ನೇಟೋಗೆ ಸೇರ್ಪಡೆ ಒಂದು ಸಣ್ಣ ಸಂಗತಿ; ಪುಟಿನ್, ಝೆಲೆನ್ಸ್ಕಿಗೆ ಅದು ಅರಿವಾಗಿಲ್ಲ
x

ನೇಟೋಗೆ ಸೇರ್ಪಡೆ ಒಂದು ಸಣ್ಣ ಸಂಗತಿ; ಪುಟಿನ್, ಝೆಲೆನ್ಸ್ಕಿಗೆ ಅದು ಅರಿವಾಗಿಲ್ಲ


ಯುದ್ಧಗಳು ತಪ್ಪಿಸಬಹುದಾದಂಥವು ಮತ್ತು ಸಾಮಾನ್ಯವಾಗಿ ಅರ್ಥಹೀನ. ಈ ಪಟ್ಟಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧವು ಅಗ್ರಸ್ಥಾನದಲ್ಲಿದೆ. ಉಕ್ರೇನ್‌ ನೇಟೋಗೆ ಸೇರಬೇಕೇ, ಬೇಡವೇ ಎಂಬ ಭಿನ್ನಾಭಿಪ್ರಾಯದಿಂದ ದೇಶದ ಕೆಲವು ಭಾಗಗಳು ನಾಶವಾಗುತ್ತಿವೆ; ಜನ ಕೊಲ್ಲಲ್ಪಡು ತ್ತಿದ್ದಾರೆ, ಕುಟುಂಬಗಳು ಬೇರ್ಪಟ್ಟಿವೆ ಮತ್ತು ಸಾವಿರಾರು ಜನ ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.

ಯುದ್ಧ ಆರಂಭವಾಗಿ ಈ ವಾರಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತದೆ. ಈ ಮಧ್ಯೆ ಅಭಿವೃದ್ಧಿ ಹೊಂದುತ್ತಿದ್ದ ಉಕ್ರೇನ್‌ನ ದೊಡ್ಡ ಪ್ರದೇಶಗಳು ರಷ್ಯಾದ ಬೆಂಕಿಯಿಂದ ನಾಶವಾಗಿವೆ.

ಇದೆಲ್ಲ ಏಕೆಂದರೆ ಪಶ್ಚಿಮ ರಾಷ್ಟ್ರಗಳು ಉಕ್ರೇನ್ ನೇಟೋಗೆ ಸೇರಬೇಕೆಂದು ಬಯಸುತ್ತವೆ. ಆದರೆ, ರಷ್ಯ ತನ್ನ ಗಡಿಯಲ್ಲಿ ಶತ್ರುಗಳು ಸುಳಿದಾಡುವುದನ್ನು ವಿರೋಧಿಸುತ್ತದೆ.

ಅಮೆರಿಕ ನೇತೃತ್ವದ ಪಶ್ಚಿಮ ರಾಷ್ಟ್ರಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ಮಾಡುತ್ತಾರೆ ಎಂದು ನಿರೀಕ್ಷಿಸಿ ದ್ದವೇ ಎಂಬುದು ಸ್ಪಷ್ಟವಾಗಿಲ್ಲ. ಮೌಖಿಕ ಭಿನ್ನಾಭಿಪ್ರಾಯ ಮುಂದುವರಿದ ರೀತಿಯನ್ನು ನೋಡಿದರೆ, ಅದು ಯಾರಿಗೂ ಗೊತ್ತಾಗಲಿಲ್ಲ ಎಂದು ಎಂದು ಊಹಿಸುವುದು ಸುರಕ್ಷಿತ. ಆದರೆ, ಪುಟಿನ್ ಯುದ್ಧ ಆರಂಭಿಸಿ, ಜಗತ್ತನ್ನು ಆಶ್ಚರ್ಯಚಕಿತಗೊಳಿಸಿ ದರು.

