ಹಿಮಾಚಲ ಪ್ರದೇಶ: ಆರು ಅನರ್ಹ ಶಾಸಕರು ಸುಪ್ರೀಂ ಕೋರ್ಟಿಗೆ
x

ಹಿಮಾಚಲ ಪ್ರದೇಶ: ಆರು ಅನರ್ಹ ಶಾಸಕರು ಸುಪ್ರೀಂ ಕೋರ್ಟಿಗೆ


ಹೊಸದಿಲ್ಲಿ, ಮಾ.5- ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆ ಯಲ್ಲಿ ಅಡ್ಡ ಮತದಾನ ಮಾಡಿ ಅನರ್ಹಗೊಂಡಿರುವ ಆರು ಕಾಂಗ್ರೆಸ್ ಶಾಸಕರು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ ಈ ಶಾಸಕರು, ಆನಂತರ ಪಕ್ಷದ ವಿಪ್ ಧಿಕ್ಕರಿಸಿ ಅಧಿವೇಶನದಲ್ಲಿ ಮತದಾನದಿಂದ ದೂರವಿದ್ದರು. ಫೆಬ್ರವರಿ 29 ರಂದು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಈ ಆರು ಮಂದಿಯನ್ನು ಅನರ್ಹಗೊಳಿಸಿ ದ್ದರು.

ಅನರ್ಹ ಶಾಸಕರೆಂದರೆ, ರಾಜಿಂದರ್ ರಾಣಾ, ಸುಧೀರ್ ಶರ್ಮಾ, ಇಂದರ್ ದತ್ ಲಖನ್‌ಪಾಲ್, ದೇವಿಂದರ್ ಕುಮಾರ್ ಭುಟೂ, ರವಿ ಠಾಕೂರ್ ಮತ್ತು ಚೈತನ್ಯ ಶರ್ಮಾ. ಅನರ್ಹತೆ ನಂತರ ಸದನದ ಬಲ 68 ರಿಂದ 62 ಕ್ಕೆ ಮತ್ತು ಕಾಂಗ್ರೆಸ್ ಶಾಸಕರ ಸಂಖ್ಯೆ 40 ರಿಂದ 34 ಕ್ಕೆ ಕುಸಿದಿದೆ.

Read More
Next Story