ಚುನಾವಣೆ 2024: ದಿಲ್ಲಿ- ಎಎಪಿ 4, ಕಾಂಗ್ರೆಸ್ 3
x

ಚುನಾವಣೆ 2024: ದಿಲ್ಲಿ- ಎಎಪಿ 4, ಕಾಂಗ್ರೆಸ್ 3


ದಿಲ್ಲಿಯ ಲೋಕಸಭೆ ಕ್ಷೇತ್ರಗಳ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ನಡುವಿನ ಮಾತುಕತೆ ಅಂತಿಮ ಹಂತದಲ್ಲಿದೆ.

ಎರಡೂ ಪಕ್ಷಗಳ ಮೂಲಗಳ ಪ್ರಕಾರ, ಎಎಪಿ ನಾಲ್ಕು ಮತ್ತು ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ʻದೆಹಲಿಯ ಸೀಟು ಹಂಚಿಕೆ ಒಪ್ಪಂದ ಆಗಿದೆ. ಯಾವ ಪಕ್ಷದ ಅಭ್ಯರ್ಥಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇವೆʼ ಎಂದು ಎಎಪಿ ಹಿರಿಯ ನಾಯಕರೊಬ್ಬರು ಫೆಬ್ರವರಿ 22 ರಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಎಎಪಿ ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ, ವಾಯವ್ಯ ದೆಹಲಿ ಮತ್ತು ನವದೆಹಲಿ ಕ್ಷೇತ್ರಗಳಿಂದ ಮತ್ತು ಕಾಂಗ್ರೆಸ್ ಚಾಂದಿನಿ ಚೌಕ್, ಪೂರ್ವ ದೆಹಲಿ ಮತ್ತು ಈಶಾನ್ಯ ದೆಹಲಿ ಕ್ಷೇತ್ರಗಳಿಂದ ಸ್ಪರ್ಧಿಸಲಿದೆ ಎಂದು ವರದಿಯಾಗಿದೆ.

ದೆಹಲಿಯ ಎಲ್ಲ ಏಳು ಲೋಕಸಭಾ ಸ್ಥಾನಗಳು ಪ್ರಸ್ತುತ ಬಿಜೆಪಿ ವಶದಲ್ಲಿದೆ. ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್, ಪೂರ್ವ ಮತ್ತು ವಾಯವ್ಯ ಲೋಕಸಭಾ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೈತ್ರಿ ಕುರಿತು ಮಾತುಕತೆ ವಿಳಂಬವಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಹೊಸ ಬೆಳವಣಿಗೆ ಆಗಲಿದೆ ಎಂದು ಬುಧವಾರ ಸುಳಿವು ನೀಡಿದ್ದರು.

Read More
Next Story