ಝೆಲೆನ್ಸ್ಕಿಯ ಸಮೀಪದೃಷ್ಟಿ: ಪುಟಿನ್ ಉಕ್ರೇನ್ ಅನ್ನು ಆಕ್ರಮಿಸಲು ಮುಂದಾದ ಬಳಿಕವೂ ಅಮೆರಿಕ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಉಕ್ರೇನ್ ಜೊತೆಗೆ, ನಂತರದ ದಿನಗಳಲ್ಲಿ ನೇಟೋ ಪ್ರಶ್ನೆಯಿಂದ ಹಿಂದೆ ಸರಿಯುವ ಆಯ್ಕೆಯನ್ನು ಹೊಂದಿದ್ದವು. ಆಕ್ರಮಣದ ಮೊದಲ ಕೆಲವು ದಿನಗಳಲ್ಲಿಇಂಥದ್ದು ಏನಾದರೂ ಸಂಭವಿಸುತ್ತದೆ ಎಂದುಕೊಳ್ಳ ಲಾಗಿತ್ತು. ಆದರೆ, ಕೆಲವು ಸುತ್ತಿನ ಮಾತುಕತೆಗಳ ನಂತರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೋರಾಟ ಮುಂದುವರಿಸಲು ನಿರ್ಧರಿಸಿದರು. ಈಗ ನೋಡಿದರೆ, ಇದು ಪುಟಿನ್ ಅವರ ಸಂಕಲ್ಪ ಮತ್ತು ಹೋರಾಟವನ್ನು ಮುಂದುವರಿಸುವ ರಷ್ಯಾದ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಿದ ದೂರದೃಷ್ಟಿಯಿಲ್ಲದ ನಿರ್ಧಾರ ವಾಗಿತ್ತು. ಝೆಲೆನ್ಸ್ಕಿ ಪಶ್ಚಿಮದ ತನ್ನ ಹೊಸ ಮಿತ್ರರಾಷ್ಟ್ರಗಳು ಕಣಕ್ಕೆ ಧುಮುಕಬೇಕೆಂದು ಮತ್ತು ಪುಟಿನ್ ವಿರುದ್ಧ ಹೋರಾಡಬೇಕೆಂದು ನಿರೀಕ್ಷಿಸಿದ್ದರು. ಆದರೆ, ಅವರು ಕಂಡದ್ದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಅರೆಮನಸ್ಸಿನ ಪ್ರತಿಕ್ರಿಯೆ. ನೇರವಾಗಿ ರಂಗ ಪ್ರವೇಶಿಸಲು ಆಸಕ್ತಿ ಹೊಂದಿಲ್ಲ ಎಂಬುದನ್ದು ಬಿಡೆನ್‌ ಸ್ಪಷ್ಟವಾಗಿ ಹೇಳಲಿಲ್ಲ.

ಝೆಲೆನ್ಸ್ಕಿ ಈ ಹಂತದಲ್ಲಿಯೂ ಹಿಂದೆ ಸರಿಯುವ ಆಯ್ಕೆಯನ್ನು ಹೊಂದಿದ್ದರು. ಈ ಮಾಜಿ ಹಾಸ್ಯನಟ ರಾಜಕೀಯ ಕುಶಾಗ್ರಮತಿಯ ಕೊರತೆ ಅಥವಾ ಬಹುಶಃ ಪಶ್ಚಿಮದ ಅವರ ಸ್ನೇಹಿತರ ಭರವಸೆಯಿಂದ ನೇಟೋ ಆಸೆಯನ್ನು ಬಿಡಲು ನಿರಾಕರಿಸಿದರು ಮತ್ತು ರಷ್ಯನ್ನರ ವಿರುದ್ಧ ಹೋರಾಡಲು ನಿರ್ಧರಿಸಿದರು.

