ಪ್ಯಾರಿಸ್:‌ ರೈತರಿಂದ ಟ್ರ್ಯಾಕ್ಟರ್‌ ಮೆರವಣಿಗೆ
x

ಪ್ಯಾರಿಸ್:‌ ರೈತರಿಂದ ಟ್ರ್ಯಾಕ್ಟರ್‌ ಮೆರವಣಿಗೆ


ಪ್ಯಾರಿಸ್, ಫೆ 23 (ಎಪಿ)- ಸರ್ಕಾರದಿಂದ ಹೆಚ್ಚು ಬೆಂಬಲ ಮತ್ತು ಸರಳ ನಿಯಂತ್ರಣಗಳಿಗೆ ಒತ್ತಾಯಿಸಿ ರೈತರು ಪ್ಯಾರಿಸ್ಸಿಗೆ ಟ್ರ್ಯಾಕ್ಟರ್‌ ಮೆರವಣಿಗೆ ಮಾಡಿದರು.

ರೈತರ ಒಕ್ಕೂಟವಾದ ರೂರಲ್‌ ಕೋಆರ್ಡಿನೇಷನ್‌ ನೇತೃತ್ವದಲ್ಲಿ ಧ್ವಜಗಳನ್ನು ಹೊತ್ತ ಹತ್ತಾರು ಟ್ರ್ಯಾಕ್ಟರ್‌ಗಳು ರಾಜಧಾನಿಯ ಪಶ್ಚಿಮ ಭಾಗದಲ್ಲಿ ಸಂಚರಿಸಿದವು. ನಂತರ ಪ್ರತಿಭಟನಾಕಾರರು ಟ್ರ್ಯಾಕ್ಟರ್‌ಗಳೊಂದಿಗೆ ಐಫೆಲ್ ಟವರ್ ಹಿನ್ನೆಲೆಯಲ್ಲಿ ಸೀನ್ ನದಿಯ ಸೇತುವೆ ಮೇಲೆ ಪೋಸ್ ನೀಡಿದರು.

ಕಡಿಮೆ ಆದಾಯ ಗಳಿಕೆ, ಅಧಿಕ ನಿಯಂತ್ರಣ ಮತ್ತು ವಿದೇಶದಿಂದ ಅನ್ಯಾಯದ ಸ್ಪರ್ಧೆ ಎದುರಿಸಲು ಸರ್ಕಾರವು 400 ದಶಲಕ್ಷ ಯುರೋ( 433 ದಶಲಕ್ಷ ಡಾಲರ್)‌ ನೀಡಿದ ಬಳಿಕ ರೈತರು ಪ್ಯಾರಿಸ್ ಸುತ್ತಮುತ್ತ ಮತ್ತು ದೇಶದ ಇತರೆಡೆ ರಸ್ತೆ ತಡೆಗಳನ್ನು ತೆಗೆದುಹಾಕಿದ್ದರು. ಇತ್ತೀಚಿನ ಪ್ರತಿಭಟನೆ ಮೂರು ವಾರಗಳ ನಂತರ ಈ ಘಟನೆ ನಡೆದಿದೆ.

ʻನಮ್ಮ ಕೃಷಿಯನ್ನು ಉಳಿಸಿʼ ಎಂದು ಗ್ರಾಮೀಣ ಸಮನ್ವಯವು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಹೇಳಿದೆ. ಟ್ರ್ಯಾಕ್ಟರ್ ವೊಂದರಲ್ಲಿ ʻಹೊಲದಲ್ಲಿ ಸಾವು ಸಂಭವಿಸಿದೆʼ ಎಂದು ಫಲಕ ಅಳವಡಿಸಲಾಗಿತ್ತು. ಇದರಿಂದ ಪ್ಯಾರಿಸ್ಸಿನ ಪೂರ್ವ ಭಾಗ ಮತ್ತು ರಿಂಗ್ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಚಾರ ನಿಧಾನಗೊಂಡಿತ್ತು.

ಈ ಪ್ರತಿಭಟನೆಯು ಯುರೋಪಿಯನ್‌ ಯೂನಿಯನ್‌ ನ ಕೃಷಿ ನೀತಿಗಳು, ಅಧಿಕಾರಶಾಹಿ ಮತ್ತು ಒಟ್ಟಾರೆ ವ್ಯಾಪಾರ ಪರಿಸ್ಥಿತಿಗಳ ವಿರುದ್ಧ ಯುರೋಪ್‌ನಲ್ಲಿ ನಡೆಯುತ್ತಿರುವ ವ್ಯಾಪಕ ಆಂದೋಲನದ ಭಾಗವಾಗಿದೆ.

ರಾಸಾಯನಿಕಗಳ ಬಳಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಮಿತಿ ಹೇರುವಿಕೆಗೆ ಕರೆ ನೀಡುವ ಗ್ರೀನ್ ಡೀಲ್‌ನಂತಹ 27 ರಾಷ್ಟ್ರಗಳ ಒಕ್ಕೂಟದ ಪರಿಸರ ನೀತಿಗಳು ತಮ್ಮ ವ್ಯವಹಾರಕ್ಕೆ ಮಿತಿ ಹೇರುತ್ತವೆ ಮತ್ತು ತಮ್ಮ ಉತ್ಪನ್ನಗಳು ಯುರೋಪಿಯನ್‌ ಯೂನಿಯನ್‌ ಉತ್ಪನ್ನಗಳಿಗಿಂತ ಹೆಚ್ಚು ದುಬಾರಿಯಾಗಿಸುತ್ತದೆ ಎಂದು ರೈತರು ದೂರಿದ್ದಾರೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಶನಿವಾರ ಪ್ಯಾರಿಸ್ ಕೃಷಿ ಮೇಳಕ್ಕೆ ಭೇಟಿ ನೀಡಲಿದ್ದಾರೆ. ರೈತರು, ಸೂಪರ್‌ ಮಾರ್ಕೆಟ್‌ ಸಿಇಒಗಳು ಮತ್ತು ಪರಿಸರ ಗುಂಪುಗಳ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ಪ್ಯಾರಿಸ್ ಕೃಷಿ ಮೇಳ ಪ್ರಪಂಚದ ಅತಿ ದೊಡ್ಡ ಕೃಷಿ ಮೇಳಗಳಲ್ಲಿ ಒಂದು.

Read More
Next Story