ಚುನಾವಣೆ 2024: ರಾಹುಲ್ ಗಾಂಧಿ ವಯನಾಡಿನಿಂದಲೇ ಸ್ಪರ್ಧೆ
x

ಚುನಾವಣೆ 2024: ರಾಹುಲ್ ಗಾಂಧಿ ವಯನಾಡಿನಿಂದಲೇ ಸ್ಪರ್ಧೆ

ಅಮೇಥಿ ಇಲ್ಲವೇ ತೆಲಂಗಾಣದಿಂದ ಸ್ಪರ್ಧೆ ಇಲ್ಲ


ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ವಯನಾಡಿನಿಂದಲೇ ಸ್ಪರ್ಧಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಈ ಬಾರಿ ತೆಲಂಗಾಣ ಮತ್ತು ಅಮೇಥಿಯಿಂದ ಸ್ಪರ್ಧಿಸಬಹುದು ಎಂಬ ವದಂತಿ ಇದ್ದಿತ್ತು. ಕೆ.ಸಿ. ವೇಣುಗೋಪಾಲ್ ಅಲಪ್ಪುಳದಿಂದ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಮುಖಂಡ ದಿವಂಗತ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಬಿಜೆಪಿಗೆ ಸೇರ್ಪಡೆ ಕಾಂಗ್ರೆಸ್‌ನಲ್ಲಿ ಕೆಲವು ಗೊಂದಲಗಳಿಗೆ ಕಾರಣವಾಗಿದೆ. ವಡಕ್ಕರ ಮತ್ತು ತ್ರಿಶೂರ್‌ಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ವಿಳಂಬವಾಗಿದೆ. ಕೆ. ಮುರಳೀಧರನ್ ಅವರನ್ನು ವಡಕರದಿಂದ ತ್ರಿಶೂರ್‌ಗೆ ಸ್ಥಳಾಂತರಗೊಳಿಸಲು ಚಿಂತನೆ ನಡೆದಿದೆ. ವಡಕ್ಕರದಿಂದ ಮುಸ್ಲಿಂ ಅಭ್ಯರ್ಥಿಯನ್ನು ನೇಮಿಸಬಹುದು.

ಪ್ರಸ್ತುತ ಕೇರಳದಿಂದ ಕಾಂಗ್ರೆಸ್‌ನ ಮುಸ್ಲಿಂ ಸಂಸದರೇ ಇಲ್ಲ. ಎಲ್‌ಡಿಎಫ್‌ನಲ್ಲಿ ನಾಲ್ವರು ಸಂಸದರಿದ್ದು, ಎಲ್ಲರೂ ಸಿಪಿಐ(ಎಂ) ನವರು. ಹೀಗಾಗಿ, ವಡಕರದಿಂದ ಶಾಫಿ ಪರಂಬಿಲ್ ಅಥ ವಾ ಟಿ. ಸಿದ್ದಿಕ್ ಅವರಂತಹ ಹಾಲಿ ಶಾಸಕರೊಬ್ಬರನ್ನು ನಾಮನಿರ್ದೇಶನ ಮಾಡಲು ಯೋಚಿಸುತ್ತಿದೆ.

ಆದರೆ, ಅಲಪ್ಪುಳದಿಂದ ಕೆ.ಸಿ. ವೇಣುಗೋಪಾಲ್ ಸ್ಪರ್ಧಿಸಿದರೆ ಕಾಂಗ್ರೆಸ್ ಒಂದು ರಾಜ್ಯಸಭೆ ಸ್ಥಾನವನ್ನು ಕಳೆದುಕೊಳ್ಳಬಹುದು. ವೇಣುಗೋಪಾಲ್‌ ರಾಜಸ್ಥಾನದಿಂದ ನಾಮನಿರ್ದೇಶನ ಗೊಂಡಿದ್ದು, ಅವರ ಅವಧಿ 2026 ರಲ್ಲಿ ಮುಕ್ತಾಯಗೊಳ್ಳಲಿದೆ. ಪ್ರಸ್ತುತ ರಾಜಸ್ಥಾನದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ಕಾಂಗ್ರೆಸ್‌ ಅಲ್ಲಿಂದ ಗೆಲ್ಲುವುದು ಸಾಧ್ಯವಿಲ್ಲ.

ತ್ರಿಶೂರ್‌ನ ಟಿ.ಎನ್‌. ಪ್ರತಾಪನ್‌ ಹೊರತುಪಡಿಸಿ, ಕೇರಳದ ಉಳಿದ ಎಲ್ಲ ಹಾಲಿ ಸಂಸದ ರನ್ನು ಉಳಿಸಿಕೊಳ್ಳಲಾಗುವುದು. ತ್ರಿಶೂರ್‌ನಲ್ಲಿ ಸುರೇಶ್ ಗೋಪಿ ಅವರಿಗೆ ನೆರವಾಗಲು ಪದ್ಮಜಾ ಅವರನ್ನು ಬಳಸಿಕೊಳ್ಳುವುದು ಬಿಜೆಪಿ ಆಲೋಚನೆ. ಮುರಳೀಧರನ್ ಸ್ಪರ್ಧೆ ಇದನ್ನು ರದ್ದುಗೊಳಿಸಬಹುದು ಎಂದು ಕಾಂಗ್ರೆಸ್ ಭಾವಿಸಿದೆ. ಮಲಬಾರ್‌ನ ಅಲ್ಪಸಂಖ್ಯಾತ ಸಮುದಾಯವನ್ನು ಒಲೈಸಲು ವಡಕರದಿಂದ ಸಿದ್ದಿಕ್‌ ಶಾಫಿಯನ್ನು ಕಣಕ್ಕಿಳಿಸುವ ಆಲೋಚನೆಯಿದೆ. ಮಾಜಿ ಆರೋಗ್ಯ ಸಚಿವರಾದ ಕೆ. ಕೆ. ಶೈಲಜಾ ಇಲ್ಲಿ ಸಿಪಿಐ(ಎಂ) ಅಭ್ಯರ್ಥಿ.

Read More
Next Story