ಯುಎಸ್, ಯುರೋಪಿನಿಂದ ಪರೋಕ್ಷ ನೆರವು: ಯುಎಸ್ ಮತ್ತು ಯುರೋಪ್ ಉಕ್ರೇನ್‌ಗೆ ಪರೋಕ್ಷವಾಗಿ ಸಹಾಯ ಮಾಡಿದವು. ಹಣ, ಸಲಹೆಗಾರರು, ಇತ್ತೀಚಿನ ಆಧುನಿಕ ಮಿಲಿಟರಿ ಉಪ ಕರಣಗಳನ್ನು ರವಾನಿಸಿದರು ಮತ್ತು ಉಕ್ರೇನ್‌ ಪರವಾಗಿ ಹೋರಾಡಲು ಕೂಲಿ ಸೈನಿಕರ ಗುಂಪುಗಳಿಗೆ ಅವಕಾಶ ಮಾಡಿಕೊಟ್ಟರು. ಇಂಥ ನೆರವು ಮತ್ತು ರಷ್ಯಾ ಮೇಲಿನ ಆರ್ಥಿಕ ನಿರ್ಬಂಧಗಳು ಪುಟಿನ್ ಅವರ ಶಕ್ತಿಯನ್ನು ಕುಂದಿಸುತ್ತವೆ ಎಂದು ಝೆಲೆನ್ಸ್ಕಿ ಆಶಿಸಿರಬೇಕು.ಆದರೆ, ಅದು ಸಂಪೂರ್ಣವಾಗಿ ತಪ್ಪಾಗಿರಲಿಲ್ಲ. ರಷ್ಯಾ ಉಕ್ರೇನ್‌ನಿಂದ ಇಂಥ ಪ್ರತಿರೋಧವನ್ನು ನಿರೀಕ್ಷಿಸಿರಲಿಲ್ಲ. 2023ರಲ್ಲಿ ಉಕ್ರೇನ್‌ ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿ ಸಮೀಪದ ಪೂರ್ವ ಭಾಗದ 10,000 ಚದರ ಕಿಮೀ ವ್ಯಾಪ್ತಿಯಲ್ಲಿನ ನೂರಾರು ವಸಾಹತು ಗಳನ್ನು ಮರುವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ವರದಿಗಳು ಹೇಳಿವೆ.

ಉಕ್ರೇನ್‌ ಪಶ್ಚಿಮ ದೇಶಗಳು ಸರಬರಾಜು ಮಾಡಿದ ಡ್ರೋನ್‌ಗಳು ಮತ್ತು ಕ್ಷಿಪಣಿ ಗಳನ್ನು ಬಳಸಿ, ರಷ್ಯಾದ ಪ್ರಮುಖ ಯುದ್ಧನೌಕೆ ಸೀಸರ್ ಕುನಿಕೋವ್ ಅನ್ನು ಹಾನಿಗೊಳಿಸಿತು.ಈ ನೌಕೆಯು ಕ್ರಿಮಿಯಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಕಪ್ಪು ಸಮುದ್ರದ ನೌಕಾಪಡೆಯ ಭಾಗ. ಇದಕ್ಕೂ ಮೊದಲು ಈ ನೌಕೆ ರಷ್ಯಾದ ಗಡಿಯಲ್ಲಿನ ಮಿಲಿಟರಿ ಶಿಬಿರಗಳು ಹಾಗೂ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು.

ಯುದ್ಧ ಸಂದಿಗ್ಧ ಸ್ಥಿತಿಯಲ್ಲಿ: ಯುದ್ಧವಾಗಿ ಬದಲಾದ ಆಕ್ರಮಣ ಸ್ಥಬ್ದವಾಗಿ ಮಾರ್ಪಟ್ಟಿದೆ. ಪ್ರತಿದಿನ ಉಕ್ರೇನ್ ಮುನ್ನಡೆ ಸಾಧಿಸಿದೆ, ರಷ್ಯಾ ಹಿಂದೆ ಸರಿಯುತ್ತಿದೆ ಎಂದೆಲ್ಲ ಕೇಳುತ್ತಿರುತ್ತೀರಿ. ಕೆಲಕಾಲಾನಂತರ ರಷ್ಯಾ ಮುನ್ನಡೆಯಾಗಿ, ಉಕ್ರೇನ್ ಹಿನ್ನಡೆಯಾಗಿ ಬದಲಾ ಗುತ್ತದೆ. ಇತ್ತೀಚೆಗೆ ಅವ್ದಿವ್ಕಾ ನಗರವು ರಷ್ಷಾಸೈನ್ಯದ ವಶವಾಯಿತು ಎಂಬ ಸುದ್ದಿ ಕೇಳಿಬಂದಿತು. ಡಿಸೆಂಬರ್ ಅಂತ್ಯದಲ್ಲಿ ಉಕ್ರೇನಿಯನ್ ಪಟ್ಟಣ ಮರಿಂಕ ಪತನಗೊಂಡಿತ್ತು.

