ಆಂಧ್ರ ವಿದ್ಯಾರ್ಥಿನಿ ಸಾವು: ತೀರ್ಪಿನ  ಮರುಪರಿಶೀಲನೆಗೆ ಕೋರಿಕೆ
x

ಆಂಧ್ರ ವಿದ್ಯಾರ್ಥಿನಿ ಸಾವು: ತೀರ್ಪಿನ ಮರುಪರಿಶೀಲನೆಗೆ ಕೋರಿಕೆ


ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ(23)ಳ ಸಾವಿಗೆ ಕಾರಣವಾದ ಸಿಯಾಟಲ್ ಪೊಲೀಸ್ ಅಧಿಕಾರಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಅಮೆರಿಕದ ನ್ಯಾಯಾಲಯವು ಕೈಬಿಟ್ಟ ಹಿನ್ನೆಲೆಯಲ್ಲಿ ತೀರ್ಪು ಮರುಪರಿಶೀಲಿಸುವಂತೆ ಭಾರತ ಕೋರಿದೆ.

ಆಂಧ್ರಪ್ರದೇಶದ ಸ್ನಾತಕೋತ್ತರ ವಿದ್ಯಾರ್ಥಿನಿ ಜಾಹ್ನವಿ ಅವರಿಗೆ ಕಳೆದ ವರ್ಷ ಜನವರಿ 23 ರಂದು ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರ ಕಾರು ಡಿಕ್ಕಿ ಹೊಡೆದಿತ್ತು. ಕಾರು ಸುಮಾರು ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಡಿಕ್ಕಿಯ ರಭಸಕ್ಕೆ ಆಕೆಯ ದೇಹ 100 ಅಡಿ ದೂರ ಎಸೆಯಲ್ಪಟ್ಟಿತ್ತು.

ಡೇವ್‌ನ ಸಹೋದ್ಯೋಗಿ ಡೇನಿಯಲ್ ಆಡೆರರ್ ʻನಿನಗೇನೂ ಶಿಕ್ಷೆಯಾಗುವುದಿಲ್ಲʼ ಎಂದು ನಗುತ್ತ ಹೇಳುತ್ತಿದ್ದುದು ಬಾಡಿಕ್ಯಾಮ್ ಫೂಟೇಜ್‌ನಲ್ಲಿ ಕಂಡುಬಂದಿತ್ತು. ʻಪುರಾವೆಗಳ ಕೊರತೆʼಯಿಂದ ಅಧಿಕಾರಿ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಪ್ರಾಸಿಕ್ಯೂಟರ್ ಹೇಳಿದ್ದರು.

ʻಸಿಯಾಟಲ್ ಪೊಲೀಸರು ತನಿಖೆ ಪೂರ್ಣಗೊಳಿಸುವುದನ್ನು ಕಾಯುತ್ತಿದ್ದೇವೆʼ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಕುಟುಂಬಕ್ಕೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ರಾಯಭಾರ ಕಚೇರಿ ಹೇಳಿದೆ. ಸೂಕ್ತ ಪರಿಹಾರಕ್ಕಾಗಿ ಸಿಯಾಟಲ್ ಪೊಲೀಸ್ ಸೇರಿದಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಈಗ ಪ್ರಕರಣವನ್ನು ಪರಿಶೀಲನೆಗಾಗಿ ಸಿಯಾಟಲ್ ಸಿಟಿ ಅಟಾರ್ನಿ ಕಚೇರಿಗೆ ರವಾನಿಸಲಾಗಿದೆʼ ಎಂದು ಹೇಳಿದೆ.

ʻಜಾಹ್ನವಿ ಕಂದುಲಾ ಅವರ ದುರದೃಷ್ಟಕರ ಸಾವಿನ ಕುರಿತು ಕಿಂಗ್ ಕೌಂಟಿ ಪ್ರಾಸಿಕ್ಯೂಷನ್ ಅಟಾರ್ನಿ ಇತ್ತೀಚೆಗೆ ಬಿಡುಗಡೆ ಮಾಡಿದ ತನಿಖಾ ವರದಿಯಲ್ಲಿ, ಕಾನ್ಸುಲೇಟ್ ನಿಯೋಜಿತ ಕುಟುಂಬ ಪ್ರತಿನಿಧಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ…

— ಇಂಡಿಯಾ ಇನ್ ಸಿಯಾಟಲ್ (@IndiainSeattle) ಫೆಬ್ರವರಿ 23, 2024

Read More
Next Story