ಶೇಖ್ ಷಹಜಹಾನ್ ಆರು ವರ್ಷ ಅಮಾನತು
x

ಶೇಖ್ ಷಹಜಹಾನ್ ಆರು ವರ್ಷ ಅಮಾನತು


ಪಶ್ಚಿಮ ಬಂಗಾಳದ ಸಂದೇಶ್‌ಖಲಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣದ ಆರೋಪ ಹೊತ್ತಿರುವ ಟಿಎಂಸಿ ಶಾಸಕ ಶೇಖ್ ಷಹಜಹಾನ್ ಅವರನ್ನುಪಕ್ಷದಿಂದ ಆರು ವರ್ಷ ಅಮಾನತುಗೊಳಿಸಲಾಗಿದೆ.

55 ದಿನಗಳ ಬಳಿಕ ಅವರನ್ನು ಫೆ.29ರಂದು ಬಂಧಿಸಲಾಯಿತು. ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್‌ ಗುರುವಾರ ಹೇಳಿದರು. ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಲಿಯ ಮಹಿಳೆಯರ ನೇತೃತ್ವದಲ್ಲಿ ಶಾಸಕನ ಬಂಧನಕ್ಕೆ ಒತ್ತಾಯಿಸಿ ಜನವರಿಯಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಷಹಜಹಾನ್ ಮತ್ತು ಅವರ ಸಹಚರರು ಸಂದೇಶಖಲಿ ಗ್ರಾಮಸ್ಥರನ್ನು ಭಯದಲ್ಲಿ ಇಟ್ಟಿದ್ದರು ಮತ್ತು ಸ್ಥಳೀಯ ಪೋಲೀಸರು ಆತನೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ʻಶಾಜಹಾನ್ ಶೇಖ್ ಅವರನ್ನು 6 ವರ್ಷ ಪಕ್ಷದಿಂದ ಅಮಾನತುಗೊಳಿಸಿದ್ದೇವೆ. ಮಾತಿನಂತೆ ನಡೆದುಕೊಂಡಿದ್ದೇವೆ. ಆದರೆ, ಬಿಜೆಪಿ ಭ್ರಷ್ಟಾಚಾರ ಪ್ರಕರಣಗಳಿ ರುವ ಮತ್ತು ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ನಾಯಕರನ್ನು ಅಮಾನತು ಮಾಡಲು ಧೈರ್ಯ ಮಾಡಬೇಕಿದೆʼ ಎಂದು ಒಬ್ರಿಯಾನ್‌ ಹೇಳಿದರು.

Read More
Next Story