ಸ್ಯಾಂಟಿಯಾಗೋ ಮಾರ್ಟಿನ್ ಗ್ರೂಪ್:  ಡಿಎಂಕೆಗೆ 509 ಕೋಟಿ ರೂ.
x

ಸ್ಯಾಂಟಿಯಾಗೋ ಮಾರ್ಟಿನ್ ಗ್ರೂಪ್: ಡಿಎಂಕೆಗೆ 509 ಕೋಟಿ ರೂ.


ಚುನಾವಣಾ ಬಾಂಡ್‌ಗಳ ಪ್ರಮುಖ ಖರೀದಿದಾರ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್‌ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಗೆ 509 ಕೋಟಿ ರೂ. ದೇಣಿಗೆ ನೀಡಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತೋರಿಸಿವೆ. ಪ್ರತಿಯೊಂದು ಪಕ್ಷಕ್ಕೆ ನೀಡಿದ ದೇಣಿಗೆ ವಿವರಗಳನ್ನು ಚುನಾವಣೆ ಆಯೋಗ ಬಹಿರಂಗಪಡಿಸಿದ ಬಳಿಕ ಈ ಮಾಹಿತಿ ಗೊತ್ತಾಗಿದೆ.

2018 ರಲ್ಲಿ ಪರಿಚಯಿಸಿದ ಈ ಬಾಂಡ್‌ಗಳ ಮೂಲಕ ಬಿಜೆಪಿ ಗರಿಷ್ಠ 6,986.5 ಕೋಟಿ ರೂ. ಸಂಗ್ರಹಿಸಿದೆ, 2019-20ರಲ್ಲಿ ಗರಿಷ್ಠ 2,555 ಕೋಟಿ ರೂ. ಸ್ವೀಕರಿಸಿದೆ. ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ 1,397 ಕೋಟಿ ರೂ., ಕಾಂಗ್ರೆಸ್ 1,334 ಕೋಟಿ ರೂ., ಬಿಆರ್‌ಎಸ್‌ 1,322 ಕೋಟಿ ರೂ., ಒಡಿಶಾದ ಬಿಜೆಡಿ 944.5 ಕೋಟಿ ರೂ. ಮತ್ತು ನಾಲ್ಕನೇ ಸ್ಥಾನದಲ್ಲಿ ಡಿಎಂಕೆ 656.5 ಕೋಟಿ ರೂ. ಇದೆ. ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ 442.8 ರೂ., ಹಾಗೂ ಜೆಡಿ(ಎಸ್) 89.75 ಕೋಟಿ ರೂ. ಸ್ವೀಕರಿಸಿದೆ. ಇದರಲ್ಲಿ ಚುನಾವಣೆ ಬಾಂಡ್‌ಗಳ ಎರಡನೇ ಅತಿ ದೊಡ್ಡ ಖರೀದಿದಾರರಾದ ಮೇಘಾ ಇಂಜಿನಿಯ ರಿಂಗ್‌ನಿಂದ 50 ಕೋಟಿ ರೂ. ಪಡೆದಿದೆ. ಸ್ಯಾಂಟಿಯಾಗೋ ಮಾರ್ಟಿನ್‌ ನೀಡಿದ 1,368 ಕೋಟಿ ರೂ.ನಲ್ಲಿ ಶೇ.37 ರಷ್ಟು ಡಿಎಂಕೆಗೆ ಹೋಗಿದೆ.

ಡಿಎಂಕೆ ದಾನಿಗಳು: ಡಿಎಂಕೆಗೆ ಮೇಘಾ ಇಂಜಿನಿಯರಿಂಗ್ 105 ಕೋಟಿ, ಇಂಡಿಯಾ ಸಿಮೆಂಟ್ಸ್ 14 ಕೋಟಿ ಮತ್ತು ಸನ್ ಟಿವಿ 100 ಕೋಟಿ ರೂ. ನೀಡಿವೆ. ಡಿಎಂಕೆ ದಾನಿಗಳ ಗುರುತನ್ನು ಬಹಿರಂಗಪಡಿಸಿದ ಕೆಲವೇ ರಾಜಕೀಯ ಪಕ್ಷಗಳಲ್ಲಿ ಒಂದು. ಆದರೆ ಬಿಜೆಪಿ, ಕಾಂಗ್ರೆಸ್, ಟಿಎಂಸಿ ಮತ್ತು ಎಎಪಿ ಈ ಮಾಹಿತಿ ಬಹಿರಂಗಪಡಿಸಿಲ್ಲ.

ಟಿಡಿಪಿ 181.35 ಕೋಟಿ ರೂ., ಶಿವಸೇನೆ 60.4 ಕೋಟಿ, ಆರ್‌ಜೆಡಿ 56 ಕೋಟಿ, ಸಮಾಜವಾದಿ ಪಕ್ಷ 14.05 ಕೋಟಿ, ಅಕಾಲಿದಳ 7.26 ಕೋಟಿ, ಎಐಎಡಿಎಂಕೆ 6.05 ಕೋಟಿ, ನ್ಯಾಷನಲ್ ಕಾನ್ಫರೆನ್ಸ್ 50 ಲಕ್ಷ ರೂ. ಪಡೆದುಕೊಂಡಿವೆ. ಸಿಪಿಐ(ಎಂ) ಯಾವುದೇ ಹಣ ಸ್ವೀಕರಿಸುವುದಿಲ್ಲ ಎಂದು ಘೋಷಿಸಿದೆ.

ಸುಪ್ರೀಂ ಕೋರ್ಟ್‌ ತಪರಾಕಿ: ಎಸ್‌ ಬಿಐಗೆ ಸುಪ್ರೀಂ ಕೋರ್ಟ್‌ ತಪರಾಕಿ ನೀಡಿದ ಬಳಿಕ ಮಾಹಿತಿಯನ್ನು ಹಂಚಿಕೊಂಡಿತ್ತು.ಚುನಾವಣೆ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ದತ್ತಾಂಶವನ್ನು ಪ್ರಕಟಿಸಿದೆ. ಲೋಕಸಭೆ ಚುನಾವಣೆಯ ದಿನಾಂಕ ಘೋಷಿಸಿದ ಒಂದು ದಿನದ ನಂತರ ಆಯೋಗ ದತ್ತಾಂಶ ಬಿಡುಗಡೆ ಮಾಡಿದೆ. ಚುನಾವಣೆ ಆಯೋಗ ಕಳೆದ ಗುರುವಾರ ಬಾಂಡ್‌ಗಳನ್ನು ಖರೀದಿಸಿದ ಘಟಕಗಳು ಮತ್ತು ವ್ಯಕ್ತಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ʻಲಾಟರಿ ಕಿಂಗ್ʼ ಎಂದು ಕರೆಯಲ್ಪಡುವ ಸ್ಯಾಂಟಿಯಾಗೊ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 2019 ಮತ್ತು 2024 ರ ನಡುವೆ 1368 ಕೋಟಿ ರೂ. ದೇಣಿಗೆ ನೀಡಿದೆ.

Read More
Next Story