ರಷ್ಯಾ ಮತ್ತು ಉಕ್ರೇನ್ ಎರಡೂ ಯುದ್ಧದ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸುತ್ತಿವೆ. ಮಿಲಿಟರಿ ಕಾರ್ಯತಂತ್ರವನ್ನು ಅನುಷ್ಠಾನ ಗೊಳಿಸುವಲ್ಲಿನ ಭಿನ್ನಾಭಿಪ್ರಾಯದಿಂದ ಝೆಲೆನ್ಸ್ಕಿ ತನ್ನ ಸೇನಾ ಮುಖ್ಯಸ್ಥ ವಲೇರಿ ಜಲುಜ್ನಿಯನ್ನು ವಜಾಗೊಳಿಸಿದರು. ಇದಕ್ಕೂ ಮೊದಲು ಮೇಜರ್‌ ಜನರಲ್ ಟೆಟಿಯಾನಾ ಒಸ್ಟಾಶ್ಚೆಂಕೊ ಅವರನ್ನು ಸೈನ್ಯದ ವೈದ್ಯಕೀಯ ಪಡೆಗಳ ಕಮಾಂಡರ್ ಮತ್ತು ರಕ್ಷಣಾ ಮಂತ್ರಿ ಓಲೆಕ್ಸಿ ರೆಜ್ನಿಕೋವ್ ಅವರನ್ನು ಬದಲಿಸಿದ್ದರು.

ಪುಟಿನ್ ಕೂಡ ಸರಣಿಯೋಪಾದಿಯಲ್ಲಿ ವಜಾ ಕ್ರಿಯೆಯಲ್ಲಿ ತೊಡಗಿದ್ದಾರೆ. ಹೀಗೆ ವಜಾಗೊಂಡ ಇತ್ತೀಚಿನವರು ‌ಕಪ್ಪು ಸಮುದ್ರದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ವಿಕ್ಟರ್ ಸೊಕೊಲೊವ್. ಇದಕ್ಕೂ ಮುನ್ನ ಅವರು ರಷ್ಯಾದ ಏರೋಸ್ಪೇಸ್ ದಳದ ಮುಖ್ಯಸ್ಥ ಜನರಲ್ ಸೆರ್ಗೆಯ್ ಸುರೋವಿಕಿನ್ ಅವರನ್ನು ವಜಾಗೊಳಿಸಿದ್ದರು. ಅವರ ದೀರ್ಘಕಾಲದ ಸಹಾಯಕ ಯೆವ್ಗೆನಿ ಪ್ರಿಗೋಶಿನ್ ನೇತೃತ್ವದ ವ್ಯಾಗ್ನರ್ ಖಾಸಗಿ ಸೇನೆಯ ದಂಗೆ ಮತ್ತು ಕಳೆದ ಆಗಸ್ಟ್‌ನಲ್ಲಿ ಪ್ರಿಗೋಶಿನ್‌ ಅವರ ನಿಗೂಢ ಸಾವು ರಷ್ಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಸೂಚಿಸುತ್ತದೆ.

ಯುದ್ಧದ ಆಯಾಸ ಶುರು: ಜಗತ್ತಿನ ಗಮನ ರಷ್ಯಾ-ಉಕ್ರೇನ್ ಯುದ್ಧದಿಂದ ಮುಂದೆ ಸರಿದಿದೆ; ಗಾಜಾ ಪಟ್ಟಿಯ ಸಂಘರ್ಷ, ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ, ಯೆಮೆನ್‌ನ ಹೌತಿಗಳು ಮತ್ತು ಸೋಮಾಲಿಯನ್ ಕಡಲ್ಗಳ್ಳರಿಂದ ಅಂತಾರಾಷ್ಟ್ರೀಯ ಹಡಗುಗಳ ಮೇಲಿನ ದಾಳಿ ನಂತರ ಕೆಂಪು ಸಮುದ್ರ ಮತ್ತು ಆಫ್ರಿಕನ್ ಕರಾವಳಿಯಲ್ಲಿನ ಉದ್ವಿಗ್ನತೆ ಈಗ ಗಮನ ಸೆಳೆದಿದೆ.

