
IPL 2025" ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದುವರಿಕೆ; ಸ್ಲೋ ಓವರ್-ರೇಟ್ ನಿಯಮಗಳಲ್ಲಿ ಬದಲಾವಣೆ
ಕೋವಿಡ್-19 ಸುರಕ್ಷತಾ ಕ್ರಮವಾಗಿ ಪರಿಚಯಿಸಲಾದ ಚೆಂಡಿಗೆ ಎಂಜಲು ಹಚ್ಚುವುದರ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವುದು ಒಂದು ಪ್ರಮುಖ ನಿರ್ಧಾರವಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ 2025ಗೆ ಕೆಲವು ಮಹತ್ವಪೂರ್ಣ ನಿಯಮ ಬದಲಾವಣೆಗಳನ್ನು ಮಾಡಿದೆ. ಈ ಆವೃತ್ತಿಯ ಮಾರ್ಚ್ 22 ರಂದು ಪ್ರಾರಂಭವಾಗಲಿದ್ದು,. ಬಿಸಿಸಿಐ ಐಪಿಎಲ್ 2025ರಲ್ಲಿ ಚೆಂಡಿಗೆ ಎಂಜಲು ಹಚ್ಚಬಾರದು ಎಂಬ ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡಿದೆ. ಆದರೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮುಂದುವರಿಸುವುದಾಗಿ ಹೇಳಿದೆ. ಆದರೆ, ನಿಧಾನಗತಿಯ ಓವರ್-ರೇಟ್ಗಾಗಿ ನಾಯಕರಿಗೆ ನಿಷೇಧವನ್ನು ವಿಧಿಸದಿರುವುದು ಸೇರಿದಂತೆ ಹಲವಾರು ನಿಯಮ ಬದಲಾವಣೆಗಳನ್ನು ಮಾಡಲಾಗಿದೆ. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು ಈ ಬದಲಾವಣೆಗಳನ್ನು ವಿವರಿಸಿದ್ದಾರೆ.
ಕೋವಿಡ್-19 ಸುರಕ್ಷತಾ ಕ್ರಮವಾಗಿ ಪರಿಚಯಿಸಲಾದ ಚೆಂಡಿಗೆ ಎಂಜಲು ಹಚ್ಚುವುದರ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವುದು ಒಂದು ಪ್ರಮುಖ ನಿರ್ಧಾರವಾಗಿದೆ. ಈ ನಿಯಮವನ್ನು ಮೇ 2020 ರಲ್ಲಿ ತಾತ್ಕಾಲಿಕ ಕ್ರಮವಾಗಿ ಪರಿಚಯಿಸಲಾಗಿತ್ತು, ಆದರೆ ಸೆಪ್ಟೆಂಬರ್ 2022 ರಲ್ಲಿ ಐಸಿಸಿ ಈ ನಿಯಮವನ್ನು ಶಾಶ್ವತ ಮಾಡಿದೆ.
ಹಲವಾರು ವೇಗದ ಬೌಲೆರ್ಗಳು ಎಂಜಲು ನಿಷೇಧವು ರಿವರ್ಸ್ ಸ್ವಿಂಗ್ ಬೌಲಿಂಗ್ ತಂತ್ರಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟಿದ್ದರು. ಇದರಿಂದಾಗಿ ಬಿಳಿ ಚೆಂಡು ಬಳಸುವ ಏಕದಿನ ಮತ್ತು ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಬೌಲಿಂಗ್ ಪರಿಣಾಮಕಾರಿ ಆಗುತ್ತಿಲ್ಲ ಎಂದು ಹೇಳಲಾಗಿತ್ತು. ಎರಡೆರಡು ಚೆಂಡುಗಳನ್ನು ಬಳಸುವ ಕಾರಣ ಬೌಲಿಂಗ್ ಪರಿಣಾಮಕಾರಿಯಾಗಿರುವುದಿಲ್ಲ ಎಂದು ಆರೋಪಿಸಲಾಗಿದೆ.
ವೈಟ್-ಬಾಲ್ ಕ್ರಿಕೆಟ್, ODIs ಸೇರಿದಂತೆ, ಎರಡು ಹೊಚ್ಚ ಹೊಸ ಚೆಂಡುಗಳನ್ನು ಬಳಸುವ ಪಂದ್ಯಗಳಲ್ಲಿ ರಿವರ್ಸ್ ಸ್ವಿಂಗ್ ಅಪರೂಪವಾಗಿದೆ. ಬೌಲರ್ಗಳಿಗೆ ಚೆಂಡನ್ನು ಹೊಳಪು ಮಾಡಲು ಬೆವರು ಮಾತ್ರ ಬಳಸಲು ಅನುಮತಿಸಲಾಗಿತ್ತು. ಕಾಲಕಾಲಕ್ಕೆ ಬೌಲರ್ಗಳು ನಿಷೇಧವನ್ನು ಪುನರ್ಪರಿಶೀಲನೆ ಮಾಡಲು ಕೋರಿದ್ದರು.
ನಾಯಕನಿಗೆ ದಂಡವಿಲ್ಲ
ಸ್ಲೋ ಓವರ್-ರೇಟ್ ಗಾಗಿ ನಾಯಕರಿಗೆ ನಿಷೇಧ ವಿಧಿಸುವ ನಿಯಮ ರದ್ದುಗೊಳಿಸಲಾಗಿದೆ. ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ಡಿಕ್ ಪಾಂಡ್ಯ ಅವರು ಲಕ್ನೋ ಸೂಪರ್ ಜಯಂಟ್ಸ್ (LSG) ವಿರುದ್ಧದ ಕೊನೆಯ ಪಂದ್ಯದ ನಂತರ ಸ್ಲೋ ಓವರ್-ರೇಟ್ ನಿರ್ವಹಿಸಿದ್ದಕ್ಕಾಗಿ ಒಂದು ಪಂದ್ಯದ ನಿಷೇಧ ಎದುರಿಸಿದ್ದರು.
ಐಪಿಎಲ್ 2023ರಲ್ಲಿ ಪರಿಚಯಿಸಲಾದ ಹೆಚ್ಚು ಚರ್ಚಿತ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಟೂರ್ನಮೆಂಟ್ನ ಭಾಗವಾಗಿ ಮುಂದುವರಿಯಲಿದೆ. ಈ ನಿಯಮವು ತಂಡಗಳಿಗೆ ಪಂದ್ಯದ ಸಮಯದಲ್ಲಿ ಒಬ್ಬ ಆಟಗಾರನನ್ನು ಬದಲಾಯಿಸಲು ಅನುಮತಿಸುತ್ತದೆ.
ಈ ಬದಲಾವಣೆಗಳು ಐಪಿಎಲ್ನಲ್ಲಿ ತಂಡಗಳ ತಂತ್ರಗಳು ಮತ್ತು ಆಟದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.