ಚುನಾವಣೆ 2024: ಎಂಡಿಎಂಕೆಗೆ ಒಂದು ಸ್ಥಾನ ನೀಡಿದ ಡಿಎಂಕೆ
x

ಚುನಾವಣೆ 2024: ಎಂಡಿಎಂಕೆಗೆ ಒಂದು ಸ್ಥಾನ ನೀಡಿದ ಡಿಎಂಕೆ


ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಮಿತ್ರ ಪಕ್ಷ ಎಂಡಿಎಂಕೆಗೆ ಒಂದು ಲೋಕಸಭೆ ಸ್ಥಾನವನ್ನು ಹಂಚಿಕೆ ಮಾಡಿದೆ.

ಎಂಡಿಎಂಕೆ ಸಂಸ್ಥಾಪಕ ವೈಕೊ ಸುದ್ದಿಗಾರರೊಂದಿಗೆ ಮಾತನಾಡಿ, ಸೀಟು ಹಂಚಿಕೆ ಒಪ್ಪಂದ ವಾಗಿದ್ದು,ಪಕ್ಷ ಸ್ಪರ್ಧಿಸುವ ಕ್ಷೇತ್ರ ಯಾವುದು ಎಂಬುದನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದರು.

ಸೀಟು ಹಂಚಿಕೆ ಒಪ್ಪಂದವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಂತಿಮಗೊಳಿಸಿ, ಸಹಿ ಮಾಡಿದ್ದಾರೆ ಎಂದು ವೈಕೊ ಹೇಳಿದರು. ಹಂಚಿಕೆ ತಮಗೆ ʻತೃಪ್ತಿ ತಂದಿದೆʼ ಎಂದು ವೈಕೋ ಹೇಳಿದರು.

ಡಿಎಂಕೆ 2019 ರ ಚುನಾವಣೆಯಲ್ಲಿ ಎಂಡಿಎಂಕೆಗೆ ತಲಾ ಒಂದು ಲೋಕಸಭೆ ಮತ್ತು ರಾಜ್ಯಸಭೆ ಸ್ಥಾನವನ್ನು ನೀಡಿತ್ತು. ವೈಕೊ ಅವರು ಮೇಲ್ಮನೆಗೆ ಆಯ್ಕೆಯಾದರು. ʻ ರಾಜ್ಯಸಭೆ ಅಧಿಕಾರಾವಧಿ 15 ತಿಂಗಳು ಉಳಿದಿರುವುದರಿಂದ, ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲʼ ಎಂದು ಹೇಳಿದರು.

ಡಿಎಂಕೆ ಈವರೆಗೆ ಮಿತ್ರಪಕ್ಷಗಳಾದ ಸಿಪಿಐ (ಎ),ಸಿಪಿಐ,ಐಯುಎಂಎಲ್ ಮತ್ತು ಕೆಡಿಎಂಕೆ ಯೊಂದಿಗೆ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಳಿಸಿದೆ. ಕಾಂಗ್ರೆಸ್ ಮತ್ತು ತೋಲ್ ತಿರುಮಾವಳವನ್ ನೇತೃತ್ವದ ವಿಡುತಲೈ ಚಿರುತೈಗಳ್‌ ಕಚ್ಚಿ (ವಿಸಿಕೆ) ಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿದೆ.

2019 ರ ಚುನಾವಣೆಯಲ್ಲಿ ಎಸ್ಪಿಎ(ಸೆಕ್ಯುಲರ್ ಪ್ರೋಗ್ರೆಸ್ಸಿವ್ ಅಲಯನ್ಸ್) ಅನ್ನು ಡಿಎಂಕೆ ಮುನ್ನಡೆಸಿದೆ. ರಾಜ್ಯದ 39 ಲೋಕಸಭೆ ಸ್ಥಾನಗಳಲ್ಲಿ 38ನ್ನು ಗೆದ್ದಿದೆ.

Read More
Next Story