ಸಂಸತ್ತಿನಲ್ಲೂ ಕೇಜ್ರಿವಾಲ್: ಎಎಪಿ ಚುನಾವಣೆ ಪ್ರಚಾರ ಆರಂಭ
x

'ಸಂಸತ್ತಿನಲ್ಲೂ ಕೇಜ್ರಿವಾಲ್': ಎಎಪಿ ಚುನಾವಣೆ ಪ್ರಚಾರ ಆರಂಭ


'ಸಂಸದ್ ಮೇ ಭೀ' ಘೋಷಣೆಯೊಂದಿಗೆ ಎಎಪಿ ದೆಹಲಿಯಲ್ಲಿ ಪಕ್ಷದ ಲೋಕಸಭೆ ಚುನಾವಣೆ ಪ್ರಚಾರವನ್ನು ಪ್ರಾರಂಭಿಸಿದೆ.

ಆಪ್ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ದೆಹಲಿಯ ಡಿಡಿಯು ಮಾರ್ಗದಲ್ಲಿರುವ ಆಮ್ ಆದ್ಮಿ ಪಕ್ಷ (ಎಎಪಿ)ದ ಪ್ರಧಾನ ಕಚೇರಿಯಿಂದ ಪ್ರಚಾರವನ್ನು ಆರಂಭಿಸಿದರು.

ʻನನ್ನ ಕುಟುಂಬವಾಗಿರುವ ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ನಾನು ಎಲ್ಲಾ ಪ್ರಯತ್ನ ಮಾಡಿದ್ದೇನೆ. ನಮ್ಮ ಘೋಷವಾಕ್ಯ 'ಸಂಸದ್ ಮೇ ಭಿ ಕೇಜ್ರಿವಾಲ್, ತೋ ದಿಲ್ಲಿ ಹೋಗಿ ಔರ್ ಖುಷ್ ಹಾಲ್' (ಸಂಸತ್‌ನಲ್ಲಿ ಕೇಜ್ರಿವಾಲ್ ಇದ್ದರೆ, ದೆಹಲಿ ಹೆಚ್ಚು ಸಮೃದ್ಧವಾಗಲಿದೆ)ʼ ಎಂದು ಹೇಳಿದರು.

ʻದೆಹಲಿ ಮತ್ತು ಪಂಜಾಬಿನ ಎಎಪಿ ಸರ್ಕಾರಗಳು ಮಾತ್ರ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿವೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರ್ಕಾರ ಎಎಪಿ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸುತ್ತದೆ. ಪಕ್ಷದ ಎಲ್ಲ ಏಳು ಅಭ್ಯರ್ಥಿಗಳನ್ನು ಸಂಸತ್ತಿಗೆ ಕಳುಹಿಸುವ ಮೂಲಕ ತಮ್ಮನ್ನು ಬಲಪಡಿಸಬೇಕುʼ ಎಂದು ಕೋರಿದರು.

ʻಅವರು ಬುಲ್ಡೋಜರ್‌ಗಳಿಂದ ಮೊಹಲ್ಲಾ ಕ್ಲಿನಿಕ್‌ಗಳನ್ನು ಕೆಡವಿದರು; ಮನೆಯಿಂದ ಮನೆಗೆ ಪಡಿತರ ವಿತರಣೆ ಯೋಜನೆ, ಆಸ್ಪತ್ರೆಗಳಲ್ಲಿ ಪರೀಕ್ಷೆಗಳು ಮತ್ತು ಔಷಧಗಳನ್ನು ನಿಲ್ಲಿಸಿದರುʼ ಎಂದು ದೂರಿದರು.

ಪಂಜಾಬ್ ಮುಖ್ಯಮಂತ್ರಿ ಮಾನ್,ʻ ಪಂಜಾಬ್‌ನಲ್ಲಿ ಎಎಪಿ ಪರವಾಗಿ 13-0 ಫಲಿತಾಂಶ ಬರಲಿದೆ. ಲೋಕಸಭೆಯಲ್ಲಿ ಆಪ್ ನ ಹೆಚ್ಚು ಸಂಸದರು ಇದ್ದರೆ, ಪಂಜಾಬಿನ ಹಣವನ್ನು ಮತ್ತು ದೆಹಲಿಯಲ್ಲಿ ಕೆಲಸ ಮಾಡುವುದನ್ನು ತಡೆಯಲು ಯಾರೂ ಧೈರ್ಯ ಮಾಡುವುದಿಲ್ಲʼ ಎಂದು ಹೇಳಿದರು.

ಎಎಪಿಯು ದೆಹಲಿ, ಗುಜರಾತ್ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್‌ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಪಂಜಾಬಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ.

Read More
Next Story