ಐಪಿಎಲ್‌ 2024: ಸಿಎಸ್ಕೆ vs ಆರ್ಸಿಬಿ ಪಂದ್ಯ ಮಾರ್ಚ್‌ 22ರಂದು
x

ಐಪಿಎಲ್‌ 2024: ಸಿಎಸ್ಕೆ vs ಆರ್ಸಿಬಿ ಪಂದ್ಯ ಮಾರ್ಚ್‌ 22ರಂದು


ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಮೊದಲ ಎರಡು ವಾರಗಳ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮೊದಲ ಪಂದ್ಯ ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.

ಮಾರ್ಚ್‌ 22ರಿಂದ ಏಪ್ರಿಲ್ 7 ರ ಎರಡು ವಾರಗಳಲ್ಲಿ 21 ಪಂದ್ಯಗಳು 10 ನಗರಗಳಲ್ಲಿ ನಡೆಯಲಿವೆ. ಪ್ರತಿ ತಂಡ ಕನಿಷ್ಠ ಮೂರು ಮತ್ತು ಗರಿಷ್ಠ ಐದು ಪಂದ್ಯಗಳನ್ನು ಆಡಲಿವೆ.

ಮೊದಲ ವಾರಾಂತ್ಯ: ಶನಿವಾರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ, ಭಾನುವಾರ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ.

ಮಾರ್ಚ್‌ 31ರಂದು ವಿಶಾಖಪಟ್ಟಣದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಏಪ್ರಿಲ್ 3 ರಂದು ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಗಲಿವೆ.

ಎರಡು ಗುಂಪು: 10 ತಂಡಗಳನ್ನು ಐದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡ ತಮ್ಮ ಗುಂಪಿನ ಇತರ ನಾಲ್ಕು ತಂಡಗಳನ್ನು ಎದುರಿಸುವ 14 ಪಂದ್ಯಗಳನ್ನು ತಲಾ ಎರಡು ಬಾರಿ ಆಡುತ್ತವೆ.

Read More
Next Story