ದೀರ್ಘಾವಧಿ ಯುದ್ಧವು ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯ ತಂದಿದೆ. ಅಮೆರಿಕವು ಉಕ್ರೇನ್‌ಗೆ ಮಿಲಿಟರಿ ಸರಬರಾಜು ಕಡಿಮೆ ಮಾಡುತ್ತಿದೆ ಮತ್ತು ಇತರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾದೊಂದಿಗೆ ಮಾತುಕತೆ ನಡೆಸಲು ಝೆಲೆನ್ಸ್ಕಿ ಮೇಲೆ ಒತ್ತಡ ಹೇರುತ್ತಿವೆ ಎಂದು ವರದಿಗಳು ಹೇಳುತ್ತವೆ. ಆದರೆ, ಅವರು ಮಾತುಕತೆಗೆ ನಿರಾಕರಿಸಿದ್ದಾರೆ.

ಪುಟಿನ್ ಬಗ್ಗೆ ಹೇಳುವುದಾದರೆ, ಯುದ್ಧದಿಂದ ರಷ್ಯಾದ ಸಂಪನ್ಮೂಲಗಳು ಬರಿದಾಗುತ್ತಿವೆ. ಸೈನಿಕರ ವಯೋಮಿತಿಯನ್ನು 27 ರಿಂದ 30 ಕ್ಕೆ ಹೆಚ್ಚಿಸಲು ಅವರು ಕಾನೂನು ಬದಲಿಸಿದರು. ಇದರಿಂದ ಅಧಿಕ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರ್ಪಡೆ ಗೊಳ್ಳಲು ಅರ್ಹರಾಗುತ್ತಾರೆ. ಜೈಲು ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು ಬಲವಂತವಾಗಿ ಸೈನ್ಯಕ್ಕೆ ಸೇರ್ಪಡೆಗೊಳಿಸಲಾಗುತ್ತಿದೆ. ಹೊಸ ಕಾನೂನನ್ನು ಪರಿಚಯಿಸಿದಾಗ, ಸಾವಿರಾರು ಜನರು ರಷ್ಯಾದಿಂದ ಪಲಾಯನ ಮಾಡಿದರು.ಇಂಥ ಪಲಾಯನವನ್ನು ತಪ್ಪಿಸಲು ಮತ್ತೊಂದು ಕಾನೂನನ್ನು ತರಾತುರಿ ಯಲ್ಲಿ ಜಾರಿಗೆ ತರಲಾಯಿತು.

ಎರಡು ವರ್ಷಗಳ ಯುದ್ಧದ ನಂತರ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ಜನರು ಯುದ್ಧವನ್ನು ಮುಂದುವರಿಸಲು ಬಯಸುತ್ತಿಲ್ಲ ಎಂದು ವಿವಿಧ ವರದಿಗಳಿಂದ ಸ್ಪಷ್ಟವಾಗುತ್ತಿದೆ. ಜನರಿಗೆ ಯುದ್ಧ ಬೇಕಿಲ್ಲ ಮತ್ತು ಯುದ್ಧವನ್ನು ನಿಲ್ಲಿಸಬೇಕೆಂದು ಹೇಳುವ ವ್ಯಾಖ್ಯೆಗಳು ಸಾಮಾನ್ಯವಾಗಿವೆ.

