ಕಮಲ್ ನಾಥ್ ಕಾಂಗ್ರೆಸ್ ತೊರೆಯುವುದಿಲ್ಲ:ಜಿತು ಪಟ್ಟಾರಿ
ಭೋಪಾಲ್, ಫೆ 17 (ಪಿಟಿಐ) - ಕಮಲ್ ನಾಥ್ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹವನ್ನು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ತಳ್ಳಿಹಾಕಿದ್ದು, ಇಂದಿರಾಗಾಂಧಿ ಅವರಿಂದ ʻಮೂರನೇ ಮಗʼ ಎಂದು ಕರೆದಿದ್ದನ್ನು ಶನಿವಾರ ನೆನಪಿಸಿಕೊಂಡಿದ್ದಾರೆ. ನಾಥ್ ಅವರ ಸಹೋದ್ಯೋಗಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಕೂಡ ವದಂತಿ ತಳ್ಳಿಹಾಕಿದ್ದು,ಇದೆಲ್ಲ ʻಮಾಧ್ಯಮ ಸೃಷ್ಟಿʼ ಎಂದು ಕರೆದರು.
ʻಇಂದಿರಾ ಗಾಂಧಿ ಅವರ ಮೂರನೇ ಮಗ ಬಿಜೆಪಿ ಸೇರುವ ಕನಸು ಕಾಣುತ್ತೀರಾ? 2020ರ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಸರ್ಕಾರವನ್ನು ಪತನಗೊಳಿಸಿದಾಗ, ನಾಥ್ ಅವರು ಕಾಂಗ್ರೆಸ್‌ನ ಹಿಂದೆ ಬಂಡೆಯಂತೆ ನಿಂತರುʼ ಎಂದು ಹೇಳಿದರು. ಕಮಲ್ ನಾಥ್ ಶನಿವಾರ ಮಧ್ಯಾಹ್ನ ನವದೆಹಲಿಗೆ ಆಗಮಿಸಿದ್ದು, ಅಂತಹದ್ದೇನಾದರೂ ಇದ್ದರೆ, ಮೊದಲು ಮಾಧ್ಯಮಗಳಿಗೆ ತಿಳಿಸುವುದಾಗಿ ಹೇಳಿದರು. ʻನೆಹರೂ-ಗಾಂಧಿ ಕುಟುಂಬದೊಂದಿಗೆ ರಾಜಕೀಯ ಇನ್ನಿಂಗ್ಸ್ ಆರಂಭಿಸಿರುವ ಕಮಲ್ ನಾಥ್ ಎಂದಿಗೂ ಪಕ್ಷ ಬಿಡುವಂತಿಲ್ಲʼ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ʻನಿನ್ನೆ ರಾತ್ರಿ ನಾನು ಕಮಲ್ ನಾಥ್ ಅವರೊಂದಿಗೆ ಮಾತನಾಡಿದ್ದೇನೆ. ಗಾಂಧಿ ಮತ್ತು ನೆಹರು ಕುಟುಂಬದೊಂದಿಗೆ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ವ್ಯಕ್ತಿ ಅವರು. ಜನತಾ ಪಕ್ಷ ಮತ್ತು ಆಗಿನ ಸರ್ಕಾರವು ಇಂದಿರಾಜಿಯನ್ನು ಜೈಲಿಗೆ ಕಳುಹಿಸಿದಾಗ ಅವರು ಪಕ್ಷದ ಬೆನ್ನೆಲುಬಾಗಿ ನಿಂತಿದ್ದರುʼ ಎಂದು ಅವರು ಜಬಲ್‌ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ʻಗಾಂಧಿ ಕುಟುಂಬದ ಮೂರು ತಲೆಮಾರುಗಳೊಂದಿಗೆ ಕೆಲಸ ಮಾಡಿದ ರಾಜಕಾರಣಿ. ಮಧ್ಯಪ್ರದೇಶದೊಂದಿಗಿನ ನಾಥ್ ಅವರ ಸಂಬಂಧಗಳು 1979 ರಷ್ಟು ಹಿಂದಿನದು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ತಮ್ಮ ʻಮೂರನೇ ಮಗ ಎಂದು ಬಣ್ಣಿಸಿದ್ದರುʼ ಎಂದು ಹೇಳಿದರು.
ಬಯೋದಿಂದ ಕಾಂಗ್ರೆಸ್ ಕೈ ಬಿಟ್ಟ ನಕುಲ್ ನಾಥ್: ಆದರೆ, ಕಮಲ್ ನಾಥ್ ಅವರ ಪುತ್ರ, ಸಂಸದ ನಕುಲ್ ನಾಥ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಯೋದಿಂದ ಕಾಂಗ್ರೆಸ್ ನ್ನು ಕೈಬಿಟ್ಟಿದ್ದಾರೆ. ನಕುಲ್ ನಾಥ್ ತಮ್ಮ ತಂದೆಯೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗೆ ಇದು ಪೂರಕವಾಗಿದೆ. ಎಕ್ಸ್ ನಲ್ಲಿ ನಕುಲ್ ನಾಥ್ ಅವರ ಪರಿಚಯ ಸಂಸದ, ಛಿಂದ್ವಾರಾ ಎಂದು ಇದೆ. ಕಮಲ್ ನಾಥ್ ಛಿಂದ್ವಾರಾದಿಂದ ಒಂಬತ್ತು ಬಾರಿ ಆಯ್ಕೆಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಿನ ಹಿನ್ನೆಲೆಯಲ್ಲಿ ಕಮಲ್ ನಾಥ್ ಅವರನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕ ಲಾಯಿತು.
ʻರಾಮಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸುವ ಪಕ್ಷದ ನಿರ್ಧಾರದಿಂದ ಅತೃಪ್ತರಾಗಿದ್ದರೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಕೇಸರಿ ಪಕ್ಷಕ್ಕೆ ಸೇರಲು ಬಯಸಿದರೆ ಕಮಲನಾಥ್ ಮತ್ತು ಅವರ ಮಗನಿಗೆ ಬಿಜೆಪಿಗೆ ಸ್ವಾಗತ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ. ಶರ್ಮಾ ಹೇಳಿದ್ದಾರೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ಛಿಂದ್ವಾರಾ ಹೊರತುಪಡಿಸಿ, ಉಳಿದ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.