ಹಮಾಸ್‌ ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿಯ ಅಮೆರಿಕ ವೀಸಾ ರದ್ದು; ಸ್ವಯಂ ಗಡೀಪಾರು
x

ಹಮಾಸ್‌ ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿಯ ಅಮೆರಿಕ ವೀಸಾ ರದ್ದು; ಸ್ವಯಂ ಗಡೀಪಾರು

ಸಿಬಿಪಿ ಹೋಮ್ ಅಪ್ಲಿಕೇಷನ್ ಅಮೆರಿಕ ಸರ್ಕಾರ ವಲಸೆ ಸಮಸ್ಯೆ ಪರಿಹಾರಕ್ಕೆ ರಚಿಸಿರುವ ವ್ಯವಸ್ಥೆಯಾಗಿದ್ದು, ಅಕ್ರಮವಾಗಿ ನೆಲೆಸಿರುವವರು ಸ್ವಯಂ ಆಗಿ ದೇಶ ತೊರೆಯಲು ಸಹಾಯ ಮಾಡುತ್ತದೆ.


ಗಾಜಾಪಟ್ಟಿಯಲ್ಲಿ ಇಸ್ರೇಲ್​ ಜತೆ ಸಮರಕ್ಕೆ ನಿಂಗಿರುವ ಉಗ್ರ ಸಂಘಟನೆ ಹಮಾಸ್‌ ಬೆಂಬಲಿಸಿದ್ದಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ಮೂಲದ ವಿದ್ಯಾರ್ಥಿನಿಯ ವೀಸಾವನ್ನು ಅಮೆರಿಕ ಸರ್ಕಾರ ರದ್ದುಗೊಳಿಸಲಾಗಿದೆ ಪರಿಣಾಮವಾಗಿ ಆಕೆ ಸ್ವಯಂ ಗಡೀಪಾರಾಗಿದ್ದಾಳೆ ಎಂದು ವರದಿಯಾಗಿದೆ.

ಭಾರತೀಯ ಪ್ರಜೆ ರಂಜನಿ ಶ್ರೀನಿವಾಸನ್ ಎಫ್-1 ವಿದ್ಯಾರ್ಥಿ ವೀಸಾದ ಮೂಲಕ ಅಮೆರಿಕಕ್ಕೆ ಹೋಗಿ ಅಧ್ಯಯನ ಮಾಡುತ್ತಿದ್ದರು. ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಆಕೆ, ಭಯೋತ್ಪಾದಕ ಸಂಘಟನೆ ಹಮಾಸ್ ಪರವಾಗಿದ್ದಳು ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ ತಿಳಿಸಿದೆ.

ಮಾರ್ಚ್ 5ರಂದು ಆಕೆಯ ವೀಸಾವನ್ನು ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ರದ್ದುಗೊಳಿಸಿತು. ಮಾರ್ಚ್ 11ರಂದು ಆಕೆ ಕಸ್ಟಮ್ಸ್ ಆ್ಯಂಡ್ ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಅಪ್ಲಿಕೇಷನ್ ಮೂಲಕ ಸ್ವಯಂ ಗಡೀಪಾರಾಗುವ ದೃಶ್ಯ ದಾಖಲಾಗಿದೆ ಎಂದು ಇಲಾಖೆ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್, "ಅಮೆರಿಕದಲ್ಲಿ ಅಧ್ಯಯನ ಮಾಡಲು ವೀಸಾ ಪಡೆಯುವುದು ವಿಶೇಷ ಸವಲತ್ತು. ಆದರೆ, ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವವರು ಅದಕ್ಕೆ ಅರ್ಹರಲ್ಲ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿದ್ದುಕೊಂಡು ಭಯೋತ್ಪಾದಕರನ್ನು ಬೆಂಬಲಿಸುವ ಒಬ್ಬರು ಸಿಬಿಪಿ ಹೋಮ್ ಅಪ್ಲಿಕೇಷನ್ ಬಳಸಿ ಸ್ವಯಂ ಗಡೀಪಾರಾಗಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ" ಎಂದು ಹೇಳಿದ್ದಾರೆ.

ಏನಿದು ಸಿಬಿಪಿ ಅಪ್ಲಿಕೇಷನ್​

"ಸಿಬಿಪಿ ಹೋಮ್ ಅಪ್ಲಿಕೇಷನ್ ಅಮೆರಿಕ ಸರ್ಕಾರ ವಲಸೆ ಸಮಸ್ಯೆ ಪರಿಹಾರಕ್ಕೆ ರಚಿಸಿರುವ ವ್ಯವಸ್ಥೆಯಾಗಿದ್ದು, ಅಕ್ರಮವಾಗಿ ನೆಲೆಸಿರುವವರು ಸ್ವಯಂ ಆಗಿ ದೇಶ ತೊರೆಯಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಷನ್‌ನಲ್ಲಿ ಅರ್ಜಿ ಸಲ್ಲಿಸಿ, ಸ್ವಯಂ ಗಡೀಪಾರಾಗುವ ಆಯ್ಕೆ ಪಡೆಯಬಹುದು. ಹಾಗಾದರೆ ಭವಿಷ್ಯದಲ್ಲಿ ಕಾನೂನುಬದ್ಧವಾಗಿ ಮತ್ತೆ ಅಮೆರಿಕಕ್ಕೆ ಮರಳಲು ಸಾಧ್ಯವಾಗುತ್ತದೆ. ಹಾಗೆ ಮಾಡದಿದ್ದರೆ, ಅಂತಹವರನ್ನು ಹುಡುಕಿ ನಾವೇ ಹೊರಹಾಕುತ್ತೇವೆ. ಅವರು ಮತ್ತೆ ಎಂದಿಗೂ ಅಮೆರಿಕಕ್ಕೆ ಬರಲು ಅವಕಾಶವಿರುವುದಿಲ್ಲ" ಎಂದು ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಅಧಿಕಾರಿ ತಿಳಿಸಿದ್ದಾರೆ.

Read More
Next Story