ಅಪಕ್ವತೆ, ಸಣ್ಣತನದ ಪ್ರತಿಬಿಂಬ:

ಹಿಂದಿನ ಸೋವಿಯತ್ ಒಕ್ಕೂಟದ ಎರಡು ರಾಷ್ಟ್ರಗಳಾದ ಉಕ್ರೇನ್‌ನಲ್ಲಿ ದೊಡ್ಡಸಂಖ್ಯೆಯ ರಷ್ಯನ್ನರು ಹಾಗೂ ರಷ್ಯದಲ್ಲಿ ಉಕ್ರೇನಿಯ ನ್ನರು ನೆಲೆಸಿದ್ದಾರೆ. ಅಭದ್ರತೆಯ ಭಾವನೆಯಿಂದ ಪುಟಿನ್‌ ಉಕ್ರೇನ್ ಮೇಲೆ ದಾಳಿ ನಡೆಸಿದರು ಹಾಗೂ ಅಮೆರಿಕ ನೇತೃತ್ವದ ಪಶ್ಚಿಮ ರಾಷ್ಟ್ರಗಳ ಬೆಂಬಲದಿಂದ ಕುರುಡನಾದ ಝೆಲೆನ್ಸ್ಕಿ ಹೀರೋ ಆಗಲು ಆಕ್ರಮಣಕಾರಿಯಾಗಿ ವರ್ತಿಸಿದರು. ತಾವು ಏನು ಮಾಡುತ್ತಿದ್ಧೇವೆ ಎಂಬ ಬಗ್ಗೆ ಇಬ್ಬರೂ ಆಲೋಚನೆ ಮಾಡಲಿಲ್ಲ.

ರಷ್ಯಾ ತಮ್ಮ ದೇಶದ ಮೇಲೆ ದಾಳಿ ಮಾಡಿದೆ ಎಂಬ ಸುದ್ದಿಯನ್ನು ಕೇಳಿದ ಕೆಲವು ಉಕ್ರೇನಿಯನ್ನರು ಅದನ್ನು ನಂಬಲೇ ಇಲ್ಲ ಎಂದು ಫೆಬ್ರವರಿ 24, 2022 ರ ಸಾಕ್ಷ್ಯಚಿತ್ರವೊಂದು ಹೇಳುತ್ತದೆ. ಉಕ್ರೇನ್‌ಗೆ ನೇಟೋಗೆ ಸೇರಲೇಬೇಕೆಂಬ ತುರ್ತು ಇರಲಿಲ್ಲ.ಭವಿಷ್ಯದಲ್ಲಿ ಹೆಚ್ಚು ಸೂಕ್ತವಾದ ಸಮಯದಲ್ಲಿ ಇದು ಆಗಬಹುದಿತ್ತು. ಉಕ್ರೇನ್ ತನಗೆ ಬೇಕಾದುದನ್ನು ಮಾಡುವುದು ಅದರ ಸಾರ್ವಭೌಮ ಹಕ್ಕು. ಆದರೆ, ಅದರ ನಾಯಕತ್ವ ಸ್ವಲ್ಪ ಸಮಯದವರೆಗೆ ನೇಟೋ ಸದಸ್ಯತ್ವ ದಿಂದ ಹಿಂದೆ ಸರಿಯಬಹುದಿತ್ತು.

ಮೂರು ದಶಕಗಳ ಹಿಂದೆ ಸೋವಿಯತ್ ಒಕ್ಕೂಟವನ್ನು ವಿಭಾಗ ಮಾಡುವ ಮೂಲಕ ಪಶ್ಚಿಮ ರಾಷ್ಟ್ರಗಳು ನಿರ್ಣಾಯಕ ವಿಜಯವನ್ನು ಸಾಧಿಸಿದವು. ನೇಟೋಗೆ ಸೇರುವ ಉಕ್ರೇನ್ ಗುರಿ ಬಹಳ ಕ್ಷುಲ್ಲಕವಾದುದು ಮತ್ತು ಕಾರ್ಯಸಾಧ್ಯವಾದುದು. ಹಿಂದಿನ ಸೋವಿಯತ್ ಪ್ರಾಂತ್ಯಗಳನ್ನು ಅನಗತ್ಯ ಮತ್ತು ತಪ್ಪಿಸಬಹುದಾದ ಸಂಘರ್ಷಕ್ಕೆ ಎಳೆದಿರುವುದು ಪುಟಿನ್ ಮತ್ತು ಝೆಲೆನ್ಸ್ಕಿಯ ಅಪ್ರಬುದ್ಧತೆ ಮತ್ತು ಸಣ್ಣತನವನ್ನು ತೋರಿಸುತ್ತದೆ.

Read More
Next Story