝೆಡ್(Z), ಝೆಡ್+(Z+) ಮತ್ತು ಎಸ್‌ಪಿಜಿ ವಿಭಾಗಗಳು.